ಮಡದಿ..  ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!

ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!

Published : Jul 04, 2026, 01:36 PM IST
ಮೂರು ವರ್ಷಗಳ ಹೋರಾಟದ ನಂತರ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್, ಮೊದಲ 30 ದಿನಗಳಲ್ಲಿ ತಮ್ಮ ಆಡಳಿತದ ಝಲಕ್ ತೋರಿಸಿದ್ದಾರೆ. ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡುತ್ತಾ, ತಮ್ಮ ರಾಜಕೀಯ ಚದುರಂಗದಾಟದ ಶೈಲಿಯಲ್ಲಿಯೇ ಅವರು ತೆಗೆದುಕೊಂಡ 10 ದಿಟ್ಟ ನಿರ್ಧಾರಗಳು ಕುತೂಹಲ ಮೂಡಿಸಿವೆ.

ಮೂರು ವರ್ಷ ಮೌನ ಹೋರಾಟದ ಮೂಲಕ ಸಿಎಂ ಸಿಂಹಾಸನಕ್ಕೆ ಅಧಿಪತಿಯಾಗಿದ್ದಾರೆ ಡಿ.ಕೆ.ಶಿವಕುಮಾರ್. ಅಧಿಕಾರ ವಹಿಸಿಕೊಂಡ ಒಂದು ತಿಂಗಳಲ್ಲಿ ತಮ್ಮ ಆಡಳಿತ ಹೇಗಿರುತ್ತೆ ಅನ್ನೋದ್ರ ಝಲಕ್ ತೋರಿಸಿದ್ದಾರೆ ಕನಕಾಧಿಪತಿ. ಇದಕ್ಕೆ ಅವರು ತೆಗೆದುಕೊಂಡಿರೋ ಆ 10 ದಿಟ್ಟ ನಿರ್ಧಾರಗಳೇ ಸಾಕ್ಷಿ. ಆಡಳಿತದ ಜೊತೆಗೆ, ಸಿಎಂ ಗದ್ದುಗೆ ಏರಿದ ಬಳಿಕ ಡಿಕೆ ಪಾಲಿಟಿಕ್ಸ್ ಸ್ಟೈಲ್​ನಲ್ಲಿಯೂ ಒಂದಿಷ್ಟು ಬದಲಾವಣೆಗಳಾಗಿವೆ. ಹಾಗಿದ್ರೆ  ಕಳೆದ 30 ದಿನಗಳಲ್ಲಿ ಡಿಕೆ ತೆಗೆದುಕೊಂಡಿರೋ ಆ ದಶ ದಿಟ್ಟ ನಿರ್ಧಾರಗಳು ಯಾವು..? ಮುಖ್ಯಮಂತ್ರಿ ಸಿಂಹಾಸನವನ್ನ ಅಲಂಕರಿಸಿದ ಬಳಿಕ ಹೇಗೆ ಬದಲಾಗಿದೆ ಕನಕಪುರ ಬಂಡೆ ಪಾಲಿಟಿಕ್ಸ್ ಸ್ಟೈಲ್.?

ಮೊದಲಿನಿಂದಲೂ ಅಭಿವೃದ್ಧಿ ಯೋಜನೆಗಳ ಕಡೆಗೆ ಹೆಚ್ಚು ಒತ್ತು ಕೊಡೋ ನಾಯಕ ಡಿ.ಕೆ.ಶಿವಕುಮಾರ್. ಮುಖ್ಯಮಂತ್ರಿಯಾದ ಬಳಿಕವೂ ಅದನ್ನವರು ಮುಂದುವರೆಸಿದ್ದಾರೆ. ಕಳೆದ 30 ದಿನದಲ್ಲಿ ಅವರು ಮಾಡಿರೋ ಬೃಹತ್ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗಳೆ ಇದಕ್ಕೆ ಸಾಕ್ಷಿ. ಇವುಗಳ ಜೊತೆಗೆ ತಮ್ಮ ಕನಸಿನ ಯೋಜನೆಗಳನ್ನೂ ಜಾರಿಗೊಳಿಸೋ ನಿಟ್ಟಿನಲ್ಲಿಯೂ ಡಿಕೆ ದಿಟ್ಟ ಹೆಜ್ಜೆಗಳನ್ನ ಇಡ್ತಿದ್ದಾರೆ

ರಾಜಕೀಯದಲ್ಲಿ ಡಿ.ಕೆ.ಶಿವಕುಮಾರ್ ಪಕ್ಕಾ ಚುದುರಂಗದಾಟಗಾರ. ರಿಸ್ಕ್ ತೆಗೆದುಕೊಂಡು ದೊಡ್ಡ ಸಕ್ಸಸ್ ಪಡೆಯೋದು ಅವರ ಟ್ರೇಡ್ ಮಾರ್ಕ್​. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರವೂ ಆ ಹಳೇ ಸ್ಟೈಲ್ ಬದಲಾಗಿಲ್ಲ.  ಒಂದು ದಿಟ್ಟ ನಿರ್ಧಾರದ ಮೂಲಕ ಎರಡು ಗುರಿಯನ್ನ ಮುಟ್ಟಿದ್ದಾರೆ ಸಿಎಂ ಡಿ.ಕೆ.ಶಿವಕುಮಾರ್.
 

21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
Read more