ಸಿಎಂ ಬದಲಾವಣೆ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತೀರಿ?: ಸಚಿವ ಶಿವಾನಂದ ಪಾಟೀಲ

By Kannadaprabha News  |  First Published Jul 1, 2024, 3:40 PM IST

ಮುಖ್ಯಮಂತ್ರಿ ಬದಲಾವಣೆ ಕುರಿತು ಚಂದ್ರಶೇಖರನಾಥ ಸ್ವಾಮೀಜಿ ಅವರು ತಮ್ಮ ವಿಚಾರ ಹೇಳಿದ್ದು, ಅದರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತೀರಿ. ಅದು ಆಗೋದಾ? ಹೋಗೋದಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.


ಹಾವೇರಿ (ಜು.01): ಮುಖ್ಯಮಂತ್ರಿ ಬದಲಾವಣೆ ಕುರಿತು ಚಂದ್ರಶೇಖರನಾಥ ಸ್ವಾಮೀಜಿ ಅವರು ತಮ್ಮ ವಿಚಾರ ಹೇಳಿದ್ದು, ಅದರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತೀರಿ. ಅದು ಆಗೋದಾ? ಹೋಗೋದಾ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬರು ಮಾತನಾಡಿದರು ಎಂದು ಅದಕ್ಕೆ ಯಾಕೆ ಪ್ರತಿಕ್ರಿಯೆ ಕೊಡಬೇಕು? ಒಬ್ಬರು ಸ್ವಾಮೀಜಿ ಮಾತನಾಡಿದರೆ ರಾಜಕಾರಣ ಆಗುತ್ತಾ? ಸ್ವಾಮೀಜಿಗಳ ಮಾತು ಅಲ್ಲೇ ಕೇಳಿ ಅಲ್ಲೇ ಬಿಡಬೇಕು. ಅದು ಯಾರು ಅವರನ್ನು ಬಳಸಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. 

ಆದರೆ ಸ್ವಾಮೀಜಿಗಳು ರಾಜಕಾರಣ ಮಾತನಾಡಬಾರದು, ರಾಜಕಾರಣಿ ಮಾತನಾಡಿದರೆ ಅದಕ್ಕೊಂದು ಬೆಲೆ. ಸ್ವಾಮೀಜಿ ಮಾತನಾಡಿದರೆ ಸರ್ಕಾರ ಪತಲವಾಗುತ್ತಾ? ಯಾವ ಕಾರಣಕ್ಕೂ ಆಗೋದಿಲ್ಲ ಎಂದು ಸ್ಪಷ್ಟಪಡಿಸಿದರು. ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆಗೆ ಟಿಕೆಟ್ ಹೈಕಮಾಂಡ್‌ ನಿರ್ಧರಿಸುತ್ತದೆ. ಕಾರ್ಯಕರ್ತರು ಯಾರಿಗೆ ಕೊಡುವಂತೆ ಹೇಳ್ತಾರೋ ಅವರಿಗೆ ಕೊಡುತ್ತೇವೆ. ನಾವೆಂದೂ ಒಳ ಒಪ್ಪಂದ ಮಾಡಿಕೊಂಡಿಲ್ಲ, ನಾನಿದ್ದಾಗ ಅದು ಆಗೋದಿಲ್ಲ ಎಂದರು.

Tap to resize

Latest Videos

ಸಿಎಂ ಬದಲಾವಣೆ ಚರ್ಚೆ ಮುಗಿದ ಅಧ್ಯಾಯ: ಸಚಿವ ಸತೀಶ್‌ ಜಾರಕಿಹೊಳಿ

ಜಾರ್ಜ್‌ ಫರ್ನಾಂಡಿಸ್ ಲಕ್ಷಾಂತರ ಜನರಿಗೆ ಪ್ರೇರಕ ಶಕ್ತಿ: ಮಾಜಿ ಕೇಂದ್ರ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರು ವ್ಯಕ್ತಿಯಾಗಿರದೇ ಶಕ್ತಿಯಾಗಿದ್ದರು. ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದರು ಎಂದು ಜವಳಿ ಸಚಿವ ಶಿವಾನಂದ ಪಾಟೀಲ್‌ ಸ್ಮರಿಸಿದರು. ‘ಜಾರ್ಜ್‌ ಫರ್ನಾಂಡಿಸ್‌ ಸೋಷಿಯಲ್‌ ಎಜುಕೇಷನಲ್‌ ಟ್ರಸ್ಟ್‌’ ಬಸವ ಭವನದಲ್ಲಿ ಆಯೋಜಿಸಿದ್ದ ‘ಪದ್ಮ ವಿಭೂಷಣ ಜಾರ್ಜ್‌ ಫರ್ನಾಂಡಿಸ್‌ ಅವರ 95ನೇ ಜನ್ಮ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾರ್ಜ್‌ ಫರ್ನಾಂಡಿಸ್‌ ಅವರು ಹೋರಾಟದ ಮನೋಭಾವ ಹೊಂದಿದ್ದು, ಅದರಲ್ಲೂ ಕಾರ್ಮಿಕರ ಪರ ಹೋರಾಟದಲ್ಲಿ ಸದಾ ಮುಂದಿರುತ್ತಿದ್ದರು. ಯಾವುದೇ ಹೋರಾಟಗಳನ್ನು ತಾರ್ಕಿಕ ಅಂತ್ಯಕ್ಕೆ ಕಾಣಿಸದೇ ವಿರಮಿಸುತ್ತಿರಲಿಲ್ಲ ಎಂದು ಬಣ್ಣಿಸಿದರು.

ಚುನಾವಣಾ ಪ್ರಚಾರ: ಹುಟ್ಟು-ಸಾವಿನ ನಡುವೆ ಕೆಲವರು ಅಳಿಸಲಾಗದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುತ್ತಾರೆ. ಈ ಸಾಲಿಗೆ ಜಾರ್ಜ್‌ ಫರ್ನಾಂಡಿಸ್‌ ಅವರು ಸೇರುತ್ತಾರೆ. ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ಈ ಹಿಂದೆ ತಾವು ಜನತಾದಳದಿಂದ ಸ್ಪರ್ಧಿಸಿದ್ದಾಗ ತಮ್ಮ ಪರವಾಗಿ ಜಾರ್ಜ್‌ ಫರ್ನಾಂಡಿಸ್‌ ಅವರು ಪ್ರಚಾರ ಕೈಗೊಂಡಿದ್ದರು. ಪ್ರಚಾರ ಮುಗಿಸಿ ಕ್ಷೇತ್ರ ಬಿಟ್ಟು ತರಳುವಾಗ ಚುನಾವಣಾ ಖರ್ಚಿಗೆಂದು ₹20 ಸಾವಿರ ನೀಡಿದ್ದರು. ಇನ್ನೊಮ್ಮೆ ಬರುತ್ತೇನೆ ಎಂದು ಹೇಳಿ ತೆರಳಿದ್ದವರು ಪುನಃ ಆಗಮಿಸಿ ಪ್ರಚಾರ ನಡೆಸಿ ಮತ್ತೊಮ್ಮೆ ₹20 ಸಾವಿರ ನೀಡಿದ್ದರು ಎಂದು ನೆನಪಿಸಿಕೊಂಡರು.

ಸಿದ್ದು, ಡಿಕೆಶಿ ಇಬ್ಬರೂ ಕಾಂಗ್ರೆಸ್‌ನ ಎರಡು ಕಣ್ಣು ಇದ್ದ ಹಾಗೆ‌: ಸಚಿವೆ ಲಕ್ಷ್ಮಿ ಹೆಬ್ಬಾಳಕರ

ಜಾರ್ಜ್‌ ಫರ್ನಾಂಡಿಸ್‌ ಸೋಷಿಯಲ್‌ ಎಜುಕೇಷನಲ್‌ ಟ್ರಸ್ಟ್‌ ಪದಾಧಿಕಾರಿಗಳು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಟ್ರಸ್ಟ್‌ನ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಸಾಧ್ಯವಾದವುಗಳನ್ನು ಈಡೇರಿಸಲಾಗುವುದು. ಟ್ರಸ್ಟ್‌ನ ಕಾರ್ಯಗಳಲ್ಲಿ ನಾನೂ ಕೈಜೋಡಿಸುತ್ತೇನೆ ಎಂದು ಭರವಸೆ ನೀಡಿದರು.ಮಾಜಿ ಕಾರ್ಮಿಕ ಸಚಿವ ಎಸ್‌.ಕೆ.ಕಾಂತಾ, ಮಾಜಿ ಶಾಸಕ ಮೈಕೇಲ್‌ ಫರ್ನಾಂಡಿಸ್‌ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಮಾಜಿ ಶಾಸಕ ಎಂ.ಪಿ.ನಾಡಗೌಡ ಉಪಸ್ಥಿತರಿದ್ದರು.

click me!