ಚಿಂಚೋಳಿ ತಾಲೂಕಿನಲ್ಲಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲಾಗುತ್ತಿದೆ. ಇಥೆನಾಲ್ ಘಟಕ ಜನವರಿ ತಿಂಗಳಲ್ಲಿ ಪ್ರಾರಂಭಗೊಳ್ಳುತ್ತಿದೆ. ಇದರಿಂದಾಗಿ ರೈತರಿಗೆ ಮತ್ತು ಅನೇಕರಿಗೆ ಉದ್ಯೋಗ ಸಿಗಲಿದೆ.
ಚಿಂಚೋಳಿ(ಡಿ.27): ಮೀಸಲು ಮತಕ್ಷೇತ್ರದಲ್ಲಿ ಬಿಜೆಪಿ ಸರಕಾರದಿಂದ ಸಾಕಷ್ಟುಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಳೆದ ಉಪಚುನಾವಣೆಯಲ್ಲಿ ಕ್ಷೇತ್ರದ ಜನರಿಗೆ ನೀಡಿದ ಅಶ್ವಾಸನೆಗಳೆಲ್ಲವೂ ಈಡೇರಿಸಲಾಗುತ್ತಿದೆ. 2023ರಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿ ಗೆಲವು ಖಚಿತವಾಗಿದೆ ಎಂದು ಸಂಸದ ಡಾ. ಉಮೇಶ ಜಾಧವ್ ಹೇಳಿದರು.
ತಾಲೂಕಿನ ಚಿಮ್ಮನಚೋಡ ಗ್ರಾಮದ ಸಂಗಮೇಶ್ವರ ದೇವಸ್ಥಾನದಲ್ಲಿ ನಡೆದ ಬಿಜೆಪಿ ಕಾಣಿರ್ಯಕಾರಿ ಸಭೆ ಹಾಗೂ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ರವರ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲಾಗುತ್ತಿದೆ. ಇಥೆನಾಲ್ ಘಟಕ ಜನವರಿ ತಿಂಗಳಲ್ಲಿ ಪ್ರಾರಂಭಗೊಳ್ಳುತ್ತಿದೆ. ಇದರಿಂದಾಗಿ ರೈತರಿಗೆ ಮತ್ತು ಅನೇಕರಿಗೆ ಉದ್ಯೋಗ ಸಿಗಲಿದೆ. ಮನ್ನಾಎಕ್ಕೆಳ್ಳಿ ಬಾಪೂರದಿಂದ ಚಿಂಚೋಳಿ ಪಟ್ಟಣದ ಮೂಲಕ ತೆಲಂಗಾಣದ ಮಹೆಬೂಬನಗರಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಮುಲ್ಲಾಮಾರಿ ನದಿಗೆ ಬ್ಯಾರೇಜ್ ನಿರ್ಮಿಸಲಾಗಿದೆ ಈ ಎಲ್ಲಾ ಅಭಿರ್ವದ್ಧಿ ಕಾರ್ಯಗಳೇ ಗೆಲುವಿಗೆ ಸಾಕ್ಷಿ ಎಂದರು.
undefined
ಧರಂಸಿಂಗ್ ಬಡವರ ಪರ ಬದ್ಧತೆ ಇದ್ದಂತಹ ರಾಜಕಾರಣಿ: ಸಿದ್ದರಾಮಯ್ಯ
ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದಕ್ಕಾಗಿ ಚಂದ್ರಂಪಳ್ಳಿ ಜಲಾಶಯ ಹತ್ತಿರ ಪ್ರವಾಸೋದ್ಯಮ ಇಲಾಖೆಯಿಂದ ರು.5 ಕೋಟಿ ನೀಡಲಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿನ ಜಮೀನುಗಳಿಗೆ ನೀರಾವರಿ ಮಾಡುವುದಕ್ಕಾಗಿ ರು.204 ಕೋಟಿ ಮಂಜೂರು ಮಾಡಲಾಗಿದೆ. ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಮತ್ತು ಸಣ್ಣನೀರಾವರಿ ಕೆರೆಗಳ ಅಭಿವೃದ್ಧಿಗಾಗಿ ಸಾಕಷ್ಟುಅನುದಾನ ನೀಡಲಾಗಿದೆ. ಬಿಜೆಪಿ ಕಾರ್ಯಕರ್ತರು ನಮ್ಮ ಬಿಜೆಪಿ ಸರಕಾರದ ಅಭಿವೃದ್ಧಿ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಬೇಕು. 2023 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆಲುವಿಗೆ ಎಲ್ಲರೂ ಶ್ರಮಿಸಬೇಕಾಗಿದೆ ಎಂದು ಉಮೇಶ ಜಾಧವ್ ಹೇಳಿದರು.
ಶಾಸಕ ಡಾ. ಅವಿನಾಶ ಜಾಧವ್ ಮಾತನಾಡಿ, ತಾಲೂಕಿನಲ್ಲಿ ಬಿಜೆಪಿ ಸರಕಾರದಿಂದ ಸಾಕಷ್ಟುಅಭಿವೃದ್ಧಿ ಕೆಲಸಗಳಾಗುತ್ತಿವೆ. ವಿರೋಧ ಪಕ್ಷದವರು ನಮ್ಮ ಸಾಧನೆಗಳನ್ನು ಸಹಿಸಿಕೊಳ್ಳದೇ ಸುಳ್ಳು ಅಪಪ್ರಚಾರ ನಡೆಸುತ್ತಿದ್ದಾರೆ. ನಮ್ಮ ಕಾರ್ಯರ್ತರು ಅದರ ಬಗ್ಗೆ ಯಾವುದೇ ತಲೆಕಡಿಸಿಕೊಳ್ಳುವ ಅಗತ್ಯವಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿರವರು ನಮ್ಮ ಕ್ಷೇತ್ರಕ್ಕೆ ಸಾಕಷ್ಟುಅನುದಾನ ನೀಡಿದ್ದಾರೆ. ಮುಂದಿನ ಜನೇವರಿ ತಿಂಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಉದ್ಘಾಟನೆಗೊಳ್ಳಲಿವೆ ಎಂದರು.
ಸಭೆಯಲ್ಲಿ ಗುರನಾಥ ಜಾಂತಿಕರ, ಸೂರ್ಯಕಾಂತ ಡೋಣಿ, ಈಶ್ವರಸಿಂಗ ಠಾಕೂರ ಬಿಜೆಪಿ ಸಂಘಟನೆ ಕುರಿತು ಮಾತನಾಡಿದರು. ಬಿಜೆಪಿ ಮುಖಂಡರಾದ ಮಂಡಲ ಅಧ್ಯಕ್ಷರಾದ ಸಂತೋಷ ಗಡಂತಿ, ಸಂಜಯ ಮಿಸ್ಕಿನ್, ಪ್ರಭಾಕರರಾವ ಕುಲಕರ್ಣಿ, ಭೀಮಶೆಟ್ಟಿಮುರುಡಾ, ಭೀಮಶೆಟ್ಟಿಮುಕ್ಕಾ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ್ ಪಾಟೀಲ, ಮಲ್ಲಿನಾಥ ಕೋಲಕುಂದಿ, ಅಶೋಕ ಪಾಟೀಲ ಇನ್ನಿತರಿದ್ದರು. ಚಿಂಚೋಳಿ ತಾಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಂಸದ ಡಾ. ಉಮೇಶ ಜಾಧವ್ ಮಾತನಾಡಿದರು. ಶಾಸಕ ಡಾ. ಅವಿನಾಶ ಜಾಧವ್, ಮೋತಿರಾಮನಾಯಕ, ಸಂತೋಷ ಗಡಂತಿ ಇದ್ದರು.