ಮಾಲೂರು ತಾಲೂಕಿನ ರಸ್ತೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ನೂರು ಕೋಟಿ ರು.ಗಳನ್ನು ಮಂಜೂರು ಮಾಡಿದ್ದು, ಇನ್ನೊಂದು ವರ್ಷದಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಮಾಲೂರು (ಆ.25): ಮಾಲೂರು ತಾಲೂಕಿನ ರಸ್ತೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ನೂರು ಕೋಟಿ ರು.ಗಳನ್ನು ಮಂಜೂರು ಮಾಡಿದ್ದು, ಇನ್ನೊಂದು ವರ್ಷದಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಅವರು ಪಟ್ಟಣದ ಜೋಡಿ ರಸ್ತೆಯ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನ ಗ್ರಾಮ ಸಡಕ್, ಗ್ರಾಮ ಸಮರ್ಪಕ ರಸ್ತೆ, ಜಿಲ್ಲಾ,ರಾಜ್ಯ ಹೆದ್ದಾರಿಗಳು ಅಭಿವೃದ್ಧಿಗೊಳ್ಳಲಿದ್ದು, ಎಲ್ಲವು ಮಂಜೂರಾತಿಯ ವಿವಿಧ ಹಂತದಲ್ಲಿದೆ ಎಂದರು.
ಹೊಸ ಯೋಜನೆಗಳೂ ಸೇರಿವೆ: ೨೦೧೮-೧೯ ರಲ್ಲಿ ಈ ಯೋಜನೆಗೆ ಮಂಜೂರಾತಿ ಸಿಕ್ಕಿದ್ದರೂ ಹಣ ಬಿಡುಗಡೆ ಮಾಡದೆ ಅಂದಿನ ಬಿಜೆಪಿ ಸರ್ಕಾರ ಅಸಹಕಾರ ತೋರಿದ ಕಾರಣ ಕಾಮಗಾರಿ ನಿಂತು ಹೋಗಿತ್ತು. ಈಗ ನಮ್ಮ ಸರ್ಕಾರವೇ ಇರುವುದರಿಂದ ಮಂಜೂರಾದ ಹಳೆ ಯೋಜನೆ ಕಾಮಗಾರಿಗಳು ಸೇರಿದಂತೆ ಹೊಸ ಕಾಮಗಾರಿ ಮಂಜೂರಾಗಿವೆ. ಎಲ್ಲ ಕಾಮಗಾರಿಗಳು ಮತ್ತೇ ಪ್ರಾರಂಭವಾಗಲಿವೆ ಎಂದರು.
undefined
ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ೧೯ ಸದಸ್ಯರಿದ್ದು,ಅಧ್ಯಕ್ಷರ ಜತೆಯಲ್ಲಿ ಕೈ ಜೋಡಿಸಿ ಪಟ್ಟಣದಲ್ಲಿ ನಡೆಯಲಿರುವ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟು ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು.ನೂತನ ಅಧ್ಯಕ್ಷೆ ಕೋಮಲ ನಾರಾಯಣ್ ,ಉಪಾಧ್ಯಕ್ಷೆ ವಿಜಯಲಕ್ಷ್ಮಿ ಕೃಷ್ಣಪ್ಪ,ಪ್ರಾಧಿಕಾರದ ಅಧ್ಯಕ್ಷ ನಯೀಮ್, ಸದಸ್ಯ ವೆಂಕಟೇಶ್,ಎ.ರಾಜಪ್ಪ,ಮಂಜುನಾಥ್ ,ಇಂತಿಯಾಜ್,ಮುರಳಿಧರ್, ಶಬ್ಬೀರ್ ,ತನ್ವೀರ್,ಶಂಕರ್,ಆನೇಪುರ ಹನುಮಂತಪ್ಪ ಇನ್ನಿತರರು ಇದ್ದರು.
ದೆಹಲಿಯಂತೆ ಬೆಂಗಳೂರಿನಲ್ಲೂ ಪಾಲಿಕೆ ಬಜಾರ್: ಶಾಸಕ ಎಂ.ಕೃಷ್ಣಪ್ಪ
ಐದು ವರ್ಷಗಳ ಹಿಂದಿನ ಕಾಮಗಾರಿಗಳಿಗೇ ಶಾಸಕರು ಈಗ ಮತ್ತೆ ಚಾಲನೆ ನೀಡಿ ಇಂದಿನ ಸರ್ಕಾರದಿಂದ ಬಿಡುಗಡೆಯಾದ ಯೋಜನೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.
-ಭಾನುತೇಜಾ, ಪುರಸಭೆ ಸದಸ್ಯ, ಸ್ವಾಭಿಮಾನಿ ಜನತಾ ಪಕ್ಷ