ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿ, ಜೆಡಿಎಸ್ ಪಕ್ಷ ಮುಂಬರುವ ಲೋಕಸಭಾ ಚುನಾವಣೆಗೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಸೆಣಸಲಿವೆ ಎಂಬ ಸುದ್ದಿ ಹರಿದಾಡುತ್ತಿದೆ.
ಮಂಡ್ಯ (ಜೂ.19) ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿ, ಜೆಡಿಎಸ್ ಪಕ್ಷ ಮುಂಬರುವ ಲೋಕಸಭಾ ಚುನಾವಣೆಗೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಸೆಣಸಲಿವೆ ಎಂಬ ಸುದ್ದಿ ಹರಿದಾಡುತ್ತಿದೆ.
ಎರಡು ಪಕ್ಷಗಳ ನಡುವೆ ನಡೆಯುತ್ತಿರುವ ಈ ಬೆಳವಣಿಗೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಶಿವರಾಮೇಗೌಡರನ್ನು, ಅವರು, ನೇರವಾಗಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಬೇಡ. ಪಕ್ಷದೊಂದಿಗೆ ಹೊಂದಾಣಿಕೆಗೆ ಬರುವವರ ಬಗ್ಗೆ ಎಚ್ಚರವಿರಲಿ ಎಂದರು.
undefined
ಮೈತ್ರಿ ಖಾತ್ರಿಗೆ ಪುಷ್ಠಿ ನೀಡುತ್ತಿದೆ ಜೆಡಿಎಸ್-ಬಿಜೆಪಿಯ ಬೆಳವಣಿಗೆ: ಇದರಿಂದ ದಳಕ್ಕೆ ಲಾಭ ಏನು ?
ಈ ಬಾರಿಯ ಚುನಾವಣೆ ಮುಂದಿಟ್ಟುಕೊಂಡು ಹೊಂದಾಣಿಕೆಗೆ ಬರ್ತಾರೆ ಎಂಬುದು ಗೊತ್ತು. ಯಾರು ಬಿಜೆಪಿಯೊಂದಿಗೆ ಹೊಂದಾಣಿಕೆಗೆ ಬರ್ತಾರೋ ಅವರ ಬಗ್ಗೆ ಎಚ್ಚರವಿರಲಿ. ನಾನು ರಾಜ್ಯ ನಾಯಕರಲ್ಲಿ ಮನವಿ ಮಾಡ್ತೇನೆ. ಈ ಕುರಿತು ರಾಷ್ಟ್ರೀಯ ನಾಯಕರಿಗೆ ಸೂಕ್ಷ್ಮವಾಗಿ ಮನದಟ್ಟು ಮಾಡಿಕೊಡ್ತೇನೆ ಎಂದರು.
ಮಂಡ್ಯದಲ್ಲಿ ಬಿಜೆಪಿ ಮುಂದೇ ಬರಬೇಕಾ, ಬೇಡ್ವಾ?
ಈ ಬಾರಿಯೂ ಮಂಡ್ಯದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಮಂಡ್ಯದಲ್ಲಿ ಬಿಜೆಪಿ ಮುಂದೆ ಬರಬೇಕಾ?.. ಬೇಡ್ವಾ..ನೀವೇ ನಿರ್ಧಾರ ಮಾಡಿ.
ಹಳೆ ಮೈಸೂರು ಭಾಗದಲ್ಲಿ ಪಾರ್ಟಿ ಕಟ್ಟಬೇಕು, ಪಕ್ಷ ಬರಬೇಕು ಅಂತಾ ಭಾಷಣ ಮಾಡ್ತೀರಾ. ಆದರೆ ಪಕ್ಷ ಬಲಪಡಿಸುವ ನಿರ್ಧಾರ ತೆಗೆದುಕೊಳ್ತಿಲ್ಲ. ಹೀಗಾಗಿ ಹೊಂದಾಣಿಕೆ ಎಲ್ಲ ಬದಿಗಿಟ್ಟು ಬಿಜೆಪಿ ಪಕ್ಷ ಬಲಪಡಿಸಲು ಕ್ರಮಕೈಗೊಳ್ಳಿ. ನಾನು ಕೂಡ ಪಕ್ಷದ ಬಲವರ್ಧನೆಗೆ ಹೋರಾಟ ಮಾಡ್ತೇನೆ. ಎಂಎಲ್ ಎ ಎಲೆಕ್ಷನಲ್ಲಿ ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿ ಕಳೆದ ಬಾರಿಗಿಂದ ಉತ್ತಮ ಸಾಧನೆ ಮಾಡಿದೆ. ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ, ಮಂಡ್ಯದಲ್ಲಿ ಉತ್ತಮ ಮತ ಪಡೆದಿರುವ ಅಭ್ಯರ್ಥಿಗಳು. ಇದೀಗ ಏಕಾಏಕಿ ಲೋಕ ಎಲೆಕ್ಷನ್ ನಲ್ಲಿ ಹೊಂದಾಣಿಕೆ ಮಾಡಿದ್ರೆ ಬಿಜೆಪಿಗೆ ಡ್ಯಾಮೇಜ್ ಆಗುವ ಸಾಧ್ಯತೆ. ಮತ್ತೊಂದು ಕಡೆ ಮೈತ್ರಿಯಾದ್ರೆ ಮಂಡ್ಯ ಕ್ಷೇತ್ರ ಬಿಟ್ಟು ಕೊಡಬೇಕು ಎಂಬ ಆತಂಕ. ಸ್ಥಳೀಯ ಬಿಜೆಪಿ ಮುಖಂಡರ ಭವಿಷ್ಯಕ್ಕೂ ಪೆಟ್ಟು ಬೀಳುವ ಸಾಧ್ಯತೆ. ಆದ್ರಿಂದ ಜೆಡಿಎಸ್ ಜೊತೆಗೆ ಹೊಂದಾಣಿಕೆ ಬೇಡ ಎನ್ನುತ್ತಿರುವ ಶಿವರಾಮೇಗೌಡ.
ಬಿಜೆಪಿ, ಜೆಡಿಎಸ್ ನಾಯಕರ ನಿದ್ದೆ ಕೆಡಿಸಿದ ಕಾಂಗ್ರೆಸ್ ಗ್ಯಾರಂಟಿ: ಸಚಿವ ಎಚ್.ಸಿ.ಮಹದೇವಪ್ಪ
ವಿಧಾನಸಭೆ ಸೋಲಿಗೆ ನಾಯಕರ ನಿರ್ಣಯಗಳೇ ಕಾರಣ:
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲು. ಈ ಸೋಲಿಗೆ ರಾಷ್ಟ್ರೀಯ ನಾಯಕರು ತೆಗೆದುಕೊಂಡ ನಿರ್ಣಯಗಳೆ ಕಾರಣ. ಆ ನಿರ್ಣಯಗಳನ್ನ ಒಳ್ಳೆಯದಕ್ಕೆ ತಕೊಂಡ್ರೋ, ಕೆಟ್ಟದ್ದಕ್ಕೆ ತಕೊಂಡ್ರೋ ಗೊತ್ತಿಲ್ಲ. ನಾನು ಅದರ ಬಗ್ಗೆ ಟೀಕೆ ಮಾಡೋಕೆ ಹೋಗಲ್ಲ. ಬಿಜೆಪಿ ಕೈ ಹಿಡಿಯಲು ಜನ ರೆಡಿ ಇದ್ರು. ನಾಯಕರು ಮಾಡಿದ ಕೆಲವು ತಪ್ಪು ನಿರ್ಧಾರಗಳಿಂದ ಬಿಜೆಪಿ ಈ ಮಟ್ಟಕ್ಕೆ ಹೀನಾಯವಾಗಿ ಸೋಲು ಕಂಡಿದೆ. ಯಾಕೆ ಈ ರೀತಿ ಪ್ರಯೋಗ ಮಾಡಿದ್ರೋ ಗೊತ್ತಿಲ್ಲ. ರಾಷ್ಟ್ರೀಯ ನಾಯಕರು ದೊಡ್ಡವರು ಅವರಿಗೆ ಪೂರ್ಣ ಪ್ರಮಾಣದಲ್ಲಿ ಹೇಳೋಕೆ ಆಗಲ್ಲ. ಆದ್ರೆ ನನ್ನ ಅನಿಸಿಕೆಗಳನ್ನ ತಿಳಿಸುವ ಕೆಲಸ ಮಾಡ್ತೇನೆ. ಇದರಲ್ಲಿ ಹಿಂದೆ ಸರಿಯೋ ಮಾತಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ದ ಅಸಮಾಧಾನ ಹೊರಹಾಕಿದ ಮಾಜಿ ಸಂಸದ ಶಿವರಾಮೇಗೌಡ.