ಬಾಂಬೆಗೆ ತೆರಳಿದ್ದಾರೆ, ಬಿಜೆಪಿ ಜತೆ ಸಂಪರ್ಕದಲ್ಲಿದ್ದಾರೆ ಎಂಬ ಆರೋಪ ಕೇಳಿ ಬಂದ ನಂತರ ಶಾಸಕ ಬಿ.ಸಿ.ಪಾಟೀಲ್ ಹಾವೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಬಿಸಿ ಪಾಟೀಲ್ ಏನು ಹೇಳಿದರು?
ಹಾವೇರಿ[ಫೆ.09] ನನಗೆ ಸರ್ಕಾರದ ಮೇಲೆ ಬೇಸರವಿದೆ, ನನಗೆ ಅನ್ಯಾಯವಾಗಿದೆ. ಬೇಸರವಿದ್ದ ಕಾರಣ ನಾನು ಅಧಿವೇಶನದಲ್ಲಿ ಪಾಲ್ಗೊಂಡಿಲ್ಲ. ಎಚ್ಡಿಕೆ ಬಜೆಟ್ ಬಗ್ಗೆ ನನಗೆ ತೃಪ್ತಿ ತಂದಿಲ್ಲ, ಬಜೆಟ್ ನಲ್ಲಿ ನಮ್ಮ ಜಿಲ್ಲೆಗೆ ಅನ್ಯಾಯವಾಗಿದೆ. ನಾವು ಕೇಳಿದ್ದು ಏನೂ ನೀಡಿಲ್ಲ, ನಮ್ಮನ್ನ ಕಡೆಗಣಿಸಲಾಗಿದೆ ಎಂದು ಸುವರ್ಣ ನ್ಯೂಸ್ಗೆ ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ನಾನು ಬಾಂಬೆಗೆ ಹೋಗಿಲ್ಲ. ನಾನು ಎಲ್ಲೂ ಹೋಗಿಲ್ಲ ಇಲ್ಲಿಯೇ ಇದ್ದೇನೆ. ನಾನೀಗ ನನ್ನ ಕ್ಷೇತ್ರಕ್ಕೆ ಹೋಗ್ತಿದಿನಿ, ನಾಳೆ ಬೆಂಗಳೂರಿಗೆ ವಾಪಸ್ ಆಗ್ತಿನಿ. ಅತೃಪ್ತ ಶಾಸಕರು ನನ್ನ ಸಂಪರ್ಕಿಸಿಲ್ಲ. ಸಿದ್ದರಾಮಯ್ಯ ಸಂಪರ್ಕಿಸಿದ್ದರು, ನನ್ನ ಬೇಸರ ತಿಳಿಸಿದ್ದೇನೆ ಎಂದರು.
ವಿಪ್ ಜಾರಿಯಾದರೂ ತಲೆಕೆಡಿಸಿಕೊಳ್ಳದ ಬಿ.ಸಿ.ಪಾಟೀಲ್ ಸೋಮವಾರ ಅಧಿವೇಶನದಲ್ಲಿ ಹಾಜರಾಗುವ ಬಗ್ಗೆ ಅನುಮಾನವಿದೆ.