ರಾಜ್ಯ ರಾಜಕೀಯ : ಕೇಂದ್ರ ಸಚಿವ ಜೋಶಿ ನಿಗೂಢ ಹೇಳಿಕೆ

Kannadaprabha News   | Asianet News
Published : May 30, 2021, 08:58 AM ISTUpdated : May 30, 2021, 09:14 AM IST
ರಾಜ್ಯ ರಾಜಕೀಯ :  ಕೇಂದ್ರ ಸಚಿವ ಜೋಶಿ ನಿಗೂಢ ಹೇಳಿಕೆ

ಸಾರಾಂಶ

ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ ನಾಯಕತ್ವ ಬದಲಾವಣೆ ಪ್ರಶ್ನೆಯಿಲ್ಲ. ಕೋವಿಡ್‌ ನಿಯಂತ್ರಣವೊಂದೇ ನಮ್ಮ ಆದ್ಯತೆ  ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರು ಹೇಳಿಕೆ

ಹುಬ್ಬಳ್ಳಿ (ಮೇ.30) :  ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಮೇಲಾಗಿ ಸದ್ಯ ನಮ್ಮ ಮುಂದೆ ನಾಯಕತ್ವ ಬದಲಾವಣೆ ಪ್ರಶ್ನೆಯಿಲ್ಲ. ಕೋವಿಡ್‌ ನಿಯಂತ್ರಣವೊಂದೇ ನಮ್ಮ ಆದ್ಯತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿಯವರು ಹೇಳಿದ್ದಾರೆ. ಇದೇ ವೇಳೆ ಬಿಜೆಪಿಯಲ್ಲಿ ಸಮರ್ಥರಿದ್ದಾರೋ ಇಲ್ಲವೋ? ಎಂಬುದಕ್ಕಿಂತ ಈಗಿರುವವರು ಸಮರ್ಥರಿದ್ದಾರೋ ಇಲ್ಲವೋ? ಮುಂದುವರಿಸಬೇಕೋ ಬೇಡವೋ? ಎಂಬ ಪ್ರಶ್ನೆಯಿದೆ ಅಷ್ಟೇ ಎಂದೂ ಹೇಳಿದ್ದಾರೆ. ಜೋಶಿಯವರ ಈ ಎರಡು ರೀತಿಯ ಹೇಳಿಕೆ ತೀವ್ರ ಕುತೂಹಲ ಮೂಡಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್‌ ನಿಯಂತ್ರಣವೇ ನಮ್ಮೆಲ್ಲರ ಆದ್ಯತೆ. ನಾಯಕತ್ವದ ಬದಲಾವಣೆ ನಮ್ಮ ಮುಂದಿಲ್ಲ. ವಯಸ್ಸಾಗಿದೆ ಎಂದು ಬಿಎಸ್‌ವೈ ಅವರನ್ನು ಕೆಳಕ್ಕಿಳಿಸಲಾಗದು. ಯಡಿಯೂರಪ್ಪ ಅತ್ಯಂತ ಚೆನ್ನಾಗಿ ಆಡಳಿತ ನಿರ್ವಹಿಸುತ್ತಿದ್ದಾರೆ ಎಂದರು.

'ರಾಷ್ಟ್ರದಲ್ಲಿ ಯಡಿಯೂರಪ್ಪರಂತಹ ಅಸಮರ್ಥ ಮುಖ್ಯಮಂತ್ರಿ ಯಾರಿಲ್ಲ' ..

ನಿಮ್ಮನ್ನು ಕೆಲ ಶಾಸಕರು, ಸಚಿವರು ಭೇಟಿ ಮಾಡಿ ಸಿಎಂ ಆಗುವಂತೆ ಕೋರಿದ್ದಾರೆ ಎಂಬ ಮಾತಿದೆಯಲ್ಲ ಎಂಬ ಪ್ರಶ್ನೆಗೆ, ಈ ವಿಷಯವಾಗಿ ನನ್ನನ್ನು ಯಾರೂ ಭೇಟಿ ಮಾಡಿಲ್ಲ. ಯಾರೊಂದಿಗೂ ಚರ್ಚೆ ಮಾಡಿಲ್ಲ. ದೆಹಲಿ ಹಾಗೂ ಹುಬ್ಬಳ್ಳಿಯಲ್ಲಿದ್ದಾಗ ರಾಜ್ಯದ ಕೆಲ ಮುಖಂಡರು ಭೇಟಿಯಾಗಿದ್ದಾರೆ. ಆದರೆ ಕೇಂದ್ರ ಸಚಿವನಾಗಿರುವ ಹಿನ್ನೆಲೆಯಲ್ಲಿ ಈ ಭೇಟಿ ಸಹಜ. ಕೇಂದ್ರದಿಂದ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚೆ ನಡೆದಿರುವುದು ಬಿಟ್ಟರೆ ಬೇರೆ ಯಾವ ವಿಷಯಗಳನ್ನೂ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿ ಯಾರೂ ಸಮರ್ಥ ನಾಯಕರಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಲ್ಲಿ ಬಹಳಷ್ಟುಜನ ಸಮರ್ಥರಿದ್ದಾರೆ. ಅದಕ್ಕಾಗಿ ಸಿಕ್ಕಾಪಟ್ಟೆಬಡಿದಾಡಿಕೊಳ್ಳುತ್ತಾರೆ. ಅವರು ಬಡಿದಾಡಿಕೊಂಡೇ ಇರಲಿ ಎಂದು ವ್ಯಂಗ್ಯವಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ
Karnataka News Live: ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ: ಯತೀಂದ್ರಗೆ ಆಲ್ ದಿ ಬೆಸ್ಟ್ ಹೇಳಿದ ಕಾಂಗ್ರೆಸ್ ಶಾಸಕ