ಗ್ಯಾರಂಟಿ ಈಡೇರಿಸದೇ ಕಾಂಗ್ರೆಸ್ ವಂಚನೆ: ನಳಿನ್‌ ಕುಮಾರ್‌ ಕಟೀಲ್

Published : Jun 23, 2023, 09:25 PM ISTUpdated : Jun 23, 2023, 09:26 PM IST
ಗ್ಯಾರಂಟಿ ಈಡೇರಿಸದೇ ಕಾಂಗ್ರೆಸ್ ವಂಚನೆ: ನಳಿನ್‌ ಕುಮಾರ್‌ ಕಟೀಲ್

ಸಾರಾಂಶ

ವಿಧಾನಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲಾಗಿದೆ. ನಮಗೆ ಗೆಲ್ಲುವ ವಿಶ್ವಾಸವಿತ್ತು, ಆದ್ರೆ ಕಾಂಗ್ರೆಸ್‌ನ ಸುಳ್ಳು, ಪೊಳ್ಳು ಭರವಸೆಗಳಿಂದ ಸೋಲಾಗಿದೆ. ನಾವು ಸೋಲನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಬಿಜೆಪಿಗೆ ಸೋಲು ಹೋಸದಲ್ಲ, ಈ ಹಿಂದೆಯೂ ಅಟಲ್ ಜೀ, ಅಡ್ವಾಣಿ ಯವರು ಸೋತಿದ್ರು. ಆಗಲು ನಾವು ದೃತಿಗೆಡಲಿಲ್ಲ, ಅದರಂತೆ ಈಗಲೂ ಅದನ್ನು ಎದುರಿಸುತ್ತೇವೆ: ಕಟೀಲ್ 

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ(ಜೂ.23):  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷಗಳು ಪೊರೈಸಿದೆ. ಕೇಂದ್ರ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮನೆ ಹಾಗೂ ಮನಗಳಿಗೆ ತಲುಪಿಸಲು ರಾಜ್ಯ ಬಿಜೆಪಿ ಮುಂದಾಗಿದೆ. ಹಾಗಾಗಿ ಬಿಜೆಪಿ ಪ್ರಮುಖ ನಾಯಕರು 7 ತಂಡಗಳೊಂದಿಗೆ ರಾಜ್ಯದ ವಿವಿಧ ಕಡೆ ಪ್ರವಾಸ ಮಾಡಿ, ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಆಯೋಜಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ನೇತೃತ್ವದ ಟೀಂ ಯಾದಗಿರಿ ಜಿಲ್ಲೆಗೆ ಭೇಟಿ ನೀಡಿದೆ. ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.  

ಕಾರ್ಯಕರ್ತರು ಸೋಲನ್ನು ಮೆಟ್ಟಿ ನಿಲ್ಲಬೇಕು: ಕಟೀಲ್

ಶಹಾಪುರದಲ್ಲಿ ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕಟೀಲ್, ವಿಧಾನಸಭೆ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲಾಗಿದೆ. ನಮಗೆ ಗೆಲ್ಲುವ ವಿಶ್ವಾಸವಿತ್ತು, ಆದ್ರೆ ಕಾಂಗ್ರೆಸ್‌ನ ಸುಳ್ಳು, ಪೊಳ್ಳು ಭರವಸೆಗಳಿಂದ ಸೋಲಾಗಿದೆ. ನಾವು ಸೋಲನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಬಿಜೆಪಿಗೆ ಸೋಲು ಹೋಸದಲ್ಲ, ಈ ಹಿಂದೆಯೂ ಅಟಲ್ ಜೀ, ಅಡ್ವಾಣಿ ಯವರು ಸೋತಿದ್ರು. ಆಗಲು ನಾವು ದೃತಿಗೆಡಲಿಲ್ಲ, ಅದರಂತೆ ಈಗಲೂ ಅದನ್ನು ಎದುರಿಸುತ್ತೇವೆ. ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಅತೀ ದೊಡ್ಡ ಪಕ್ಷ ನಮ್ಮದಾಗಿದೆ. ಹಾಗಾಗಿ ಕಾರ್ಯಕರ್ತರು ಮುಂದಿನ ತಾಲೂಕಾ ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಲೋಕಸಭೆ ಚುನಾವಣೆಗೆ ಸಿದ್ಧರಾಗಬೇಕು. ಮುಂದಿನ ಗೆಲುವು ನಮ್ಮದೆ ಎಂದು ಕಾರ್ಯಕರ್ತರಿಗೆ ವಿಶ್ವಾಸ ತುಂಬಿದರು.

ವಿಪಕ್ಷಗಳ ಮೈತ್ರಿ ಸಭೆ ಅಂತ್ಯ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಅಜೆಂಡಾ ಫಿಕ್ಸ್!

ನಮ್ಮದು ರಾಷ್ಟ್ರವಾದ, ಕಾಂಗ್ರೆಸ್ ಭಯೋತ್ಪದನಾ ವಾದ: ಕಟೀಲ್

ಕಾಂಗ್ರೆಸ್ ಪಕ್ಷವೂ ಪರಿವಾರವಾದ, ಭ್ರಷ್ಟಾಚಾರವಾದ ಹಾಗೂ ಭಯೋತ್ಪಾದನಾ ವಾದದಿಂದ ಕೂಡಿದೆ. ಹಾಗಾಗಿ ಕಾಂಗ್ರೇಸ್ ಪಕ್ಷವನ್ನೂ ಜನರು ಕಿತ್ತೊಗೆದು, ದೇಶದಲ್ಲಿ ಬಿಜೆಪಿ ಸರ್ಕಾರವನ್ನು ಜನರು ತಂದಿದ್ದಾರೆ. ಈ ಹಿಂದೆ ಯಡಿಯೂರಪ್ಪನವರ ಹೋರಾಟದಿಂದ 1 ಸ್ಥಾನದಮದ 110 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಜನರಿಗೆ ಕಾಂಗ್ರೇಸ್ ನೀಡಿದ್ದ ಭರವಸೆಯನ್ನು ಹಿಡೇರಿಸುವಲ್ಲಿ ವಿಫಲವಾಗಿದೆ. ಸಿದ್ದರಾಮಯ್ಯ ಸಿಎಂ ಆಗಿ ಒಂದು ತಿಂಗಳಲ್ಲಿ ರಾಜ್ಯ ಬಂದ್ ಆಗಿದೆ.  ಮಹಿಳೆಯರಿಗೆ ಉಚಿತ ಬಸ್ ಅಂತ ಹೇಳಿದ್ರು, ಆದ್ರೆ ಆ ಭಾಗ್ಯ ಕಂಡಕ್ಟರ್ ಗಳಿಗೆ ಮಾತ್ರ ಸಿಕ್ಕಿದೆ. ನಿತ್ಯ 15 ಕೋಟಿ ರೂ. ಲಾಸ್ ಆಗ್ತಿದೆ. ಇದರಿಂದ ಸಾರಿಗೆ ನೌಕರರು ಬೀದಿಗೆ ಬರ್ತಾರೆ, ಗ್ಯಾರೆಂಟಿಗಳನ್ನು ಕೊಡ್ತೇವೆ ಅಂತಾ ಹೇಳಿ ವಂಚನೆ ಮಾಡ್ತಿದೆ. ನಾವು ರೈತರಿಗೆ ಕೊಡ್ತಿದ್ದ 4 ಸಾವಿರ ರೂ. ವಾಪಸ್ ತಗೋತಿದಾರೆ. ಇನ್ನೊಂದು ವರ್ಷದಲ್ಲಿ ಕರ್ನಾಟಕ ಶ್ರೀಲಂಕಾ ಆಗುತ್ತದೆ, ರಾಜ್ಯದಲ್ಲಿ ಆರ್ಥಿಕ ವಿಫಲತೆ ಕಾಣ್ತಿದೆ, ಜನ ಈಗಾಗಲೇ ಎಚ್ಚೆತ್ತಿದ್ದಾರೆ ಜೊತೆಗೆ ರೊಚ್ಚಿಗೆದ್ದಿದ್ದಾರೆ ಅಂತ ಹೇಳಿದ್ದಾರೆ. 

ದೇಶದಲ್ಲಿ ಮನಮೋಹನ್ ಸಿಂಗ್ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು. ಆಗ ಜನರು ಯುಪಿಎ ಸರ್ಕಾರವನ್ನು ಕಿತ್ತೊಗೆದು ನರೇಂದ್ರ ಮೋದಿಯವರ ಸರ್ಕಾರವನ್ನು ತಂದರು. ಆದ್ರೆ ಮೋದಿ, ಸಚಿವರು ಹಾಗೂ ಸಂಸದರ ಮೇಲೆ ಯಾವುದೇ ಒಂದೇ ಒಂದು ಭ್ರಷ್ಟಾಚಾರ ಆರೋಪ ಇಲ್ಲ. 9 ವರ್ಷಗಳ ಕಾಲ ಮೋದಿಯವರು ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದಾರೆ. ಆದ್ರೆ ಗರೀಬಿ ಹಠಾವೋ ಎಂದು ಹೇಳಿ, ಜನರ ಹಸಿವು ನಿಗಿಸದೇ, ಅದೇ ಹೆಸರಿನಲ್ಲಿ ಗಾಂಧಿ ಕುಟುಂಬ ಮಾತ್ರ ಗರೀಬಿ ಹಠಾವೋ ಅಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಮಾತು ಕೇಳಿದ್ರೆ ಮದ್ವೆಯಾಗುತಿತ್ತು, ಕಾಲ ಇನ್ನೂ ಮಿಂಚಿಲ್ಲ; ಲಾಲು ಮಾತಿಗೆ ನಾಚಿ ನೀರಾದ ರಾಹುಲ್!

ಜನೆವರಿ 24 ಕ್ಕೆ ರಾಮಮಂದಿರ ಉದ್ಘಾಟನೆ: 

ಬಿಜೆಪಿ ಪಕ್ಷ ತತ್ವ, ಸಿದ್ಧಾಂತದಲ್ಲಿ ನಡೆಯುವ ಪಕ್ಷ. ಬಿಜೆಪಿ ಪಕ್ಷವೂ ರಾಮಮಂದಿರ ನಿರ್ಮಾಣದ ಗುರಿಯನ್ನು ಹೊಂದಿತ್ತು, ಆ ನಿಟ್ಟಿನಲ್ಲಿ ಹೋರಾಟ ಕೂಡ ಮಾಡಿತ್ತು. ಇದೇ ಜನೆವರಿ 24 ರಂದು ಭವ್ಯ ರಾಮಮಂದಿರ ಉದ್ಘಾಟನೆ ಆಗಲಿದೆ ಎಂದು ಕಟೀಲ್ ಹೇಳಿದರು. 

ದೇಶದಲ್ಲಿ ಹೊಸ ಗಾಳಿ‌ ಬೀಸುತ್ತಿದೆ. ನಾನು ಕಾಂಗ್ರೆಸ್ ಸರ್ಕಾರವಿದ್ದಾಗ ಸಂಸದನಾಗಿದ್ದೆ. ಆಗ ಸಡಕ್ ಯೋಜನೆಯಲ್ಲಿ ರಸ್ತೆ ನಿರ್ಮಾಣ ಮಾಡಲು ಸಹ ನಯಾ ಪೈಸೆ ಹಣ ಇರಲಿಲ್ಲ. ಹಾಗಾಗಿ ಈಗ ಭಾರತದಲ್ಲಿ ಈಗ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಈಗ ಹಲವು ವಿಷಯಗಳಲ್ಲಿ ವಿಶ್ವ ಭಾರತದ ಕಡೆ ನೋಡುತ್ತಿದೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದಲ್ಲಿ 25 ಸಾವಿರ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆ ತರಲಾಯಿತು. ಜಗತ್ತಿಗೆ ಯೋಗವನ್ನು ಪರಿಚಯಿಸಿದವರು ಮೋದಿಯವರು. ಅರಬ್ ದೇಶದಲ್ಲಿ 25 ಎಕರೆಯಲ್ಲಿ ಗಣಪತಿ ದೇವಸ್ಥಾನ ನಿರ್ಮಾಣ ಮಾಡಲಾಗ್ತಿದೆ. ಹಾಗಾಗಿ ಪಿಎಂ ನರೇಂದ್ರ ಮೋದಿಯವರು ಸಾಂಸ್ಕೃತಿಕ ಭಾರತವನ್ನು ನಿರ್ಮಾಣ ಮಾಡ್ತಿದ್ದಾರೆ. ದೇಶದ ಭದ್ರತೆಯಲ್ಲಿ ಮೋದಿ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಸರ್ಜಿಕಲ್ ಸ್ಟ್ರೈಕ್ ಮೂಲಕ ಎದುರಾಳಿಗಳನ್ನು ನುಗ್ಗಿ ಹೊಡೆದಿದೆ. ಕೋವಿಡ್ ನಂತಹ ಸಂದರ್ಭದಲ್ಲಿ ವೆಂಟಿಲೇಟರ್, ಉಚಿತ ವ್ಯಾಕ್ಸಿನ್ ಕೊಡಲಾಯಿತು ಇದು ನರೇಂದ್ತ ಮೋದಿಯವರ ಕಾಲಘಟ್ಟ ಎಂದು ಮೋದಿ ಆಡಳಿತವನ್ನು ನಳೀನ ಕಟೀಲ್ ಮುಕ್ತ ಕಂಠದಿಂದ ಹಾಡಿ ಹೊಗಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
ವಿಧಾನಸಭೆಯಲ್ಲಿ 'ಉತ್ತರ ಕರ್ನಾಟಕ' ವಿವಾದ: ಶಿವಲಿಂಗೇಗೌಡರ ಮಾತುಗಳಿಗೆ ಗರಂ ಆದ ಯತ್ನಾಳ್, ಗ್ಯಾರಂಟಿ, ಗುಂಡಿ ವಿಚಾರಕ್ಕೆ ಜಟಾಪಟಿ!