ಬಾದಾಮಿಯಿಂದ ಬಂದ 500 ಮಂದಿ : ಸಿದ್ದರಾಮಯ್ಯ ಸ್ಪರ್ಧೆಗೆ ಒತ್ತಾಯ

By Suvarna NewsFirst Published Jul 6, 2021, 11:55 AM IST
Highlights
  • ಚಾಮರಾಜಪೇಟೆ ಕ್ಷೇತ್ರದತ್ತ ಇತ್ತೀಚೆಗೆ ಸಿದ್ದರಾಮಯ್ಯ ಹೆಚ್ಚಿನ ಒಲವು
  •  ನಾನು ಚಾಮರಾಜಪೇಟೆ ಅಳಿಯ ಎಂಬ ಸಿದ್ದರಾಮಯ್ಯ ಹೇಳಿಕೆ
  • ಸಿದ್ದರಾಮಯ್ಯ ನಿವಾಸಕ್ಕೆ ಹರಿದು ಬಂದ ಬಾದಾಮಿ ಕ್ಷೇತ್ರದ ಜನರ ದಂಡು 

ಬೆಂಗಳೂರು (ಜು.06): ಚಾಮರಾಜಪೇಟೆ ಕ್ಷೇತ್ರದತ್ತ ಇತ್ತೀಚೆಗೆ ಸಿದ್ದರಾಮಯ್ಯ ಹೆಚ್ಚಿನ ಒಲವು ಕಂಡು ಬಂದಿದ್ದು, ನಾನು ಚಾಮರಾಜಪೇಟೆ ಅಳಿಯ ಎಂಬ ಸಿದ್ದರಾಮಯ್ಯ ಹೇಳಿಕೆ ಹಿನ್ನೆಲೆ ಸಿದ್ದರಾಮಯ್ಯ ನಿವಾಸಕ್ಕೆ ಬಾದಾಮಿ ಕ್ಷೇತ್ರದ ಜನರ ದಂಡೆ ಇಂದು ಹರಿದು ಬಂದಿದೆ.

ಬಾದಾಮಿಯಲ್ಲೇ ಸ್ಪರ್ಧಿಸುವಂತೆ ಜನರ ಒತ್ತಾಯವಿದ್ದು, ಸಿದ್ದರಾಮಯ್ಯಗೆ ಒತ್ತಾಯ ಮಾಡಲು ಸುಮಾರು 500 ಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ. 60 ಕ್ರೂಸರ್ ಗಳಲ್ಲಿ ಕ್ಷೇತ್ರದ ಜನ ಬಂದಿದ್ದು, ಮುಂದಿನ ಚುನಾವಣೆಯಲ್ಲಿ ಬಾದಾಮಿಯಲ್ಲೇ ನಿಲ್ಲಬೇಕು. ಮತ್ತೊಮ್ಮೆ ಅವರು ಸಿಎಂ ಆಗಬೇಕು. ಹಾಗಾಗಿ ಅವರಿಗೆ ಮನವಿ‌ಮಾಡಲು ಬಂದಿದ್ದೇವೆ ಎಂದು ಹೇಳಿದರು.

'ನಾನು ಚಾಮರಾಜಪೇಟೆ ಅಳಿಯ, ಇಲ್ಲಿ ನನ್ನ ಮಾವನ ಮನೆಯಿತ್ತು, ಈಗಲೂ ಇದೆ

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗುತ್ತಿರುವ ಬಾದಾಮಿ‌ ಕ್ಷೇತ್ರದ ಸಿದ್ದು ಅಭಿಮಾನಿಗಳು ಬಾದಾಮಿಯಿಂದಲೇ ಸ್ಪರ್ಧೆ ಮಾಡಲು ಒತ್ತಾಯ ಮಾಡಿದ್ದಾರೆ.

"ಬಾದಾಮಿಗೆ ಬರಲೇಬೇಕು ಬರಲೇಬೇಕು. ಸಿದ್ದರಾಮಯ್ಯ ಬಾದಾಮಿಯ ಇಮ್ಮಡಿ ಪುಲಿಕೇಶಿ. ಉತ್ತರ ಕರ್ನಾಟಕದ ಬಾದಾಮಿಯಿಂದಲೇ ಸ್ಪರ್ಧಿಸಬೇಕು.ಬಾದಾಮಿಯಿಂದ ಗೆದ್ದು ಮುಖ್ಯಮಂತ್ರಿ ಆಗಬೇಕು. 50 ಸಾವಿರ ಮತಗಳಿಂದ ನಿಮ್ಮನ್ನ ಗೆಲ್ಲಿಸುತ್ತೇವೆ. ಉತ್ತರ ಕರ್ನಾಟಕದಿಂದಲೇ ಅವರು ಸಿಎಂ ಆಗಬೇಕು ಎಂದು ಸಿದ್ದರಾಮಯ್ಯಗೆ ಬೆಂಬಲಿಗರಿಂದ ಒತ್ತಾಯ ಕೇಳಿ ಬಂದಿದೆ. ಬಾದಾಮಿ ಹುಲಿಯಾ ಸಿದ್ದರಾಮಯ್ಯ ಎಂದು ಜೈಕಾರ ಹಾಕಿದ್ದು, ಸಿದ್ದರಾಮಯ್ಯ ಸುತ್ತುವರೆದು ಒತ್ತಾಯಿಸಿದ್ದಾರೆ. 

ಸಿದ್ದರಾಮಯ್ಯ ಯಾವುದೇ ಪಾಪ ಮಾಡಿಲ್ಲ: ಎಚ್‌ಡಿಕೆಗೆ ಯತೀಂದ್ರ ತಿರುಗೇಟು

ಇನ್ನು ಇದೇ ವೇಳೆ  ಸಿದ್ದು ನಿವಾಸದ ಬಳಿ ರೇವಣಸಿದ್ದಪ್ಪ ನೂಟಗಾರ ಮಾತನಾಡಿ ಸಿದ್ದರಾಮಯ್ಯನೇ ನಮ್ಮ ಬಾದಾಮಿ ದೊರೆ. ಇಮ್ಮಡಿ ಪುಲಿಕೇಶಿ ನಂತರ ಇವರೇ ಅಲ್ಲಿನ ದೊರೆ. ಅವರು ಬಾದಾಮಿಯಲ್ಲೇ ನಿಲ್ಲಬೇಕು. ಅವರು ಬಾದಾಮಿಯಿಂದಲೇ ಸಿಎಂ ಆಗಬೇಕು. 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸುತ್ತೇವೆ. ಚಾಮರಾಜಪೇಟೆಯಲ್ಲಿ‌ ನಿಲ್ಲುತ್ತೇನೆ ಎಂದು ಅವರು ಹೇಳಿಲ್ಲ. ಅಲ್ಲಿ ಅವರ ಮಾವ ಇದ್ದರು ಅಂತ ಹೇಳಿದ್ದಾರೆ. ಬಾದಾಮಿಯಲ್ಲೇ ಅವರು ನಿಲ್ಲುತ್ತಾರೆ ಎಂದರು. 

click me!