ಇಂದಿಗೆ GST ಜಾರಿಗೆ ಬಂದು 7 ವರ್ಷ ಆಗಿದೆ. ತೆರಿಗೆ ಹೆಚ್ಚು ಶೇಖರಣೆ ಮಾಡಿದವರಿಗೆ ಪ್ರಶಸ್ತಿ ಕೊಟ್ಟಿದ್ದೇವೆ. ಅವರೆಲ್ಲರಿಗೂ ಸರ್ಕಾರದಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು (ಜು.01): ಇಂದಿಗೆ GST ಜಾರಿಗೆ ಬಂದು 7 ವರ್ಷ ಆಗಿದೆ. ತೆರಿಗೆ ಹೆಚ್ಚು ಶೇಖರಣೆ ಮಾಡಿದವರಿಗೆ ಪ್ರಶಸ್ತಿ ಕೊಟ್ಟಿದ್ದೇವೆ. ಅವರೆಲ್ಲರಿಗೂ ಸರ್ಕಾರದಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 10ಕ್ಕೂ ಹೆಚ್ಚಾಗಿ GST ನೊಂದಣಿ ಪಡೆದ ತೆರಿಗೆದಾರರು ಇದ್ದಾರೆ. ಈ ತೆರಿಗೆ ಹೆಚ್ಚು ಶೇಖರಣೆ ಮಾಡಿದ್ರೆ ರಾಜ್ಯ ಅಭಿವೃದ್ಧಿ ಹೆಚ್ಚು ಮಾಡಲು ಸಾಧ್ಯ. ರಾಜರ ಕಾಲದಿಂದಲೂ ತೆರಿಗೆ ವಸೂಲಿ ಮಾಡ್ತಿದ್ರು. ಅದಕ್ಕೆ ಅನೇಕ ಶಾಸನಗಳನ್ನ ನೋಡಿದ್ದೇವೆ. ಕದಂಬರು ಮಾರಾಟ ತೆರಿಗೆ ಆರಂಭ ಮಾಡಿದ್ರು ಅಂತ ಶಾಸನ ಇದೆ. ಅದಕ್ಕೆ ಪ್ರತಿಯೊಬ್ಬರು ಇತಿಹಾಸ ತಿಳಿದುಕೊಳ್ಳಬೇಕು ಎಂದರು.
ಯಾವುದರ ಮೇಲೆ ತೆರಿಗೆ ವಿಧಿಸಬೇಕು: ರಾಜರ ಕಾಲದಲ್ಲೂ ನಾಣ್ಯ ಮತ್ತು ತೆರಿಗೆ ವಸೂಲಿ ಮಾಡ್ತಿದ್ರು. ರಾಜ್ಯ ನಡೆಸಲು ತೆರಿಗೆ ಬೇಕೇ ಬೇಕು. ರಾಜರು ಆಗಲಿ, ರಾಜ್ಯ ಮತ್ತು ಕೇಂದ್ರ ಆಗಲಿ ತೆರಿಗೆ ವಸೂಲಿ ಮಾಡಿಯೇ ಆಡಳಿತ ನಡೆಸುವುದು. ಸಂವಿಧಾನದ ಮೂಲಕ ರಾಜ್ಯ ಮತ್ತು ಕೇಂದ್ರ ತೆರಿಗೆ ಅಧಿಕಾರ ವಿಧಿಸುವ ಅಧಿಕಾರ ಪಡೆಯಿತು. ಈ ಸಂವಿಧಾನದಲ್ಲಿ ವಿವರವಾಗಿದೆ ರಾಜ್ಯ ಮತ್ತು ಕೇಂದ್ರ ಯಾವ ಯಾವುದರ ಮೇಲೆ ತೆರಿಗೆ ವಿಧಿಸಬೇಕು ಅಂತ ಇದೆ. ಕರ್ನಾಟಕ ಸರ್ಕಾರ GST ಬರುವುದಕ್ಕಿಂತ ಮುಂಚೆಯೂ ತೆರಿಗೆ ವಸೂಲಿ ಮಾಡ್ತಿದ್ರು. ಎರಡು ವಿಧ ಇದೆ.. ತೆರಿಗೆ ವಸೂಲಿಯಲ್ಲಿ ಪರೋಕ್ಷ ಮತ್ತು ನೇರ ಅಂತ ಇದೆ ಎಂದು ತಿಳಿಸಿದರು.
ಕರುನಾಡು ಮೆಚ್ಚಿ ಕೊಂಡಾಡುತ್ತಿದೆ ಸಿಎಂ ಸಿದ್ದರಾಮಯ್ಯನವರ ಕ್ರಿಕೆಟ್ ಪ್ರೇಮ: ವಿಡಿಯೋ ಫುಲ್ ವೈರಲ್
ತೆರಿಗೆ ಕೊಡುವುದನ್ನ ಹೆಚ್ಚು ಮಾಡಿ: 2017ರಲ್ಲಿ ಕೇಂದ್ರ ಸರ್ಕಾರ GST ಜಾರಿಗೆ ತಂದ್ರು. ಎಲ್ಲ ರಾಜ್ಯಗಳು ಒಪ್ಪಿಗೆ ನೀಡಿದ್ರು. ಈಗ ತೆರಿಗೆ ಹಣ ರಾಜ್ಯಗಳಿಗೆ ಸರಿಯಾಗಿ ಬರುತ್ತಿಲ್ಲ ಅಂತ ಕೂಗು ಇದೆ. ಇದುವರೆಗೂ 15ನೇ ಹಣಕಾಸು ಆಯೋಗ ಆಗಿದೆ. ತೆರಿಗೆ ಕೊಡುವುದನ್ನ ಹೆಚ್ಚು ಮಾಡಿ ಅಂತ ಕೇಂದ್ರದ ಮುಂದೆ ಇಟ್ಟಿದ್ದೇವೆ. ಮೊನ್ನೆ ಎಂಪಿಗಳು ಮತ್ತು ಮೋದಿಯವರ ಮುಂದೆ ಇಟ್ಟಿದ್ದೇವೆ. ಯಾವುದೇ ಕಾರಣಕ್ಕೂ ತೆರಿಗೆ ಸೋರದ ರೀತಿ ನೋಡಿಕೊಳ್ಳಬೇಕು ಅಂತ ಸಿಎಂ ಸೂಚನೆ ನೀಡಿದ್ದಾರೆ. ಅಲ್ಲದೇ ಅನೇಕ ಇಲಾಖೆಗಳಲ್ಲಿ ಸೋರಿಕೆ ಆಗುತ್ತೆ. ಯಾವುದೇ ಕಾರಣಕ್ಕೂ ತೆರಿಗೆ ಸೋರಿಕೆ ಆಗಬಾರದು, ತೆರಿಗೆ ಕಟ್ಟಬೇಕೆಂದು ಸಿಎಂ ಹೇಳಿದರು.
ತೆರಿಗೆ ಸೋರಿಕೆ ಆಗದಂತೆ ನೋಡಿಕೊಳ್ಳಬೇಕು: ನಾವು ಗ್ಯಾರಂಟಿ ಘೋಷಣೆ ಮಾಡಿದ್ವಿ. ಇದಕ್ಕೆ 56 ಸಾವಿರ ಕೋಟಿ ಬೇಕಾಗುತ್ತೆ. ತೆರಿಗೆ ಇಲ್ಲ ಅಂದ್ರೆ ಹೇಗೆ ಅದಕ್ಕೆ ಹಣ ಒದಗಿಸುವುದು. ಆರ್ಥಿಕ ಅಸಮಾನತೆ ನಮ್ಮ ರಾಜ್ಯದಲ್ಲಿ ಇದೆ. ಅಂತಹವರಿಗೆ ಶಕ್ತಿ ತುಂಬುವ ಕೆಲಸ ಮಾಡ್ತಿದ್ದೇವೆ. ಎಲ್ಲ ದೇಶದಗಳಲ್ಲೂ ಹಿಂದುಳಿದವರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡ್ತಿದ್ದಾರೆ. ಅದರಿಂದ ನಮ್ಮ ರಾಜ್ಯದಲ್ಲಿ ತೆರಿಗೆ ಸೋರಿಕೆ ಆಗದಂತೆ ನೋಡಿಕೊಳ್ಳಬೇಕು. 2022-23ರಲ್ಲಿ 1 ಲಕ್ಷದ 22 ಸಾವಿರ 871 ಕೋಟಿ ತೆರಿಗೆ ಸಂಗ್ರಹ ಆಗಿದೆ. ಉತ್ತಮವಾದ ತೆರಿಗೆ ಸಂಗ್ರಹ ವಾಣಿಜ್ಯ ಇಲಾಖೆಗೆ ಅಧಿಕಾರಿಗಳು ಮಾಡಿದ್ದಾರೆ. 65 ಜನರಿಗೆ ಪ್ರಶಸ್ತಿ ವಿತರಣೆ ಮಾಡಿದ್ದೇವೆ. ಬೇರೆಯವರು ಕೂಡ ಅವರಿಗಿಂತ ಹೆಚ್ಚು ತೆರಿಗೆ ಸಂಗ್ರಹ ಮಾಡುವ ಪ್ರಯತ್ನ ಮಾಡಬೇಕು. 6000 ಜನರ ಇದ್ದಾರೆ, ಅವರೆಲ್ಲರೂ ಪ್ರಶಸ್ತಿ ಪಡೆಯುವ ಪ್ರಯತ್ನ ಮಾಡಬೇಕು. ಪ್ರಯತ್ನ ಮಾಡಿದ್ರನೇ ರಾಜ್ಯದ ಅಭಿವೃದ್ಧಿ ಮಾಡಲು ಸಾಧ್ಯ. ಮುಂದಿನ ವರ್ಷ ಸಮಾರಂಭ ಮಾಡುವಾಗ ಹೆಚ್ಚು ತೆರಿಗೆ ಸಂಗ್ರಹ ಮಾಡಬೇಕು ಮತ್ತು ಹೆಚ್ಚು ಪ್ರಶಸ್ತಿ ಪಡೆಯುವ ಕೆಲಸ ಮಾಡಬೇಕು ಎಂದರು.
ಸಿಲಿಕಾನ್ ಸಿಟಿಯ ಕರಾಳ ಮುಖ: ಬೆಂಗಳೂರಿನ ಸುವ್ಯವಸ್ಥೆಗೆ ಸವಾಲಾದ ಬೈಕರ್ ಗ್ಯಾಂಗ್‌ಗಳು ಮತ್ತು ಭ್ರಷ್ಟಾಚಾರ
ಅಡ್ವೋಕೇಟ್ ಜನರಲ್ ಜೊತೆ ಮಾತಾಡ್ತೇನೆ: ರಾಜ್ಯದಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೆ ಕರವೇ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕನ್ನಡರಿಗರೇ ಉದ್ಯೋಗದಲ್ಲಿ ವಿಶೇಷ ಮೀಸಲಾತಿ ಕೊಡಬೇಕು ಅಂತ ಹೋರಾಟ ಮಾಡಿದ್ದಾರೆ. ಇದಕ್ಕೊಂದು ಕಾನೂನು ಮಾಡುವಂತೆ ಕರವೇ ಅವರು ಮನವಿ ಮಾಡಿದ್ದಾರೆ. ನಾನು ಸಂವಿಧಾನದ ಹಿನ್ನಲೆಯಲ್ಲಿ ಚರ್ಚೆ ಮಾಡೋದಾಗಿ ಅವರಿಗೆ ತಿಳಿಸಿದ್ದೇನೆ. ಅಡ್ವೋಕೇಟ್ ಜನರಲ್ ಜೊತೆ ಮಾತಾಡೋದಾಗಿ ಹೇಳಿದ್ದೇನೆ. ಸರೋಜಿನಿ ಮಹಿಷಿ ವರದಿ ಜಾರಿ ಮಾಡಿ ಅನ್ನೋದು ಒಂದು ಭಾಗ. ಅಲ್ಲದೆ ಇದಕ್ಕಾಗಿ ವಿಶೇಷ ಕಾನೂನು ಮಾಡಿ ಅಂತ ಹೇಳ್ತಿದ್ದಾರೆ. ಕಾನೂನು ಮಾಡೋಕೆ ಸಂವಿಧಾನಾತ್ಮಕವಾಗಿ ಅವಕಾಶ ಇದೆಯಾ ಅಂತ ನೋಡೋದಾಗಿ ಹೇಳಿದ್ದೇನೆ ಎಂದು ತಿಳಿಸಿದರು.