ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿರುವುದೇ ನನಗೆ ಹೆಮ್ಮೆ: ಸಚಿವ ಬೈರತಿ ಸುರೇಶ್‌

By Kannadaprabha NewsFirst Published Jan 28, 2024, 8:10 PM IST
Highlights

ಸಿದ್ದರಾಮಯ್ಯ ಸಿಎಂ ಆಗದೆ ಇದ್ದಿದ್ರೆ,ಬೇರೆ ಯಾರೇ ಆಗಿದ್ರೆ ರಾಜ್ಯದಲ್ಲಿ ಐದು ಗ್ಯಾರಂಟಿ ಜಾರಿಗೆ ತರಲು ಆಗುತ್ತಿರಲಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು. 

ಗುಂಡ್ಲುಪೇಟೆ (ಜ.28): ಸಿದ್ದರಾಮಯ್ಯ ಸಿಎಂ ಆಗದೆ ಇದ್ದಿದ್ರೆ,ಬೇರೆ ಯಾರೇ ಆಗಿದ್ರೆ ರಾಜ್ಯದಲ್ಲಿ ಐದು ಗ್ಯಾರಂಟಿ ಜಾರಿಗೆ ತರಲು ಆಗುತ್ತಿರಲಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು. ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಶ್ರೀ ಕನಕದಾಸ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ೫೨೪ ನೇ ಶ್ರೀ ಕನಕದಾಸ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ಸಿದ್ದರಾಮಯ್ಯ ಬಡವರ ಪರವಾಗಿದ್ದರಿಂದಲೇ ಐದು ಗ್ಯಾರಂಟಿಗಳನ್ನು ೮ ತಿಂಗಳಲ್ಲಿ ಜಾರಿಗೊಳಿಸಿದರು ಎಂದರು. ಸಿದ್ದರಾಮಯ್ಯ ಬಸವಾದಿ ಶರಣರು, ದಾಸ ಶ್ರೇಷ್ಠರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಸಮ ಸಮಾಜದ ನಿರ್ಮಾಣದ ಕನಸಿನಂತೆ ರಾಜ್ಯವನ್ನು ಆಳುತ್ತಿದ್ದಾರೆ. ಸಿದ್ದರಾಮಯ್ಯ ಇರೋ ತನಕ ಬಡವರ ಪರವಾಗಿಯೇ ಇರುತ್ತಾರೆ ಎಂದರು.

ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಜನಪರ. ನಾನು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಿರುವುದೇ ನನಗೆ ಹೆಮ್ಮೆ. ಬಡವರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಇರೋ ಕಾಳಜಿ, ಪ್ರೀತಿ, ವಿಶ್ವಾಸ ಬೇರೆ ರಾಜಕಾರಣಿಗಳಲ್ಲಿ ಕಾಣುವುದು ಕಷ್ಟ, ನುಡಿದಂತೆ ನಡೆದ ಸರ್ಕಾರ ಮತ್ತು ಸಿದ್ದರಾಮಯ್ಯ ಮಾತ್ರ ಎಂದರು. ಸಿದ್ದರಾಮಯ್ಯ ಬಡವರು ಆರ್ಥಿಕವಾಗಿ ಸಬಲರಾಗಲಿ ಎಂದು ಐದು ಗ್ಯಾರಂಟಿಗಳಿಗೆ ೬೦ ಸಾವಿರ ಕೋಟಿಯನ್ನು ಬಜೆಟ್‌ನಲ್ಲಿ ಮೀಸಲು ಇಟ್ಟಿದ್ದಾರೆ. ಸಿದ್ದರಾಮಯ್ಯ ಸರ್ವ ಜನೋ ಸುಖಿನೋ ಭವಂತು ಎನ್ನುವ ಬದ್ಧತೆ ಹಾಗೂ ಸಾಮಾಜಿಕ ನ್ಯಾಯ ಪರವಾಗಿ ಇದ್ದಾರೆ ಎಂದರು.

Latest Videos

ಮುಂದಿನ ಬಜೆಟ್‌ನಲ್ಲಿ ಕೋಲಾರ ನಗರಕ್ಕೆ ರಿಂಗ್ ರೋಡ್, ಮೆಡಿಕಲ್ ಕಾಲೇಜ್: ಸಚಿವ ಭೈರತಿ ಸುರೇಶ್

2ನೇ ಬಾರಿಗೆ ಸಿಎಂ: ಸಿದ್ದರಾಮಯ್ಯ ೨೦೧೩ ರಲ್ಲಿ ಸಿಎಂ ಆಗಿ ಐದು ವರ್ಷ ಪೂರೈಸಿದರು. ಈಗ ಮತ್ತೆ ಆಕಾಶದಿಂದ ಇಳಿದು ಬಂದು ಸಿಎಂ ಆಗಲಿಲ್ಲ. ೧೩೫ ಶಾಸಕರ ಬೆಂಬಲ ಹಾಗೂ ಹೈ ಕಮಾಂಡ್‌ ಆಶೀರ್ವಾದದಿಂದ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಅವರ ಕೈ ಬಲಪಡಿಸಿದರೆ ಕಾಂಗ್ರೆಸ್‌ ಕೈ ಬಲಪಡಿಸಿದಂತೆ. ಕಾಂಗ್ರೆಸ್‌ ಬಲಪಡಿಸಿದರೆ ರಾಜ್ಯದ ಜನತೆಗೆ ಕೈ ಬಲ ಪಡಿಸಿದಂತಾಗಲಿದೆ ಎಂದರು.

ಈ ವೇಳೆ ಮಾಜಿ ಸಂಸದ ಎಂ.ಶಿವಣ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿದರು. ಕೆ.ಆರ್.ನಗರ ಗುರುಪೀಠದ ಶ್ರೀಗಳು ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಶಾಸಕ ಡಿ.ರವಿಶಂಕರ್‌, ದರ್ಶನ್‌ ಧ್ರುವನಾರಾಯಣ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಕಾಡ ಮಾಜಿ ಅಧ್ಯಕ್ಷ ಎಚ್.‌ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್‌, ಕುರುಬರ ಸಂಘದ ನಣಜೇಗೌಡ, ಮುಖಂಡರಾದ ರಮೇಶ್‌, ಎಸ್‌ಆರ್‌ಎಸ್‌ ರಾಜು, ಬಿ.ಎಂ.ಮುನಿರಾಜು, ಆರ್.ಮಧು ಕುಮಾರ್‌, ಎಚ್.ಸಿ.ಬಸವರಾಜು, ಶಿವಕುಮಾರ್‌,ರಘು,ಪೊಲೀಸ್‌ ಪ್ರಕಾಶ್‌, ಎಚ್.ಎನ್.ಬಸವರಾಜು, ಆಲತ್ತೂರು ಜಯರಾಂ ಸೇರಿದಂತೆ ಸಾವಿರಾರು ಮಂದಿ ಇದ್ದರು.

ನನಗೆ,ಯತೀಂದ್ರಗೆ ಗಣೇಶ್‌ ಪರಮಾಪ್ತ: ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವಪ್ರಸಾದ್‌ ಸಿದ್ದರಾಮಯ್ಯ ಅವರಿಗೆ ಆಪ್ತರು, ನನಗೆ ಮತ್ತು ಯತೀಂದ್ರ ಸಿದ್ದರಾಮಯ್ಯಗೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಪರಮಾಪ್ತ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು. ಗುಂಡ್ಲುಪೇಟೆ ಕ್ಷೇತ್ರದ ಜನರು ಒಳ್ಳೆಯ ಶಾಸಕ ಗಣೇಶ್‌ ಪ್ರಸಾದ್‌ ರನ್ನು ಗೆಲ್ಲಿಸಿದ್ದೀರಾ! ಗಣೇಶ್‌ ಪ್ರಸಾದ್‌ ಗುಂಡ್ಲುಪೇಟೆ ಜನತೆಗೆ ಕುಡಿವ ನೀರಿಗಾಗಿ ಅನುದಾನ ಕೇಳಿದಾಗ ಮರು ಮಾತನಾಡದೆ ೧೩೫ ಕೋಟಿ ಹಣ ನೀಡಿದ್ದೇನೆ. ಆದಷ್ಟು ಬೇಗ ಕೆಲಸ ಮುಗಿಸಿ ಉದ್ಘಾಟನೆಗೆ ಕರೆಯಿರಿ ಬರುತ್ತೇನೆ ಎಂದರು.

ಸಹಬಾಳ್ವೆಯೇ ಕಾಂಗ್ರೆಸ್ ಅಜೆಂಡಾ: ಸಚಿವ ಕೆ.ಎಚ್.ಮುನಿಯಪ್ಪ

ಶಾಲಾ ಕಾಲೇಜು ಸ್ಥಾಪನೆಗೆ ವೈಯಕ್ತಿಕವಾಗಿ ಹಣ ಕೊಡುವೆ: ರಾಜ್ಯದಲ್ಲಿ ೫೦ ಲಕ್ಷ ಕುರುಬರು ಇದ್ದಾರೆ ಜಿಲ್ಲೆ ಹಾಗೂ ತಾಲೂಕಲ್ಲಿ ಸಮಾಜಕ್ಕೆ ಹಾಸ್ಟೆಲ್‌, ಶಾಲಾ, ಕಾಲೇಜುಗಳಿಲ್ಲದ ಕಾರಣ ಸರ್ಕಾರದ ಅನುದಾನದ ಜೊತೆಗೆ ನನ್ನ ಸ್ವಂತ ಹಣವನ್ನು ಕೊಡುತ್ತೇನೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಘೋಷಿಸಿದರು. ಸಮಾರಂಭದಲ್ಲಿ ಮಾತನಾಡಿ ೫೦ ಲಕ್ಷದಷ್ಟು ಕುರುಬರು ರಾಜ್ಯದಲ್ಲಿ ಇದ್ದರೂ ಜನಸಂಖ್ಯೆಗೆ ಅನುಗುಣವಾಗಿ ಅನುದಾದ ಸಿಗದ ಕಾರಣ ಸಮಾಜಕ್ಕೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹಾಸ್ಟೆಲ್‌ ಹಾಗೂ ಶಾಲಾ, ಕಾಲೇಜುಗಳಿಲ್ಲ ಎಂದರು.

click me!