Karnataka Assembly Elections 2023: 'ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ'

By Kannadaprabha News  |  First Published Jan 7, 2023, 8:30 PM IST

ಕಾಂಗ್ರೆಸ್‌ ನಾಯಕರು ಭಾರತ್‌ ಜೋಡೋ ಪಾದಯಾತ್ರೆ ಮಾಡುವುದು ಅರ್ಥವಿಲ್ಲ. ರಾಹುಲ್‌ ಗಾಂಧಿ ಅವರು ಮೊದಲು ಪಕ್ಷದಲ್ಲಿರುವ ನಾಯಕರ ಮನಸ್ಸುಗಳನ್ನು ಜೋಡೋ ಮಾಡಲಿ. ನಂತರ ಭಾರತ್‌ ಜೋಡೋಗೆ ಪ್ರಯತ್ನ ಮಾಡಲಿ: ಮಾಲಿಕಯ್ಯ ಗುತ್ತೇದಾರ 


ಅಫಜಲ್ಪುರ(ಜ.07):  2023ರ ಚುನಾವಣೆಯಲ್ಲಿ ಪುನಹ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ಶತಸಿದ್ಧ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಅವರು ತಾಲೂಕಿನ ಗೊಬ್ಬೂರ(ಬಿ) ಗ್ರಾಮದಲ್ಲಿ ಮಹಾಶಕ್ತಿ ಕೇಂದ್ರದ ಬೂತ್‌ ನಂಬರ್‌ 101ರಲ್ಲಿ ಬೂತ್‌ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್‌ ನಾಯಕರು ಭಾರತ್‌ ಜೋಡೋ ಪಾದಯಾತ್ರೆ ಮಾಡುವುದು ಅರ್ಥವಿಲ್ಲ. ರಾಹುಲ್‌ ಗಾಂಧಿ ಅವರು ಮೊದಲು ಪಕ್ಷದಲ್ಲಿರುವ ನಾಯಕರ ಮನಸ್ಸುಗಳನ್ನು ಜೋಡೋ ಮಾಡಲಿ. ನಂತರ ಭಾರತ್‌ ಜೋಡೋಗೆ ಪ್ರಯತ್ನ ಮಾಡಲಿ.

Tap to resize

Latest Videos

undefined

ಪಿಎಸ್‌ಐ ಹಗರಣ ಆರೋಪಿಗಳಿಗೆ ಬೇಲ್‌: ಪ್ರಿಯಾಂಕ್‌ ಖರ್ಗೆ ಕಿಡಿ

ಬಿಜೆಪಿ ಸಂಘಟನೆಯ ವ್ಯವಸ್ಥೆಯನ್ನು ಕಟ್ಟಕಡೆಯ ಮತಗಟ್ಟೆಯಲ್ಲಿಯೂ ಸಶಕ್ತಗೊಳಿಸಲು ಬೂತ್‌ ವಿಜಯ ಅಭಿಯಾನವನ್ನು ಪ್ರತಿ ಮತಗಟ್ಟೆಯಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ಧ್ವಜ ಹಾರಿಸುವುದರೊಂದಿಗೆ ಮುಂಬರುವ ಚುನಾವಣೆಯ ವಿಜಯದ ಕಡೆಗೆ ಸದೃಢ ಹೆಜ್ಜೆಗಳನ್ನು ಇಡೋಣ.ಬೂತ್‌ ವಿಜಯ ಅಭಿಯಾನದಲ್ಲಿ ನಾವೆಲ್ಲರೂ ಪಾಲ್ಗೊಂಡು ಮುಂಬರುವ ಚುನಾವಣೆಯಲ್ಲಿ ಪ್ರಚಂಡ ಬಹುಮತ ಪಡೆಯಲು ನಮ್ಮ ಮನೆಯ ಮೇಲೆ ಬಿಜೆಪಿ ವಿಜಯ ಧ್ವಜ ಹಾರಿಸೋಣ ಎಂದು ಅವರು ಹೇಳಿದರು.

ಅಫಜಲ್ಪುರ ಮಂಡಲದ ಕೋಲಿ ಸಮಾಜ ಮತ್ತು ಪೂಜಾರಿ ಬಡಾವಣೆಯ ಬೂತ್‌ ನಂಬರ್‌ 168ಮತ್ತು 169ರಲ್ಲಿ ಬಿಜೆಪಿ ಬೂತ್‌ ವಿಜಯ ಅಭಿಯಾನ 25 ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವ ಮೂಲಕ ಆಚರಿಸಲಾಯಿತು. ಸಂಸದ ಡಾ. ಉಮೇಶ್‌ ಜಾಧವ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಅಧ್ಯಕ್ಷ ಶೈಲೇಶ್‌ ಗುಣಾರಿ, ಶಂಕು ಮ್ಯಾಕೇರಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜು ಪಡಶೆಟ್ಟಿ, ತುಕ್ಕಪ್ಪ ಭಂಗಿ, ಸೈದಪ್ಪ ಪೂಜಾರಿ, ಅಶೋಕ್‌ ದುದ್ದಗಿ ಮಹಾ ಶಕ್ತಿ ಕೇಂದ್ರದ ಕಾರ್ಯದರ್ಶಿ ಪದಾಧಿಕಾರಿಗಳು ಇದ್ದರು.

click me!