ಕಾಂಗ್ರೆಸ್‌ನದ್ದು ಪುಕ್ಕಟ್ಟೆ ಕಾರ್ಡ್‌: ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ ಲೇವಡಿ

By Kannadaprabha NewsFirst Published Mar 17, 2023, 9:02 PM IST
Highlights

ಕಾಂಗ್ರೆಸ್‌ ಪಕ್ಷದವರು ಕೊಡುತ್ತಿರುವ ಗ್ಯಾರಂಟಿ ಕಾರ್ಡ್‌ ಪುಕ್ಕಟ್ಟೆಕಾರ್ಡ್‌ ಆಗಿ ಮಾರ್ಪಟ್ಟಿದ್ದು, ಹೆಣ್ಣುಮಕ್ಕಳು ಅದನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ಪಕ್ಷದ ಕಾರ್ಯ ವೈಖರಿ ವಿರುದ್ಧ ಲೇವಡಿ ಮಾಡಿದರು.

ಮಧುಗಿರಿ (ಮಾ.17): ಕಾಂಗ್ರೆಸ್‌ ಪಕ್ಷದವರು ಕೊಡುತ್ತಿರುವ ಗ್ಯಾರಂಟಿ ಕಾರ್ಡ್‌ ಪುಕ್ಕಟ್ಟೆ ಕಾರ್ಡ್‌ ಆಗಿ ಮಾರ್ಪಟ್ಟಿದ್ದು, ಹೆಣ್ಣುಮಕ್ಕಳು ಅದನ್ನು ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ಪಕ್ಷದ ಕಾರ್ಯ ವೈಖರಿ ವಿರುದ್ಧ ಲೇವಡಿ ಮಾಡಿದರು. ಮಧುಗಿರಿಗೆ ಆಗಮಿಸಿದ ವಿಜಯ ಸಂಕಲ್ಪ ಯಾತ್ರೆಗೆ ಗ್ರಾಮ ದೇವತೆ ದಂಡಿಮಾರಮ್ಮ ದೇವಿಗೆ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರೋಡ್‌ ಶೋ ನಡೆಸಿ ಪಾವಗಡ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್‌ನವರಿಗೆ ಜನರ ಮೇಲೆ ನಂಬಿಕೆ, ವಿಶ್ವಾಸವಿಲ್ಲದ ಕಾರಣ ಇಂತಹ ಕಾರ್ಡ್‌ಗಳನ್ನು ಹಂಚುತ್ತಿದ್ದು ಅವುಗಳನ್ನು ಕಸದ ಬುಟ್ಟಿಗೆ ಹಾಕಿ ಭರವಸೆಯ ಬೆಳಕು ಬಿಜೆಪಿಗೆ ಮತ ನೀಡಿ ಎಂದರು. ಪ್ರತಿ ಕುಟುಂಬಕ್ಕೆ 75 ಯೂನಿಟ್‌ ವಿದ್ಯುತ್‌ ಸಾಕು, ಆದರೆ ಇವರು 200 ಯೂನಿಟ್‌ ವಿದ್ಯುತ್‌ ನೀಡುವುದಾಗಿ ಓಟಿಗಾಗಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಆದ್ದರಿಂದ ಜನತೆ ಎಚ್ಚರದಿಂದಿರಬೇಕು. ಇನ್ನೂಳಿದ 125 ಯುನಿಟ್‌ ವಿದ್ಯುತನ್ನು ಏನೂ ಮಾಡುತ್ತಾರೆ ನೀವೇ ಯಾಚಿಸಿ ಎಂದು ಪ್ರಶ್ನಿಸಿದರು. ಟಿಕೆಟ್‌ಗಾಗಿ ಎರಡು ಬಣಗಳ ಶಕ್ತಿ ಪ್ರದರ್ಶನ ನಡೆಯಿತು. 

ಕುಡಿಯುವ ನೀರಿನ ಕೊರತೆ ನೀಗಿಸಿದ ಬಿಜೆಪಿ: ಸಿಎಂ ಬೊಮ್ಮಾಯಿ

ನಿವೃತ್ತ ಕೆಎಎಸ್‌ ಅಧಿಕಾರಿ ಎಲ್‌.ಸಿ.ನಾಗರಾಜು ಮತ್ತು ಯುವ ಮುಖಂಡ ಭೀಮನಕುಂಟೆ ಹನುಮಂತೇಗೌಡ ಅಭಿಮಾನಿಗಳು ಬಿಜೆಪಿ ಬ್ಯಾನರ್‌ ಬಾವುಟ ಹಿಡಿದು ದಂಡಿಮಾರಮ್ಮ ದೇಗುಲದಿಂದ ಹಿಡಿದು ಪಾವಗಡ ವೃತ್ತದವರೆಗೂ ತಮ್ಮ ನಾಯಕರ ಪರವಾಗಿ ಘೋಷಣೆಗಳನ್ನು ಕೂಗುವ ಮೂಲಕ ಮುಖ್ಯಮಂತ್ರಿಗಳ ಗಮನ ಸಳೆದರು. ರೋಡ್‌ ಶೋ ಉದ್ದಕ್ಕೂ ವಿವಿಧ ಕಲಾ ತಂಡಗಳೂಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು.

ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದ ಕೆಎಎಸ್‌ ಅಧಿಕಾರಿ ಹಾಗೂ ತಾಲೂಕಿನ ಚಿಕ್ಕಮಾಲೂರು ಗ್ರಾಮದ ಜನಮುಖಿ ಸಂಸ್ಥೆಯ ಅಧ್ಯಕ್ಷ ಎಲ್‌.ಸಿ.ನಾಗರಾಜು ಬಸವರಾಜು ಬೊಮ್ಮಾಯಿ ಹಾಗೂ ಸಚಿವರಾದ ಆರ್‌.ಅಶೋಕ್‌, ಡಾ.ಸುಧಾಕರ್‌ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ರೋಡ್‌ ಶೋ ವೇಳೆ ಸಚಿವರಾದ ಆರ್‌.ಆಶೋಕ್‌, ಡಾ.ಸುಧಾಕರ್‌, ಮಧುಗಿರಿ ತಾಲೂಕು ಮಂಡಲಾಧ್ಯಕ್ಷ ಪಿ.ಎಲ್‌.ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್‌, ಎಲ್‌.ಸಿ.ನಾಗರಾಜು, ಯುವ ಮುಂಖಡ ಹನುಮಂತೇಗೌಡ, ಮಾಜಿ ಶಾಸಕ ಗಂಗಹನುಮಯ್ಯ ಸೇರಿದಂತೆ ಅನೇಕರಿದ್ದರು.

ಬಿಜೆಪಿ ಯಾತ್ರೆಗೆ ಸ್ಮೃತಿ, ಚೌಹಾಣ್‌ ಮೆರುಗು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿರುವ ಬಿಜೆಪಿ, ಗುರುವಾರ ನವಲಗುಂದ, ಹೊಸಪೇಟೆ, ತುರುವೆಕೆರೆ, ಚಿಕ್ಕಮಗಳೂರುಗಳಲ್ಲಿ ವಿಜಯಸಂಕಲ್ಪ ಯಾತ್ರೆ ನಡೆಸಿತು. ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಸುಮಾರು 2 ಕಿ.ಮೀ.ನಷ್ಟುಭರ್ಜರಿ ರೋಡ್‌ ಶೋ ನಡೆಸಿ, ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮೇಥಿಯಲ್ಲಿ ಸೋತಿರುವ ಗಾಂಧಿ ಪರಿವಾರ ಇದೀಗ ವಿದೇಶದಲ್ಲಿ ಭಾರತಕ್ಕೆ ಅವಮಾನ ಮಾಡುವ ಕೆಲಸ ಮಾಡುತ್ತಿದೆ ಎಂದು ರಾಹುಲ್‌ ವಿರುದ್ಧ ಕಿಡಿ ಕಾರಿದರು. ಈ ಮಧ್ಯೆ, ಹೊಸಪೇಟೆಯಲ್ಲಿ ರೋಡ್‌ ಶೋ ನಡೆಸಿದ ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ನಮ್ಮ ದೇಶದಲ್ಲಿ ಅಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ಮೋದಿ ಪರ ಘೋಷಣೆ ಮೊಳಗುತ್ತಿದೆ ಎಂದರು.

ಕಾಂಗ್ರೆಸ್‌ ಗೆಲ್ಲಲ್ಲ, ಅವರ ಗ್ಯಾರಂಟಿ ಕಾರ್ಡ್‌ ತಗೊಂಡು ಉಪ್ಪಿನಕಾಯಿ ಹಾಕಬೇಕೆ: ಸಿಎಂ ಬೊಮ್ಮಾಯಿ

ರಾಜ್ಯದ ಉದ್ದಗಲಕ್ಕೂ ಬಿಜೆಪಿ ಪಕ್ಷದ ಸುನಾಮಿಯಿದ್ದು, ಬರುವ ಅಸೆಂಬ್ಲಿ ಚುನಾವಣೆಯಲ್ಲಿ ಇದು ಮಧುಗಿರಿಗೂ ವಿಸ್ತರಿಸಲಿದೆ. ರಾಜ್ಯದಲ್ಲಿ ಜನಪರ ಆಡಳಿತ ಮಾಡಲು ಬಿಜೆಪಿ ಗೆಲ್ಲಿಸಿ ಈ ಸಲ ಮಧುಗಿರಿ ಕ್ಷೇತ್ರದಲ್ಲೂ ಕಮಲ ಅರಳವುದು ಶತಃಸಿದ್ಧ. 
-ಬಸವರಾಜ ಬೊಮ್ಮಾಯಿ, ಸಿಎಂ

click me!