ನ.13ಕ್ಕೆ ಚನ್ನಪಟ್ಟಣ, ಶಿಗ್ಗಾವಿ, ಸಂಡೂರಿನಲ್ಲಿ ಉಪಚುನಾವಣೆ: ನ.23ಕ್ಕೆ ಫಲಿತಾಂಶ

By Kannadaprabha News  |  First Published Oct 16, 2024, 5:29 AM IST

ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ -ಜೆಡಿಎಸ್ ಮತ್ತು ಆಡಳಿತಾರೂಢ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿರುವ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗವು ಉಪಚುನಾವಣೆ ಘೋಷಣೆ ಮಾಡಿದ್ದು, ಬರುವ ನ.13ರಂದು ಮತದಾನ ನಡೆಯಲಿದೆ. 
 


ಬೆಂಗಳೂರು (ಅ.16): ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ -ಜೆಡಿಎಸ್ ಮತ್ತು ಆಡಳಿತಾರೂಢ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿರುವ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗವು ಉಪಚುನಾವಣೆ ಘೋಷಣೆ ಮಾಡಿದ್ದು, ಬರುವ ನ.13ರಂದು ಮತದಾನ ನಡೆಯಲಿದೆ. ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿ ಪಕ್ಷಗಳಾದ ಬಿಜೆಪಿ - ಜೆಡಿಎಸ್ ನಡುವೆ ವಿವಿಧ ಹಗರಣಗಳ ಕುರಿತಂತೆ ತೀವ್ರ ಆರೋಪ-ಪ್ರತ್ಯಾರೋಪ ನಡೆಯುತ್ತಿರುವ ಈ ಸಂದರ್ಭದಲ್ಲಿ ಉಪಚುನಾವಣೆ ಘೋಷಣೆಯಾಗಿರುವುದು ತೀವ್ರ ರಾಜಕೀಯ ವಾಕ್ಸಮರಕ್ಕೆ ವೇದಿಕೆ ಯಾಗುವುದು ನಿಶ್ಚಿತವಾಗಿದೆ.

ಈ ತಿಂಗಳು 18ರಂದು ಉಪಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, 25ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. 28ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. 30ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ನ.13ರಂದು ಚುನಾವಣೆ ನಡೆಯಲಿದ್ದು, ನ.23ರಂದು ಮತ ಎಣಿಕೆ ಜರುಗಲಿದೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ಚನ್ನಪ ಟ್ಟಣ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಬಸವರಾಜ ಬೊಮ್ಮಾಯಿ ರಾಜೀನಾಮೆ ಯಿಂದ ಶಿಗ್ಗಾಂವಿ ಮತ್ತು ಇ.ತುಕಾರಾಂ ರಾಜೀನಾಮೆಯಿಂದ ಸಂಡೂರು ವಿಧಾನಸಭಾ ಕ್ಷೇತ್ರ ತೆರವಾಗಿತ್ತು. 

Tap to resize

Latest Videos

undefined

ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಇಳಿದು ಹೊಸ ಜನಾದೇಶ ಪಡೆಯಲಿ: ಎಂ.ಪಿ.ರೇಣುಕಾಚಾರ್ಯ

ಹೀಗಾಗಿ ವೈಯಕ್ತಿಕವಾಗಿ ಈ ಕ್ಷೇತ್ರಗಳು ಎಚ್‌ಡಿಕೆ ಹಾಗೂ ಬೊಮ್ಮಾಯಿಗೆ ಪ್ರತಿಷ್ಠೆ ಪ್ರಶ್ನೆಗಳಾಗಿವೆ. ಇನ್ನು ಚನ್ನಪಟ್ಟಣವು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ತವರು ಜಿಲ್ಲೆಗೆ ಸೇರಿರುವ ಕಾರಣ ಅದೂ ಕೂಡ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಎಲ್ಲಿ ಎಷ್ಟು ಮತದಾರರು?: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,36,790 ಮತದಾರರಿದ್ದು, ಈ ಪೈಕಿ 1,21,067 ಪುರುಷರು, 1,15,717 ಮಹಿಳೆಯರು ಮತ್ತು 6 ಮಂದಿ ಇತರರು ಇದ್ದಾರೆ. 9,683 ಯುವ ಮತದಾರರಿದ್ದು, ಇದರಲ್ಲಿ 5,160 ಪುರುಷರು, 4,522 ಮಹಿಳೆಯರು ಮತ್ತು ಒಬ್ಬರು ಇತರೆ ಮತದಾರರಿದ್ದಾರೆ.

5,251 ಅಂಗವಿಕಲ ಮತದಾರರಲ್ಲಿ 2,903 ಪುರುಷರು, 2,347 ಮಹಿಳೆಯರು ಮತ್ತು ಒಬ್ಬರು ಇತರೆ ಮತದಾರರಿದ್ದಾರೆ. ವರ್ಷಕ್ಕಿಂತ ಮೇಲ್ಪಟ್ಟ 85 ಮತದಾರರು 2,802 ಮಂದಿ ಇದ್ದು, 1088 ಪುರುಷರು, 1714 ಮಹಿಳೆಯರಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ 196 ಕಡೆ 241 ಮತಗಟ್ಟೆಗಳನ್ನು ತೆರೆಯಲಾಗುವುದು. 482 ಬ್ಯಾಲೆಟ್ ಯೂನಿಟ್, 472 ಕಂಟ್ರೋಲ್ ಯೂನಿಟ್ ಮತ್ತು 481 ವಿವಿ ಪ್ಯಾಟ್ ಗಳನ್ನು ಬಳಕೆ ಮಾಡಲಾಗುತ್ತದೆ. ಸಂಡೂರು ವಿಧಾನಸಭಾ ಕ್ಷೇತ್ರ ದಲ್ಲಿ 2,36,047 ಮತದಾರರಿದ್ದು, ಈ ಪೈಕಿ 1,17,739 ಪುರುಷರು, ಮಹಿಳೆಯರು 1,18,279 ಇತರೆ  29 ಮತದಾರರಿದ್ದಾರೆ. 

10,593 ಯುವ ಮತದಾರರಿದ್ದು, ಇದರಲ್ಲಿ 5,729 ಪುರುಷರು, 4,861ಮಹಿಳೆಯರು ಮತ್ತು ಮೂವರು ಇತರರು ಇದ್ದಾರೆ. 2,832 ಅಂಗವಿಕಲ ಮತದಾರರ ಪೈಕಿ 1,546 ಪುರುಷರು, 1,286 ಮಹಿಳೆಯರಿದ್ದಾರೆ. 85 ವರ್ಷಕ್ಕಿಂತ ಮೇಲ್ಪಟ್ಟು 1,367 ಮತದಾರರಿದ್ದು, ಇದರಲ್ಲಿ 492 ಪುರುಷರು, ಮಹಿಳೆಯರಿದ್ದಾರೆ ಸಂಡೂರಲ್ಲಿ ಮತದಾನಕ್ಕಾಗಿ 153 ಸ್ಥಳದಲ್ಲಿ 259 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. 505 ಬ್ಯಾಲೆಟ್ ಯೂನಿಟ್, 503 ಕಂಟ್ರೋಲ್ ಯೂನಿಟ್ ಮತ್ತು 492 ವಿವಿ ಪ್ಯಾಟ್‌ಗಳನ್ನು ಉಪಯೋಗಿಸಲಾಗುತ್ತದೆ. 

ಚನ್ನಪಟ್ಟಣಕ್ಕೆ ಡಿ.ಕೆ.ಸುರೇಶ್‌ ಅಭ್ಯರ್ಥಿಯಾಗಲಿ: ಸಚಿವ ಜಮೀರ್‌ ಅಹಮದ್‌ ಖಾನ್‌

ಚನ್ನಪಟ್ಟಣ ಕ್ಷೇತ್ರದಲ್ಲಿ 2,32,836 ಮತದಾರರಿದ್ದು, ಈ ಪೈಕಿ 1,12,271 ಪುರುಷರು, 1,20,557 ಮಹಿಳೆಯರು ಮತ್ತು 8 ಇತರೆ ಮತದಾರರಿದ್ದಾರೆ. 8,338 ಯುವ ಮತದಾರರಲ್ಲಿ 4,268 ಪುರುಷರು, 4,069 ಮಹಿಳೆಯರು ಮತ್ತು ಒಬ್ಬರು ಇತರೆ ಮತದಾರ ಇದ್ದಾರೆ. 3,011 ಅಂಗವಿಕಲ ಮತದಾರರ ಪೈಕಿ 1,669 ಪುರುಷರು ಮತ್ತು 1,342 ಮಹಿಳೆಯರಿದ್ದಾರೆ. 85 ವರ್ಷ ಮೇಲ್ಪಟ್ಟು 1,613 ಮತದಾರರಿದ್ದು, 612 ಪುರುಷರು ಮತ್ತು 1001 ಮಹಿಳೆಯರಿದ್ದಾರೆ. ಚನ್ನಪಟ್ಟಣದಲ್ಲಿ ಮತದಾನಕ್ಕಾಗಿ 208 ಸ್ಥಳಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.545 ಬ್ಯಾಲೆಟ್ ಯೂನಿಟ್, 586 ಕಂಟ್ರೋಲ್ ಯೂನಿಟ್, 538 ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತದೆ.

click me!