* ಕೇಂದ್ರ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್
* ಕುಟುಂಬ ಸಮೇತ ದಿಲ್ಲಿಗೆ ಹೊರಟ ಕರ್ನಾಟಕದ ಸಂಸದ
* ಕುತೂಹಲ ಮೂಡಿದ ಸಂಸದನ ದೆಹಲಿ ಪ್ರಯಾಣ
ಬೆಂಗಳೂರು/ನವದೆಹಲಿ, (ಜುಲೈ. 06): ಗುರುವಾರ ಅಂದ್ರೆ ಜುಲೈ 8ರಂದು ಬಹು ನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ.
ಈ ಹಿನ್ನೆಲೆ ರಾಜ್ಯದಿಂದ ಯಾರಿಗೆಲ್ಲಾ ಕೇಂದ್ರದಲ್ಲಿ ಸ್ಥಾನಮಾನ ಸಿಗಬಹುದು? ಸೆಂಟ್ರಲ್ ಕ್ಯಾಬಿನೆಟ್‌ಗೆ ಯಾರೆಲ್ಲಾ ಸೇರ್ಪಡೆಯಾಗ್ತಾರೆ ಅನ್ನೋ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಚಿತ್ರದುರ್ಗ ಸಂಸದ ಕುಟುಂಬ ಸಮೇತ ದೆಹಲಿಯತ್ತ ಹೊರಟಿದ್ದು, ಕುತೂಹಲ ಮೂಡಿಸಿದೆ.
undefined
ಕೇಂದ್ರ ಸಂಪುಟ ವಿಸ್ತರಣೆ? ಹೊಸಮುಖ, ಟೆಕ್ನೋಕ್ರಾಟ್‌ಗಳಿಗೆ ಸ್ಥಾನ?
ಕೇಂದ್ರ ಸಚಿವ ಸಂಪುಟದಲ್ಲಿ ನಾರಾಯಣಸ್ವಾಮಿಗೂ ಸ್ಥಾನ ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ದೆಹಲಿಯತ್ತ ದೌಡಾಯಿಸಿದ್ದಾರೆ ಎನ್ನಲಾಗುತ್ತಿದೆ. ಮೋದಿ ಸಂಪುಟದಲ್ಲಿ ನಾರಾಯಣಸ್ವಾಮಿಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಎ. ನಾರಾಯಣಸ್ವಾಮಿ, ರಾಜ್ಯದಿಂದ ಯಾರು ಸಚಿವರಾಗುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ನನಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಿದರೆ ಯಶಸ್ವಿಯಾಗಿ ನಿರ್ವಹಿಸುತ್ತೇನೆ ಎಂದು ಹೇಳಿದರು.
ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾಹಿತಿ ಇಲ್ಲ, ಕರೆಯೂ ಬಂದಿಲ್ಲ. ಪಕ್ಷದ ಸೂಚನೆಯನ್ನು ಪಾಲಿಸುತ್ತೇನೆ. ಶಾಸಕ, ಸಚಿವ, ಸಂಸದನಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಯಾವ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ. ಸಂಪುಟ ಪುನಾರಚನೆಯನ್ನು ಕಣ್ತುಂಬಿಕೊಳ್ಳುತ್ತೇನೆ. ಕುಟುಂಬದವರಿಗೆ ಹಿಮಾಲಯ ತೋರಿಸಲು ಕರೆದುಕೊಂಡು ಹೋಗುತ್ತಿದ್ದೇನೆ ಅಷ್ಟೇ ಎಂದರು.
ನಮ್ಮನ್ನು ಎಲ್ಲಿಗೂ ಕರೆದುಕೊಂಡು ಹೋಗಿಲ್ಲ ಎಂದು ಹೇಳುತ್ತಿದ್ದರು. ಹಾಗಾಗಿ ಕುಟುಂಬಸ್ಥರನ್ನು ಹಿಮಾಲಯಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳುವ ಮೂಲಕ ಯಾವುದೇ ಗುಟ್ಟು ಬಿಟ್ಟುಕೊಡಲಿಲ್ಲ.