ಗೋಕಾಕನಲ್ಲಿ ಕೇವಲ ಕೆಲಸವಲ್ಲ ನಾನು ಕರದಂಟು ಏಕೆ ತಿನ್ನಬಾರದು? ಕಾಂಗ್ರೆಸ್ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜಿಲ್ಲೆಯ ನಾಯಕರು ಒಪ್ಪಿಕೊಂಡರೆ ಗೋಕಾಕ ಚುನಾವಣೆಯಲ್ಲಿ ನಿಲ್ಲಲು ಸಿದ್ಧಳಿದ್ದೇನೆ: ಹೆಬ್ಬಾಳಕರ
ಬೆಳಗಾವಿ(ಡಿ.27): ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾಜಿ ಸಚಿವ, ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಸಕ್ರಿಯವಾಗಿರುವ ಬೆನ್ನಲ್ಲೇ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕೂಡ ಟಾಂಗ್ ನೀಡಲು ಮುಂದಾಗಿದ್ದಾರೆ. ಹೈಕಮಾಂಡ್ ಸೂಚನೆ ನೀಡಿದರೇ ಗೋಕಾಕ ಕ್ಷೇತ್ರದಲ್ಲಿ ಸ್ಪರ್ಧಿಸುವೆ ಎಂದು ಹೇಳುವ ಮೂಲಕ ರಮೇಶ ಜಾರಕಿಹೊಳಿಗೆ ಪರೋಕ್ಷವಾಗಿ ಸವಾಲು ಎಸೆಯಲು ಮುಂದಾಗಿದ್ದಾರೆ. ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಕಾಂಗ್ರೆಸ್ ಹೈಕಮಾಂಡ್ ಗೋಕಾಕ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡು ಎಂದರೆ ಕಣ್ಣು ಮುಚ್ಚಿಕೊಂಡು ಹೋಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ಮೂಲಕ ಶಾಸಕ ರಮೇಶ ಜಾರಕಿಹೊಳಿಗೆ ಸವಾಲು ಹಾಕಿದ್ದಾರೆ. ಜತೆಗೆ ಗೋಕಾಕನಲ್ಲಿ ಸ್ಪರ್ಧೆ ಮಾಡಲು ನಾನು ಸಿದ್ಧ ಎಂಬ ಸಂದೇಶವನ್ನೂ ಪರೋಕ್ಷವಾಗಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟುಕ್ಷೇತ್ರಗಳನ್ನು ಸೂಕ್ಷ್ಮವಾಗಿ ನೋಡುತ್ತಿದ್ದೇವೆ. 18 ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಗೆಲವು ಸಾಧಿಸುತ್ತೇವೆ ಎನ್ನುವುದು ಅತಿಶಯೋಕ್ತಿಯಾಗುತ್ತಿದೆ. ನಾನು ಪ್ರಾಕ್ಟಿಕಲ… ಪೊಲಿಟಿಷಿಯನ್. ನಾನು ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡಿಯೋದಿಲ್ಲ. ಅದರ ಬಗ್ಗೆ ಅಭ್ಯಾಸ ಮಾಡಿ, ಹೋಮ್ ವರ್ಕ್ ಮಾಡುತ್ತೇನೆ. ಕಳೆದ 10, 15 ವರ್ಷದ ಲಕ್ಷ್ಮಿ ಹೆಬ್ಬಾಳಕರಗೂ, ಇವತ್ತಿನ ಲಕ್ಷ್ಮಿ ಹೆಬ್ಬಾಳಕರಗೂ ಬಹಳಷ್ಟುವ್ಯತ್ಯಾಸ ಇದೆ. ಎಕ್ಸಪಿರಿಯನ್ಸ್ ಮ್ಯಾನ್ ಪರ್ಫೆಕ್ಟ್ ಮ್ಯಾನ್ ಅಂತ ಹೇಳುತ್ತಾರೆ. ಆ ಹೊಡೆತ, ಅವಮಾನ, ಸನ್ಮಾನಗಳು ಸೋಲು, ಲಕ್ಷ್ಮಿ ಹೆಬ್ಬಾಳಕರ ಹಿಂದಿನ, ಇವತ್ತಿನ ಹೆಬ್ಬಾಳಕರಗೂ ಬಹಳ ವ್ಯತ್ಯಾಸ ಇದೆ. ನನಗೆ ಗೊತ್ತು ಗೋಕಾಕ ಜನತೆ ಏನು ಅಂತ. ನನಗೇನು ಹೊಸತೇನಲ್ಲ. ರಾಜಕೀಯ ದಾಳಗಳು, ಹೈಕಮಾಂಡ್ ಇಷ್ಟಪಟ್ಟರೆ, ಜನ ಸೂಚಿಸಿದರೇ ನಾನು ಗೋಕಾಕನಿಂದ ಸ್ಪರ್ಧೆ ಮಾಡುತ್ತೇನೆ ಎಂದರು.
ಶಾಸಕಿಯಾದ ತಾಸಲ್ಲಿ ಹೆಬ್ಬಾಳ್ಕರ್ ತಲೆ ಏರಿ ಕೂತರು: ರಮೇಶ್ ಜಾರಕಿಹೊಳಿ
ಇತ್ತೀಚೆಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಸಮಾವೇಶ ನಡೆಸಿ ಭಾರೀ ಸಂಚಲ ಮೂಡಿಸಿದ್ದರು. ನನ್ನ ಶಕ್ತಿ ಏನು ಎನ್ನುವುದನ್ನು ಈ ಬಾರಿಯೂ ತೋರಿಸುತ್ತೇನೆ ಎಂದು ರಮೇಶ ಸವಾಲು ಕೂಡ ಹಾಕಿದ್ದರು. ಅಲ್ಲದೆ, ಮರಾಠಾ ಸಮುದಾಯದ ನಾಗೇಶ ಮನ್ನೋಳಕರ ಅವರ ಪರವಾಗಿ ಸಾಕಷ್ಟುಪ್ರಚಾರ ಕೂಡ ಮಾಡಿದ್ದಾರೆ
ಗೋಕಾಕನಲ್ಲಿ ಕೇವಲ ಕೆಲಸವಲ್ಲ ನಾನು ಕರದಂಟು ಏಕೆ ತಿನ್ನಬಾರದು? ಕಾಂಗ್ರೆಸ್ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜಿಲ್ಲೆಯ ನಾಯಕರು ಒಪ್ಪಿಕೊಂಡರೆ ಗೋಕಾಕ ಚುನಾವಣೆಯಲ್ಲಿ ನಿಲ್ಲಲು ಸಿದ್ಧಳಿದ್ದೇನೆ. ಬೆಳಗಾವಿ ಜಿಲ್ಲೆಯಲ್ಲಿ ಮೂರು ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನುಳಿದ 15 ಕ್ಷೇತ್ರಗಳಲ್ಲಿ ನನ್ನ ಹೈಕಮಾಂಡ್ ಎಲ್ಲಿಯೇ ಸೂಚನೆ ನೀಡಿದರೂ ನಾನು ಅಲ್ಲಿ ಸ್ಪರ್ಧಿಸಲು ಸಿದ್ಧ ಅಂತ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದ್ದಾರೆ.