ಮಹಾರಾಷ್ಟ್ರ ಸದನದಲ್ಲಿ ಕರ್ನಾಟಕ ವಿರುದ್ಧ ನಿರ್ಣಯ ಪಾಸ್ ಮಾಡಲಾಗಿದ್ದು, ಬೆಳಗಾವಿ ಸೇರಿ 865 ಹಳ್ಳಿಗಳನ್ನ ಮಹಾರಾಷ್ಟ್ರಕ್ಕೆ ಸೇರಿಸಲು ಠರಾವು ಪಾಸ್ ಮಾಡಲಾಗಿದೆ.
ಬೆಳಗಾವಿ (ಡಿ.27): ಮಹಾರಾಷ್ಟ್ರ ಸದನದಲ್ಲಿ ಕರ್ನಾಟಕ ವಿರುದ್ಧ ನಿರ್ಣಯ ಪಾಸ್ ಮಾಡಲಾಗಿದೆ. ಬೆಳಗಾವಿ ಸೇರಿ 865 ಹಳ್ಳಿಗಳನ್ನ ಮಹಾರಾಷ್ಟ್ರಕ್ಕೆ ಸೇರಿಸಲು ಠರಾವು ಪಾಸ್ ಮಾಡಲಾಗಿದೆ. ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ, ಬಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕೆಂದು ಕೇಂದ್ರ ಸರ್ಕಾರ ಮಹಾರಾಷ್ಟ್ರ ಪರವಾಗಿ ಕ್ರಮಕೈಗೊಳ್ಳಲು ಒತ್ತಾಯ ಮಾಡಲಾಗುವುದು ಎಂದು ಮಹಾರಾಷ್ಟ್ರದ ವಿಧಾನಸಭೆಯ ಅಧಿವೇಶನದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ನಿರ್ಣಯ ಪಾಸ್ ಮಾಡಿದ್ದಾರೆ.
ಮಹಾ ಮುಖ್ಯಮಂತ್ರಿ ನಿರ್ಣಯಕ್ಕೆ ಸರ್ವಸಮ್ಮತ ಒಪ್ಪಿಗೆ ನೀಡಲಾಗಿದೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಬಾಲ್ಕಿ ಸೇರಿ 865 ಹಳ್ಳಿಗಳು ಮಹಾರಾಷ್ಟ್ರ ಕ್ಕೆ ಸೇರಬೇಕು. ಮರಾಠಿ ಭಾಷಿಕರ ಪ್ರದೇಶಗಳ ಒಂದ ಇಂಚು ಜಾಗವನ್ನು ನಾವು ಬಿಟ್ಟು ಕೊಡುವುದಿಲ್ಲ. ಕೇಂದ್ರ ಸರ್ಕಾರ ಬೆಳಗಾವಿ ಸೇರಿ 865 ಹಳ್ಳಿಗಳನ್ನ ಮಹಾರಾಷ್ಟ್ರ ಸೇರ್ಪಡೆ ಮಾಡಲು ಸಹಕಾರ ನೀಡುವಂತೆ ಸದನದಲ್ಲಿ ಠರಾವ್ ಪಾಸ್ ಮಾಡಲಾಗಿದೆ. ಕರ್ನಾಟಕ ವಿಧಾನ ಸಭೆಯಲ್ಲಿ ತಗೆದುಕೊಂಡ ತೀರ್ಮಾನಕ್ಕೆ ವಿರೋಧವಿದೆ, ಧಿಕ್ಕಾರವಿದೆ ಎಂದ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ತಿಳಿಸಿದರು.
ಗಡಿ ವಿವಾದ: ಕರ್ನಾಟಕದ ವಿರುದ್ಧ ಇಂದು ಮಹಾರಾಷ್ಟ್ರ ಖಂಡನಾ ನಿರ್ಣಯ
ಮಹಜನ್ ವರದಿಯೇ ಅಂತಿಮ: ದೇಶದಲ್ಲಿ ಹಲವು ರಾಜ್ಯಗಳು ಗಡಿ ವಿಚಾರದಲ್ಲಿ ಕ್ಯಾತೆ ಮಾಡದೇ ಸುಮ್ಮನೆ ಆಡಳಿತ ನಡೆಸುತ್ತಿವೆ. ಆದರೆ, ಮಹಾರಾಷ್ಟ್ರದಲ್ಲಿ ಎಂದಿಗೂ ಗಡಿ ವಿಚಾರದಲ್ಲಿ ಕ್ಯಾತೆ ನಡೆಯುತ್ತಲೇ ಇದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮವಾಗಿದೆ. ಮಹಾರಾಷ್ಟ್ರ ಸರ್ಕಾರ ಸುಮ್ಮನೆ ಕ್ಯಾತೆ ತಗೆಯುತ್ತಿದೆ. ಅವರು ಬೇಕು ಅಂತ ಕೆರಳಿಸುವ ಕೆಲಸ ಮಾಡ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಿರ್ಣಯ ಮಾಡಿದ್ದು ಪ್ರಚೋದಿಸಲು ಹೊರತಾಗಿ ಬೇರ್ಯಾವ ಕಾರಣಕ್ಕೂ ಅಲ್ಲ. ನಮ್ಮ ವಿಧಾನಸೌಧದಲ್ಲಿ ನಿರ್ಣಯ ಮಾಡಿದ್ದು ಬೇರೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಒಂದಿಂಚೂ ಜಾಗವನ್ನು ಬಿಡುವುದಿಲ್ಲ: ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ ಮಾತನಾಡಿ, ಮಹಾರಾಷ್ಟ್ರ ರಾಜ್ಯದವರು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ. ಕರ್ನಾಟಕದ ಅನೇಕ ಗ್ರಾಮದ ನಮ್ಮದು ಎಂದು ಹೇಳುತ್ತಿದ್ಧಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಒಂದಿಂಚೂ ಜಾಗವನ್ನು ಬಿಡುವುದಿಲ್ಲ ಎಂದು ತಿಳಿಸಿದರು.
Border Dispute: ಕರ್ನಾಟಕ ಆಕ್ರಮಿತ ಬೆಳಗಾವಿ: ಉದ್ಧವ್ ಠಾಕ್ರೆ ಮತ್ತೆ ತಗಾದೆ
ಚಿಕ್ಕಮಗಳೂರ: ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಸುಮ್ಮನಿರಿ: ಗಡಿವಿವಾದ ರಾಜಕೀಯ ಪ್ರೇರಿತವಾದದ್ದು, ಬೆಳಗಾವಿಯಲ್ಲಿ ಕನ್ನಡಿಗರು-ಮರಾಠಿಗಳರು ಸಹೋದರರಂತೆ ಇದ್ದಾರೆ. ರಾಜಕೀಯ ಬೆಳೆ ಬೇಯಿಸಲು ಕರ್ನಾಟಕ-ಮಹಾಷ್ಟ್ರದ ರಾಜಕೀಯ ನಾಯಕರು ಕಿಡಿ ಹಚ್ಚುತ್ತಿದ್ದಾರೆ. ಗಡಿವಿವಾದ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ನ್ಯಾಯಾಂಗ ನಿಂದನೆ ಆಗುತ್ತದೆ. ಮಹಾರಾಷ್ಟ್ರ ಬಿಜೆಪಿ-ಕಾಂಗ್ರೆಸ್ ಬೆಳಗಾವಿ ಮಹಾರಾಷ್ಟ್ರದ್ದು ಅಂತಾರೆ. ಕರ್ನಾಟಕ ಬಿಜೆಪಿ-ಕಾಂಗ್ರೆಸ್ ಬೆಳಗಾವಿ ಕರ್ನಾಟಕದ್ದು ಅಂತಾರೆ. ರಾಷ್ಟ್ರೀಯ ಪಕ್ಷಗಳೇ ದ್ವಂದ್ವ ನಿಲುವು ಹೇಗೆ ತೆಗೆಕೊಳ್ತಾರೆ. ಸುಪ್ರೀಂ ಕೋರ್ಟಿನಿಂದ ತೀರ್ಪು ಬರುವವರೆಗೂ ಬಾಯಿ ಮುಚ್ವಿಕೊಂಡು ಇರಿ ಎಂದು ಚಿಕ್ಕಮಗಳೂರಿನಲ್ಲಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಗಡಿ ಕ್ಯಾತೆಗೆ ಕಿಡಿ ಹಚ್ಚಿದ್ದ ಉದ್ಧವ್ ಠಾಕ್ರೆ: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಹಟಮಾರಿ ಧೋರಣೆ ಮುಂದುವರಿಸಿರುವ ಮಹಾರಾಷ್ಟ್ರ ಸರ್ಕಾರ, ಕರ್ನಾಟಕಕ್ಕೆ ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ ಎಂದು ಪುನರುಚ್ಚರಿಸಿತ್ತು. ಇಂದು ಬೆಳಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ ಅವರು ‘ಕರ್ನಾಟಕ ಆಕ್ರಮಿತ ಗಡಿ ಪ್ರದೇಶಗಳನ್ನು’ ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ವಿಧಾನಸಭೆಯಲ್ಲಿ ಆಗ್ರಹಿಸಿದರು. ನಂತರ ಮಹಾರಾಷ್ಟ್ರದ ಉಭಯ ಸದನಗಳಾದ ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಸೋಮವಾರ ಗಡಿ ವಿವಾದ ಪ್ರತಿಧ್ವನಿಸಿತು. ವಿಧಾನಸಭೆ ಕಲಾಪ ಆರಂಭ ಆಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಅಜಿತ್ ಪವಾರ್, ‘ಗಡಿ ನಿಲುವಳಿಯನ್ನು ಅಧಿವೇಶನದ ಮೊದಲ ವಾರವೇ ತರುವುದಾಗಿ ಹೇಳಿದ್ದಿರಿ. ಆದರೆ 2ನೇ ವಾರ ಬಂದರೂ ನಿಲುವಳಿ ಮಂಡನೆ ಆಗಿಲ್ಲ. ಸೋಮವಾರದ ಕಲಾಪ ಕಾರ್ಯಸೂಚಿಯಲ್ಲೂ ಗಡಿ ನಿಲುವಳಿ ಪಟ್ಟಿ ಆಗಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.