Politics

ತುರುವೇಕೆರೆಯಲ್ಲಿ ರಾಹುಲ್

3 ವರ್ಷಗಳಲ್ಲಿ ಬಿಜೆಪಿ ಭ್ರಷ್ಟಚಾರ ಮಾಡಿದೆ. ಕಳೆದ ಚುನಾವಣೆಯಲ್ಲಿ ನೀವು ಬಿಜೆಪಿಗೆ ಮತ ನೀಡಿಲ್ಲ. ಆಯ್ಕೆ ಮಾಡಿಲ್ಲ. ಆದರೆ ಬಿಜೆಪಿಯವರು, ಶಾಸಕರನ್ನು ಖರೀದಿ ಮಾಡಿ ಲೋಕತಂತ್ರವನ್ನು ಹಾಳು ಮಾಡಿದ್ದಾರೆ.

40% ಸರ್ಕಾರ

ಕರ್ನಾಟಕದ ಬಿಜೆಪಿ ಸರ್ಕಾರವನ್ನು 40% ಸರ್ಕಾರ ಅಂತ ಕರೆಯುತ್ತಿದ್ದಾರೆ. ಸಣ್ಣ ಸಣ್ಣ ಕೆಲಸಕ್ಕೂ 40% ತೆಗೆದುಕೊಳ್ಳುತ್ತಿದ್ದಾರೆ. 

ಬಿಜೆಪಿಯಿಂದ ಜೇಬಿಗೆ ಕತ್ತರಿ!

ಸರ್ಕಾರದ ಕೆಲಸ ಜನರಿಗೆ ಉದ್ಯೋಗ, ಶಿಕ್ಷಣ, ಆರೋಗ್ಯಕ್ಕೆ ಹಣ ನೀಡುವ ಬದಲು ಬಿಜೆಪಿ ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಿದೆ.

40% ಲಂಚ ಪ್ರಧಾನಿಗೆ ಗೊತ್ತು

ಎಲ್ಲಾ ಕೆಲಸದ ಮೇಲೆ 40% ಲಂಚ ತೆಗೆದುಕೊಂಡಿದ್ದಾರೆ. ಇದು ಪ್ರಧಾನಿ ಮಂತ್ರಿಗೆ ಗೊತ್ತಿಲ್ಲ ಅಂತಿಲ್ಲ, ಅವರಿಗೆ ಎಲ್ಲಾ ಗೊತ್ತಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದಿದ್ದಾರೆ. 

ಪ್ರಧಾನಿ ಏನು ಮಾಡುತ್ತಿದ್ದೀರಾ?

ಬಿಜೆಪಿ ಶಾಸಕರೊಬ್ಬರು ಹೇಳಿದ್ದಾರೆ, ಈಗಿನವರು  2 ಸಾವಿರ ಕೋಟಿ ಕೊಟ್ಟು ಸಿಎಂ ಆಗಿದ್ದಾರೆ ಅಂತ ಸಾರ್ವಜನಿಕವಾಗಿ ಹೇಳಿದ್ದಾರೆ. ಇದು   ಪ್ರಧಾನಿಗೂ ಗೊತ್ತಿರಲ್ವಾ? 

ಪ್ರಧಾನಿಗೆ ರಾಹುಲ್ ಪ್ರಶ್ನೆ

ಕರ್ನಾಟಕ ಮತ ಕೇಳಲು ಬರುವ ನೀವು, ಮೊದಲು  ಭ್ರಷ್ಟಚಾರ ತಡೆಯಲು ನೀವು ಏನು ಕ್ರಮ ಕೈಗೊಂಡಿದ್ದೀರಾ ಎಂದು ಇಲ್ಲಿನ ಜನಕ್ಕೆ ಹೇಳಬೇಕು.  

ಉತ್ತರ ಕೊಡಿ ಮೋದಿ

ರಾಜ್ಯದಲ್ಲಿ ಈ 3 ವರ್ಷದಲ್ಲಿ ನಿಮ್ಮ ಸರ್ಕಾರ ಏನು ಮಾಡಿದೆ . ಮುಂದೆ ಅಧಿಕಾರಕ್ಕೆ ಬಂದ್ಮೇಲೆ ಏನ್ಮಾಡ್ತೀರಾ ಅಂತನಾದ್ರೂ ಹೇಳಿ. ಚುನಾವಣೆ ನಡೆಯುತ್ತಿರುವುದು ನಿಮಗೊಸ್ಕರ ಅಲ್ಲ, ಕರ್ನಾಟಕದ ಭವಿಷ್ಯಕ್ಕಾಗಿ.‌

ಉತ್ತರ ಕರ್ನಾಟಕದ ಹಲವು ಕಡೆ ಪ್ರಿಯಾಂಕ ಗಾಂಧಿ ರೋಡ್ ಶೋ, ಹೊಸ ಗ್ಯಾರಂಟಿ ಘೋಷಣೆ

ಫೋಟೋಗಳಲ್ಲಿ: ರಾಜ್ಯದಲ್ಲಿ ಅಮಿತ್ ಶಾ ಭರ್ಜರಿ ರ್‍ಯಾಲಿ

ಫೋಟೋಗಳಲ್ಲಿ: ಪ್ರಿಯಾಂಕ ಗಾಂಧಿ ಕರ್ನಾಟಕ ಭೇಟಿಯ ಕ್ಷಣಗಳು

ಭರ್ಜರಿ ಗಿಫ್ಟ್‌ ಕೊಟ್ಟ ಕುಮಾರಸ್ವಾಮಿ: ಆದ್ರೆ ಜೆಡಿಎಸ್‌ ಗೆಲ್ಲಬೇಕಂತೆ