ನಾನು ರಾಜಕೀಯಕ್ಕೆ ಬಂದಾಗ ಧರ್ಮೇಂದ್ರ ಇನ್ನೂ ರಾಜಕೀಯಕ್ಕೆ ಬಂದಿರಲಿಲ್ಲ, ಅವರಿಂದ ಹೇಳಿಸಿಕೊಳ್ಳಬೇಕಾಗಿಲ್ಲ: ಶೆಟ್ಟರ್

By Gowthami K  |  First Published May 1, 2023, 7:17 PM IST

ಬಿಜೆಪಿ ವಿರುದ್ಧ ಹರಿಹಾಯ್ದಿರುವ ಜಗದೀಶ್ ಶೆಟ್ಟರ್, ನನ್ನನು ಸೋಲಿಸೋಕೆ ಇದು ಗುಜರಾತ್ ಅಲ್ಲ. ಇದು ಕರ್ನಾಟಕ.  ಶೆಟ್ಟರ್,ಸವದಿ 50 ಸಾವಿರ ಮತಗಳ ಅಂತರದಿಂದ ಸೋಲ್ತಾರೆ ಎಂದ ಅಮಿತ್ ಶಾಗೆ  ಟಾಂಗ್ ಕೊಟ್ಟಿದ್ದಾರೆ.


ಕೊಪ್ಪಳ (ಮೇ.1): ಬಿಜೆಪಿ ರಾಜ್ಯದ ಕೆಲವೇ ಕೆಲವು ಜನರ ಕಪಿಮುಷ್ಠಿಯಲ್ಲಿದೆ ಎಂದು ಮತ್ತೊಮ್ಮೆ ಬಿಜೆಪಿ ನಾಯಕರ ವಿರುದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಕೊಪ್ಪಳದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನನ್ನನ್ನು ಕಾಂಗ್ರೆಸ್ ಸೇರ್ಪಡೆಯಾಗುವಂತೆ ಮಾಡಿದ್ದೆ ಬಿಜೆಪಿ. ನಂಗೆ ಎಲ್ಲಾ ಕೊಟ್ಟಿದ್ದಿವಿ ಅಂತಾರೆ. ನಮ್ಮ ‌ಕುಟುಂಬ ಬಿಜೆಪಿಗೆ ಏನು ಮಾಡಿದೆ ಎನ್ನೋದು ಎಲ್ಲರಿಗೂ ಗೊತ್ತಿದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಕಟ್ಟೋಕೆ ಶೆಟ್ಟರ್ ಶ್ರಮವಿದೆ. ನಂಗೆ ಒಬ್ಬ ಎಂಎಲ್ ಎ ರೀತಿ ಪತ್ರ ಬರೀರಿ ಅಂತಾರೆ. ನಾನು ರಾಜಕೀಯಕ್ಕೆ ಬಂದಾಗ ಧರ್ಮೇಂದ್ರ ಇನ್ನು ರಾಜಕೀಯಕ್ಕೆ ಬಂದಿರಲಿಲ್ಲ. ಅಂತವರು ನಂಗೆ ಎಲೆಕ್ಷನ್ ನಿಲ್ಲಬೇಡ ಅಂತಾರೆ.

ರಾಹುಲ್‌ ಗಾಂಧಿ ನಂಗೆ ಒಂದ್ ಮಾತು ಹೇಳಿದ್ರು. ಶೆಟ್ರೆ ನೀವು ಭ್ರಷ್ಟಾಚಾರಿ ಅಲ್ಲ ಅದಿಕ್ಕೆ ನಿಮಗೆ ಟಿಕೆಟ್  ಕೊಟ್ಟಿಲ್ಲ ಅಂತ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂತು. ಅಷ್ಟೆ ಏಕೆ ಆರು ಭಾರಿ ಗೆಲ್ಲಿಸಿದ ನನ್ನ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು. ಅದಕ್ಕೆ ನಾನು ಸಿಡಿದೆದ್ದೆ. ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಇದ್ರು ಸತ್ತಂಗೆ. ಅದು ಗುಲಾಮಗಿರಿಯ ಸಂಕೇತ. ಬಿಜೆಪಿಯ ಗಲಾಮಗಿಯನ್ನು  ನಾನು ಒಪ್ಪಲಿಲ್ಲ ಎಂದು ಬಿಜೆಪಿ ವಿರುದ್ದ ಮತ್ತೊಮ್ಮೆ ಶೆಟ್ಟರ್ ಗುಡುಗಿದ್ದಾರೆ.

Tap to resize

Latest Videos

undefined

ಶೆಟ್ಟರ್ ಮತ್ತೆ ಬಿಜೆಪಿಯಿಂದ ಗೆದ್ರೆ ನಂಬರ್ 1ಸ್ಥಾನಕ್ಕೆ ಬರ್ತಿನಿ ಎನ್ನೋ ಆತಂಕ ಕೆಲವರಲ್ಲಿ ಶುರುವಾಯಿತು. ಹೀಗಾಗಿ ನನ್ನನ್ನ ಹೊರಗಡೆ ಕಳಿಸೋಕೆ ಸಂಚು ರೂಪಿಸಲಾಯಿತು‌. ಬಿಎಸ್ ವೈ ಮನೆಗೆ ಹೋದ್ರು. ಶೆಟ್ಟರ್ ನ ಆಚೆ ಹಾಕಿದ್ರೆ ಇಡೀ ಪಾರ್ಟಿ ತಮ್ಮ ಕೈಯಲ್ಲಿ ಬರುತ್ತೆ ಅನ್ನೋ ಹಿಡನ್ ಅಜೆಂಡಾವಿತ್ತು. ನಂಗೆ ಯಾವ ಅಧಿಕಾರದ ಆಮಿಷವಿಲ್ಲ. ನನ್ನನ್ನ ಕಾಂಗ್ರೆಸ್ ಗೌರವಯುತವಾಗಿ ನಡೆಸಿಕೊಂಡ್ರೆ ಸಾಕು ಎಂದಿದ್ದಿನಿ. ಕಾಂಗ್ರಸ್ ಅದನ್ನ ಮಾಡ್ತಿದೆ. ಈ ಭಾರಿ ರಾಜ್ಯದಲ್ಲಿ ಕಾಂಗ್ರೆಸ್  140 ಕ್ಕೂ ಹೆಚ್ಚು ಸೀಟ್ ಗೆಲ್ಲುತ್ತೆ ಎಂದಿದ್ದಾರೆ.

ನನಗೆ ಅನೇಕ ಜನ ಹೇಳುತ್ತಿದ್ದಾರೆ. ಶೆಟ್ರೆ ನೀವು ಗುಲಾಮಗಿರಿಗೆ ಸೆಡ್ಡು ಹೊಡೆದು ಬಂದಿದ್ದೀರಿ. ಶಹಬ್ಬಾಶ್ ಅಂತಿದ್ದಾರೆ. ನನ್ನ 30 ವರ್ಷದ ರಾಜಕೀಯ ಜೀವನಕ್ಕೆ ಅಷ್ಟೇ ಸಾಕು.  ಘಟಾನುಘಟಿಗಳು ನನ್ನ ಸೋಲಿಸೋಕೆ ಚಾಲೆಂಜ್ ಮಾಡಿದ್ದಾರೆ. ಅದನ್ನ ಮೆಟ್ಟಿ ನಿಂತು ಗೆದ್ದು ಬರುತ್ತೇನೆ. ನನ್ನ ಸೋಲಿಸೋಕೆ ಇದು ಗುಜರಾತ್ ಅಲ್ಲ. ಇದು ಕರ್ನಾಟಕ.  ಶೆಟ್ಟರ್,ಸವದಿ 50 ಸಾವಿರ ಮತಗಳ ಅಂತರದಿಂದ ಸೋಲ್ತಾರೆ ಎಂದ ಅಮಿತ್ ಶಾಗೆ ಶೆಟ್ಟರ್ ಟಾಂಗ್ ಕೊಟ್ಟಿದ್ದಾರೆ.

ಕುಟುಂಬ ರಾಜಕೀಯ ಇಲ್ಲ ಅಂತಾರೆ. ನಿಮ್ಮ ಸೊಸೆಗೆ ಟಿಕೆಟ್ ಕೊಡ್ತಿನಿ, ನಿಮ್ಮ ಪತ್ನಿಗೆ ಟಿಕೆಟ್ ಕೊಡ್ತಿನಿ ಎನ್ನೋದು ಯಾಕೆ? ಎಂದು ವಾಗ್ದಾಳಿ ನಡೆಸಿದರು. ನಾನು ಹುಬ್ಬಳ್ಳಿಯ ಜನರ ಹೃದಯದಲ್ಲಿದ್ದೇನೆ. ಹುಬ್ಬಳ್ಳಿ ಜನ ಏನು ಅಂತ ನಂಗೆ ಗೊತ್ತಿದೆ. ನಾನೇನು ಎನ್ನೋದು ನನ್ನ ಜನತೆಗೆ ಗೊತ್ತಿದೆ. ನಾನು ಗೆದ್ದು ಬರುತ್ತೇನೆ.

BJP Manifesto 2023: ಬೆಂಗಳೂರು, ಹಳೇ ಮೈಸೂರಿಗೆ ಭರ್ಜರಿ ಭರವಸೆ ಘೋಷಿಸಿದ ಬಿಜೆಪಿ!

ಲಿಂಗಾಯತರಿಗೆ ಅವಮಾನ ಮಾಡಿದ್ದಾರೆ. ಬಿಜೆಪಿಯವರಿಗೆ ಯಾವುದೇ ನೈತಿಕತೆ ಇಲ್ಲ. ಚಿತ್ತಾಪುರದಲ್ಲಿ 80 ಕ್ರಿಮಿನಲ್ ಕೇಸ್ ಇರೋ ರೌಡಿ ಶೀಟರ್ ಗೆ ಟಿಕೆಟ್ ನೀಡಿದ್ದಾರೆ‌. ಬಿಜೆಪಿ ಪ್ರಣಾಳಿಕೆಗೆ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ. ಈಗಾಗಲೇ ಕಾಂಗ್ರೆಸ್ ಐದು ಗ್ಯಾರೆಂಟಿ ನೀಡಿದೆ. ಅದು ಜನಮಾನಸಕ್ಕೆ ನಾಟಿದೆ. ಅದಕ್ಕಿಂತ ಹೊಸ ಯೋಜನೆ ಬಿಜೆಪಿಯಲಿಲ್ಲ. ನಂಗೆ ಮಾಜಿ ಸಿಎಂ ಎನ್ನೋ ಹಣೆ ಪಟ್ಟಿ ಬಂದಿದೆ. ಮತ್ತೆ ನಾನು ಅಧಿಕಾರದ ಆಸೆಯಿಲ್ಲ ಎಂದು ಹೇಳಿದ್ದಾರೆ.

40%ಲಂಚ ಹೊಡೆದ್ರು, ಬೆಲೆ ಏರಿಸಿ ದೋಚಿದ್ರು‌: ಬಿಜೆಪಿ ವಿರುದ್ಧ ರಾಗಾ ವಾಗ್ದಾಳಿ

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ.  ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!