ಸಿಎಂ ಶಪಥದ ಬೆನ್ನಲ್ಲೇ ಶರಣಗೌಡ ಜೊತೆ ಮಾತನಾಡಿದ್ದು ನಿಜ ಎಂದ್ರು ಬಿಎಸ್ ವೈ ಆದರೆ...

Published : Feb 10, 2019, 11:32 AM ISTUpdated : Feb 10, 2019, 12:28 PM IST
ಸಿಎಂ ಶಪಥದ ಬೆನ್ನಲ್ಲೇ ಶರಣಗೌಡ ಜೊತೆ ಮಾತನಾಡಿದ್ದು ನಿಜ ಎಂದ್ರು ಬಿಎಸ್ ವೈ ಆದರೆ...

ಸಾರಾಂಶ

ರಾಜ್ಯ ರಾಜಕೀಯದಲ್ಲಿ ಆಡಿಯೋ ಸೌಂಡ್ ಭಾರೀ ಸದ್ದು ಮಾಡುತ್ತಿದೆ. ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದ ಆಡಿಯೋ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೇ ನಿನ್ನೆ ಫೇ. 09ರಂದು ಸಿಎಂ ಧರ್ಮಸ್ಥಳದಲ್ಲಿ ಮಾಡಿದ್ದ ಶಪಥ ಈ ವಿಚಾರ ಮತ್ತಷ್ಟು ಗಂಭೀರಗೊಳಿಸಿತ್ತು. ಆದರೀಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಯಡಿಯೂರಪ್ಪ ಅಚ್ಚರಿಯ ಹೇಳಿಕೆಯೊಂದನ್ನು ನೀಡುತ್ತಾ ತಾನು ಶರಣುಗೌಡ ಜೊತೆ ಮಾತನಾಡಿದ್ದು ನಿಜ ಎಂದಿದ್ದಾರೆ. ಅಷ್ಟಕ್ಕೂ ಅವರೇನು ಹೇಳಿದ್ದರು? ಇಲ್ಲಿದೆ ವಿವರ

ಹುಬ್ಬಳ್ಳಿ[ಫೆ.10]: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಆಪರೇಷನ್ ಕಮಲ ಭಾರೀ ಸದ್ದು ಮಾಡುತ್ತಿದ್ದು, ರಾಜಕೀಯ ನಾಯಕರ ನಡುವೆ ಆಡಿಯೋ ಕಾಳಗ ಆರಂಭವಾಗಿದೆ. ಫೆ. 8ರಂದು ಬಜೆಟ್‌ ಮಂಡನೆಗೂ ಮೊದಲು ಸಿಎಂ ಕುಮಾರಸ್ವಾಮಿ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಭಾರೀ ಸಂಚಲನ ಮೂಡಿಸಿತ್ತು. ಹೀಗಿರುವಾಗ ಬಿಎಸ್‌ವೈ ಆಡಿಯೋದಲ್ಲಿರುವುದು ನನ್ನ ಧ್ವನಿ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದರು. ಇತ್ತ ಧರ್ಮಸ್ಥಕ್ಕೆ ಭೇಟಿ ನೀಡಿದ್ದ ಕುಮಾರಸ್ವಾಮಿ ಆಡಿಯೋದಲ್ಲಿರುವುದು ಯಡಿಯೂರಪ್ಪ ಧ್ವನಿ ಅಲ್ಲವೆಂದಾದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಶಪಥ ಮಾಡಿದ್ದರು. ಸದ್ಯ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಯಡಿಯೂರಪ್ಪ ಅಚ್ಚರಿಯ ಹೇಳಿಕೆ ನೀಡಿದ್ದು, ತಾನು ಶರಣು ಗೌಡನ ಜೊತೆ ಮಾತನಾಡಿರುವುದು ನಿಜ ಎಂದಿದ್ದಾರೆ. 

ಧರ್ಮಸ್ಥಳದಲ್ಲಿ ಸಿಎಂ ಶಪಥ: ಯಡಿಯೂರಪ್ಪ ಧ್ವನಿ ಅಲ್ಲಾಂದ್ರೆ ರಾಜೀನಾಮೆ!

ಹುಬ್ಬಳ್ಳಿಯಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಬಿ ಎಸ್ ಯಡಿಯೂರಪ್ಪ 'ಕುಮಾರಸ್ವಾಮಿ ತರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡುತಿದ್ದಾರೆ. MLA ಮಗನನ್ನು ಕಳಿಸಿಕೊಟ್ಟು ತಮಗೆ ಬೇಕಾದ ಹಾಗೆ ಮಾತನಾಡಿಸಿಕೊಂಡಿದ್ದಾರೆ. ಆದರೆ ನಾನು ಮಾತನಾಡಿರುವುದರಲ್ಲಿ ತಮಗೆ ಬೇಕಾದನ್ನು ಮಾತ್ರ ಬಳಕೆ ಮಾಡಿಕೊಂಡ್ರು. ನನ್ನ ಬಳಿ ಶರಣುಗೌಡ ಬಂದದ್ದು ನಿಜ. ಕುಮಾರಸ್ವಾಮಿ ಕುತಂತ್ರದಿಂದ ನನ್ನ ಬಳಿ ಶರಣುಗೌಡ ಅವರನ್ನು ಕಳುಹಿಸಿ ಕೊಟಿದ್ದಾರೆ. ಯಾವುದೇ ಮುಖ್ಯಮಂತ್ರಿಯೂ ಈವರೆಗೂ ಹೀಗೆ ನಡೆದುಕೊಂಡಿಲ್ಲ. ನಾನು ಅವರ ಜೊತೆ ಮಾತನಾಡಿದ್ದು ನಿಜ. ಆದರೆ ಕೆಲ ಸತ್ಯಗಳನ್ನು ಮರೆಮಾಚಿದ್ದಾರೆ' ಎಂದಿದ್ದಾರೆ.

"

ಆಪರೇಷನ್ ಕಮಲ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ: ಬಿಎಸ್‌ವೈ

ಇದೇ ಸಂದರ್ಭದಲ್ಲಿ ಎಚ್. ಡಿ ರೇವಣ್ಣ ಮಗ ಪ್ರಜ್ವಲ್ ವಿಚಾರವನ್ನು ಉಲ್ಲೇಖಿಸಿದ ಯಡಿಯೂರಪ್ಪ 'ಸ್ವತಃ ಪ್ರಜ್ವಲ್ ರೇವಣ್ಣrವರೇ ನಮ್ಮದು ಸೂಟ್ ಕೇಸ್ ಸಂಸ್ಕೃತಿ, ಸೂಟ್‌ಕೇಸ್ ಇಲ್ಲದೇ ಯಾವುದೇ ಕೆಲಸ ಆಗಲ್ಲಾ ಎಂದು ಹೇಳಿದ್ದಾರೆ. ಈ ಬಗ್ಗೆ ನನ್ನ ಬಳಿಯೂ ದಾಖಲೆ ಇವೆ. ಸೋಮವಾರ ಅವರ ಬಂಡವಾಳ ಬಯಲು ಮಾಡುವೆ. ನನ್ನ ಬಳಿಯೂ ಆಡಿಯೋ ಇದೆ’ ಎಂದಿದ್ದಾರೆ.

ದೇವರ ಹೆಸರಲ್ಲಿ ಯಡಿಯೂರಪ್ಪ ದೇವದುರ್ಗ ಭೇಟಿ ರಹಸ್ಯ ಬಯಲು

ಒಟ್ಟಾರೆಯಾಗಿ ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ಶಪಥ ಮಾಡಿರುವ ಬೆನ್ನಲ್ಲೇ ಬಿ. ಎಸ್‌ ಯಡಿಯೂರಪ್ಪ ಇಂತಹ ಹೇಳಿಕೆ ನೀಡಿರುವುದು ಭಾರೀ ಚರ್ಚೆ ಹುಟ್ಟು ಹಾಕಿದ್ದು, ಸಿಎಂ ಶಪಥಕ್ಕೆ ಹೆಸರಿ ಅವರು ತಾವು ಮಾತನಾಡಿದ್ದು ನಿಜ ಎಂದು ಒಪ್ಪಿಕೊಂಡರಾ ಎಂಬ ಮಾತುಗಳೂ ಜೋರಾಗಿದೆ.

ಅದು ಯಡಿಯೂರಪ್ಪ ಧ್ವನಿಯಂತೂ ಅಲ್ವೇ ಅಲ್ಲ: ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ