ರಸ್ತೆ ಬದಿ ಪಡ್ಡು ತಯಾರಿಸಿ ಮತಯಾಚಿಸಿದ ಶಾಮನೂರು ಸೊಸೆ-ಮೊಮ್ಮಕ್ಕಳು!

By Gowthami K  |  First Published May 1, 2023, 6:42 PM IST

ಬಿಜೆಪಿಯನ್ನು ಮಣಿಸಿ ವಿಧಾನಸಭೆಗೆ ಆಯ್ಕೆಯಾಗ್ಬೇಕೆಂದು  ಶಾಮನೂರು ಕುಟುಂಬ ಪಣ ತೊಟ್ಟಿದೆ. ಶಾಮನೂರು ಕುಟುಂಬದ ಮೂರನೇ ತಲೆಮಾರು ಈ ಬಾರಿ ಪ್ರಚಾರಣದ ಕಣಕ್ಕೆ ಧುಮುಕಿದೆ. ಶಾಮನೂರು ಮೊಮ್ಮಗ ಮೊಮ್ಮಗಳಿಂದಲೂ ಮತಯಾಚನೆಯಾಗಿದೆ.


ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಮೇ1): ಉತ್ತರ ಹಾಗೂ ದಾವಣಗೆರೆ ದಕ್ಷಿಣ ಮತ ಕ್ಷೇತ್ರದಲ್ಲಿ ಚುನಾವಣಾ ಕಾವು ಏರುತ್ತಲೇ ಇದೆ. ಕಾಂಗ್ರೆಸ್ ಸೋಲಿಸಲು ಬಿಜೆಪಿಯ ನಾಯಕರು ಇನ್ನಿಲ್ಲದ ರಣ ತಂತ್ರ ಮಾಡ್ತಿದ್ದು, ಬಿಜೆಪಿಯನ್ನು ಮಣಿಸಿ ವಿಧಾನಸಭೆಗೆ ಆಯ್ಕೆಯಾಗ್ಬೇಕೆಂದು  ಶಾಮನೂರು ಕುಟುಂಬ ಪಣ ತೊಟ್ಟಿದೆ. ದಾವಣಗೆರೆ  ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್‌ , ಶಾಮನೂರು ಶಿವಶಂಕರಪ್ಪ  ಅಬ್ಬರದ ಪ್ರಚಾರ ನಡೆಸಿದ್ದಾರೆ. ಶಾಮನೂರು ಕುಟುಂಬದ ಮೂರನೇ ತಲೆಮಾರು ಈ ಬಾರಿ ಪ್ರಚಾರಣದ ಕಣಕ್ಕೆ ಧುಮುಕಿದೆ.  ಮಲ್ಲಿಕಾರ್ಜುನ ರವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್‌ ಹಾಗು, ಪುತ್ರಿ ಶ್ರೇಷ್ಠ ಶಾಮನೂರು, ಪುತ್ರ ಸಮರ್ಥ್ ಶಾಮನೂರು ಚುನಾವಣ ಕಣಕ್ಕಿಳಿದು ತಮ್ಮ ತಂದೆ ಹಾಗು ಅಜ್ಜನ ಪರ‌ ಮನೆ ಮನೆ ತಲುಪುತ್ತಿದ್ದಾರೆ.‌ 

Tap to resize

Latest Videos

ರಸ್ತೆ ಬದಿ ಪಡ್ಡು ತಯಾರು ಮಾಡಿ ಮತಯಾಚಿಸಿದ ಪ್ರಭಾ ಮಲ್ಲಿಕಾರ್ಜುನ್:
ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ್‌ ರವರು ಕ್ಣೇತ್ರದಲ್ಲಿ ಪ್ರಚಾರ ಮಾಡ್ತಿದ್ರೇ, ಇತ್ತಾ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಕಾಂಗ್ರೆಸ್ ಪರ ಮತಯಾಚಿಸುತ್ತಾ ಮನೆ‌ಮನೆ ತಲುಪುವ ಮೂಲಕ ಗೃಹಿಣಿಯರ ಬಳಿ ಮತ ಬೇಟೆಯಾಡ್ತಿದ್ದಾರೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ನಿಜಲಿಂಗಪ್ಪ ಬಡಾವಣೆ, 
ತರಳಬಾಳು ಬಡಾವಣೆ, ಶಿವಕುಮಾರ್ ಸ್ವಾಮಿ ಬಡಾವಣೆ ಸೇರಿದಂತೆ ಸಾಕಷ್ಟು ಭಾಗದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ‌ ಮಾಡ್ತಿದ್ದಾರೆ, ಇದಲ್ಲದೆ, ಕಳೆದ ದಿನ ದಾವಣಗೆರೆ ನಗರದ ಗುಂಡಿ ಸರ್ಕಲ್ ನ ಪ್ರಸಿದ್ಧ ಬೆಣ್ಣೆ ಪಡ್ಡು ಹೋಟೆಲ್ನಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಚುನಾವಣಾ ಪ್ರಚಾರದ ಸಮಯದಲ್ಲಿ ತಾವೇ ಬೆಣ್ಣೆ ಪಡ್ಡು ತಯಾರು ಮಾಡುವ ಮೂಲಕ ಮತಯಾಚನೆ ಮಾಡಿದ್ರು.

BJP Manifesto 2023: ಬೆಂಗಳೂರು, ಹಳೇ ಮೈಸೂರಿಗೆ ಭರ್ಜರಿ ಭರವಸೆ ಘೋಷಿಸಿದ

ಶಾಮನೂರು ಶಿವಶಂಕರಪ್ಪರ ಮೊಮ್ಮಗ, ಮೊಮ್ಮಗಳು:
ಅಜ್ಜ ಹಾಗು ತಂದೆಯನ್ನು ಗೆಲ್ಲಿಸುವ ಸಲುವಾಗಿ ಮೊಮ್ಮಕ್ಕಳು ಕೂಡ ಚುನಾವಣಾ ಕಣಕ್ಕೆ ಧುಮಿಕಿದ್ದಾರೆ, ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಸಮರ್ಥ್ ಶಾಮನೂರು ಬರಿಗಾಲಲ್ಲೇ ನಡೆದು ಪ್ರಚಾರ ಮಾಡುತ್ತಿದ್ದಾರೆ. ಎಲ್ಲೆ ಹೋದರು ಕಾಲಿಗೆ ಚಪ್ಪಲಿ ಹಾಕುತ್ತಿಲ್ಲ.. ಚುನಾವಣೆ ಮುಗಿದು ಪಲಿತಾಂಶ ಬರುವವರೆಗು ಚಪ್ಪಲಿ ಹಾಕದೇ ಪ್ರಚಾರ ನಡೆಸುವುದಾಗಿ ಸಮರ್ಥ ಧೃಡ ನಿಶ್ಚಯ ಮಾಡಿದ್ದಾರೆ.  ಹಾಗಯೇ ಶಾಮನೂರು  ಮೊಮ್ಮಗಳು ಶ್ರೇಷ್ಠ ಇನ್ನೊಂದು ಟೀಮ್ ನಲ್ಲಿ ಪ್ರಚಾರ ಮಾಡುತ್ತಿದ್ದಾರೆ.

40%ಲಂಚ ಹೊಡೆದ್ರು, ಬೆಲೆ ಏರಿಸಿ ದೋಚಿದ್ರು‌: ಬಿಜೆಪಿ ವಿರುದ್ಧ ರಾಗಾ ವಾಗ್ದಾಳಿ

ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಜ್ಜ ಶಾಮನೂರು ಶಿವಶಂಕರಪ್ಪ ಹಾಗು ತಂದೆ ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಎಸ್ಎಸ್ ಮಲ್ಲಿಕಾರ್ಜುನ್‌ ರವರ ಪರ ಮತಯಾಚನೆ ಮಾಡುತ್ತಿದ್ದು ಕೋಟ್ಯಾಧಿಪತಿಗಳ ಮಕ್ಕಳು ಜನಸಾಮಾನ್ಯರ ಮುಂದೆ ಬರುತ್ತಿದ್ದಾರೆ. ದಾವಣಗೆರೆ ನಗರದ ಜಯನಗರ, ಪಿಜೆ ಬಡಾವಣೆ, ಕೆಬಿ ಬಡಾವಣೆ, ಶಿವಕುಮಾರ್ ಸ್ವಾಮೀ ಬಡಾವಣೆ, ‌ನಿಜಲಿಂಗಪ್ಪ ಬಡಾವಣೆ, ಎಸ್ಎಸ್ ಲೇಔಟ್ ಹೀಗೆ ಸಾಕಷ್ಟು ತಾವೇ ತೆರಳಿ ಮತಯಾಚಿಸಿ ಅಜ್ಜ ಹಾಗು ತಂದೆಯರನ್ನು ಗೆಲ್ಲಿಸುವಂತೆ ಮನೆ ಮನೆ ತೆರಳಿ ಪ್ರಚಾರ ಮಾಡಿ ತಂದೆ ಅಜ್ಜನನ್ನು ಗೆಲ್ಲಿಸಿ ಎಂದು ಕೈ ಮುಗಿದು ಬೇಡುತ್ತಿದ್ದಾರೆ.

click me!