ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಒತ್ತಾಯಿಸಿದರು.
ಮೈಸೂರು (ಆ.25): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಒತ್ತಾಯಿಸಿದರು. ಮೈಸೂರು ತಾಲೂಕು ಲಲಿತಾದ್ರಿಪುರದಲ್ಲಿ ಸರ್ಕಾರಿ ಪ್ರೌಢ ಶಾಲಾ ಕಟ್ಟಡ ಹಾಗೂ 9ನೇ ತರಗತಿ ಪ್ರಾರಂಭೋತ್ಸವದ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ದೇಶ ಅಭಿವೃದ್ದಿ ಹೊಂದಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿದ್ದು, ಇಂದು ಭಾರತದಲ್ಲಿ ಶಿಕ್ಷಣ ಪಡೆದ ಮಕ್ಕಳು ಪ್ರಪಂಚದದ್ಯಾಂತ ಕೆಲಸ ಮಾಡುತ್ತಿದಾರೆ. ಆದ್ದರಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಶಿಕ್ಷಕರು, ಗ್ರಾಮಸ್ಥರು ನೋಡಿಕೊಳ್ಳಬೇಕು ಎಂದರು.
ಲಲಿತಾದ್ರಿಪುರದಲ್ಲಿ 4 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಇಲ್ಲಿನ ಮಕ್ಕಳು ಪ್ರೌಢಶಾಲೆಗೆ ಬೇರೆ ಕಡೆಗೆ ಹೋಗಬೇಕಾಗಿತ್ತು. ನಾನು ಶಾಸಕನಾಗಿದ್ದಾಗ ಬಿಜೆಪಿ ಸರ್ಕಾರಕ್ಕೆ ಪ್ರೌಢಶಾಲೆ ಮಂಜೂರಾತಿಗೆ ಮನವಿ ಮಾಡಿದ್ದರೂ ಆಗಲಿಲ್ಲ. ಈಗ ನಮ್ಮದೇ ಸರ್ಕಾರವಿದ್ದು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವುದರಿಂದ ಪ್ರೌಢಶಾಲೆಯನ್ನು ಮಂಜೂರು ಮಾಡಿದ್ದಾರೆ ಎಂದು ಅವರು ತಿಳಿಸಿದರು. 9ನೇ ತರಗತಿಗೆ 27 ಮಕ್ಕಳು ದಾಖಲಾಗಿದ್ದಾರೆ. 14 ಲಕ್ಷ ರೂ. ವೆಚ್ಚ ಮಾಡಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ.
ಎಂಡಿಎ ಹಗರಣ: ರಾಜ್ಯಪಾಲರು ಕೇಂದ್ರ ಸರ್ಕಾರದ ಕೈ ಗೊಂಬೆಯಾಗಿದ್ದಾರೆ: ಮುಖ್ಯಮಂತ್ರಿ ಚಂದ್ರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದ ಶಾಲೆಗಳ ಅಭಿವೃದ್ದಿಗೆ 30 ಕೋಟಿ ನೀಡಿದ್ದರು. ಅದನ್ನೆಲ್ಲಾ ಶಾಲೆಗಳ ರಿಪೇರಿ, ಹೊಸ ಕಟ್ಟಡ ನಿರ್ಮಾಣಕ್ಕೆ ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಡಿಡಿಪಿಐ ಜವರೇಗೌಡ, ಬಿಇಓ ವಿವೇಕಾಂದ, ಎಸ್.ಡಿ.ಎಂ.ಸಿ. ಅಧಕ್ಷ ನಾಗೇಂದ್ರ, ಮುಖ್ಯ ಶಿಕ್ಷಕಿ ಕಮಲಾಕ್ಷಿ, ಶಿಕ್ಷಕಿ ಪವಿತ್ರಾ, ಮುಖಂಡರಾದ ಸಕ್ಕಳ್ಳಿ ಬಸವರಾಜು, ಬಂಡಿಪಾಳ್ಯ ಬಸವರಾಜು, ರಮೇಶ್ ಮುದ್ದೇಗೌಡ, ಮಂಜುಳಾ ಮಂಜುನಾಥ್, ಎಂ.ಟಿ. ರವಿಕುಮಾರ್, ಜಿ.ಕೆ. ಬಸವಣ್ಣ, ಸಿದ್ದಯ್ಯ, ಶಾಂತಮ್ಮ, ದಕ್ಷಿಣಾಮೂರ್ತಿ, ಅಭಿ ಮೊದಲಾದವರು ಇದ್ದರು.