Assembly election: ಚುನಾವಣೆ ಬಂದಾಗ ಮಾತ್ರ ಬಿಜೆಪಿಗೆ ಮಠ, ಮಂದಿರ ನೆನಪು: ಕಾಂಗ್ರೆಸ್ ಕಿಡಿ

By Kannadaprabha News  |  First Published Mar 2, 2023, 8:56 AM IST

ಬಿಜೆಪಿಗೆ ಚುನಾವಣೆ ಬಂದಾಗ ಮಾತ್ರ ಮಠ, ಮಂದಿರ ನೆನಪಾಗುತ್ತದೆ. ರಾಜಕೀಯದ ತೆವಲಿಗೆ ಬಿಜೆಪಿ ಧರ್ಮ, ಜಾತಿಗಳಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.


ಭಟ್ಕಳ (ಮಾ.2) : ಬಿಜೆಪಿಗೆ ಚುನಾವಣೆ ಬಂದಾಗ ಮಾತ್ರ ಮಠ, ಮಂದಿರ ನೆನಪಾಗುತ್ತದೆ. ರಾಜಕೀಯದ ತೆವಲಿಗೆ ಬಿಜೆಪಿ ಧರ್ಮ, ಜಾತಿಗಳಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೆಂಕಟೇಶ ನಾಯ್ಕ ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಕಚೇರಿ(Block Congress Office)ಯಲ್ಲಿ ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ(Karnataka BJP) ಚುನಾವಣೆ ಗೆಲ್ಲಲು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಭಟ್ಕಳ ಕ್ಷೇತ್ರದಲ್ಲೂ ಬಿಜೆಪಿ ಮತ್ತು ಶಾಸಕ ಸುನೀಲ ನಾಯ್ಕ(MLA Sunil naik) ಅವರು ಮಾಜಿ ಶಾಸಕ ಮಂಕಾಳ ವೈದ್ಯರ (Mankala Subba Vaidya)ವಿರುದ್ಧ ಇಲ್ಲಸಲ್ಲದ ಆರೋಪ, ಅಪಪ್ರಚಾರ ಮಾಡುತ್ತಿದ್ದಾರೆ.

Latest Videos

undefined

ಪಂಪನ ಕನಸಿನಂತೆ ಬನವಾಸಿ ಅಭಿವೃದ್ಧಿಗೆ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ

ಶಾಸಕ ಸುನೀಲ ನಾಯ್ಕ ಬರೀ ಸುಳ್ಳು ಹೇಳುತ್ತಿದ್ದು, ಇದಕ್ಕೆ ಇತ್ತೀಚೆಗೆ ನಾಗಬನ ಮತ್ತು ಕರಿಬಂಟ ದೇವಸ್ಥಾನ(Nagabana and Karibanta temple)ಕ್ಕೆ ಸಿಟಿ ರವಿ(CT Ravi) ಮಾಂಸ ತಿಂದು ಭೇಟಿ ಮಾಡಿದ ಪ್ರಕರಣವೇ ಸಾಕ್ಷಿಯಾಗಿದೆ. ಸಿ.ಟಿ. ರವಿ ಅವರು ಶಾಸಕ ಸುನೀಲ ನಾಯ್ಕರ ಮನೆಯಲ್ಲಿ ತಾನು ಮಾಂಸ ಸೇವಿಸಿದ್ದು ನಿಜ ಎಂದು ಒಪ್ಪಿಕೊಂಡರೂ ಸಹ ಶಾಸಕ ಸುನೀಲ ನಾಯ್ಕ ಮಾತ್ರ ಸಿ.ಟಿ. ರವಿ ಅವರು ಮಾಂಸ ಸೇವಿಸಿಲ್ಲ. ಅವರು ಗೋಬಿ ಮಂಚೂರಿ ತಿಂದಿದ್ದಾರೆ ಎಂದು ಹಸೀ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ.

ಮಂಕಾಳ ವೈದ್ಯರು ಶಾಸಕರಿದ್ದಾಗ ನಾಗಬನದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ .7.50 ಲಕ್ಷ ಅನುದಾನ ಮಂಜೂರು ಆಗಿತ್ತು. ಆದರೆ, ಕಮಿಟಿಯವರು ನಾಗಬನ 3.12 ಗುಂಟೆ ಜಾಗದಲ್ಲಿದ್ದು ಅದಷ್ಟೂಜಾಗವನ್ನು ಸರ್ವೇ ಮಾಡಿಸಿ ಜೀರ್ಣೋದ್ಧಾರ ಮಾಡಬೇಕು ಎಂದರು. ಆದರೆ, ಇತ್ತೀಚೆಗೆ ಜೀರ್ಣೋದ್ಧಾರ ಗೊಳಿಸಿದ ನಾಗಬನದ ಜಾಗ 3.12 ಗುಂಟೆ ಇದೆಯೇ? ಉಳಿದ ಜಾಗ ಎಲ್ಲಿದೆ ಎಂದು ಪ್ರಶ್ನಿಸಿದ ಅವರು ನಾಗಬನ ವಿಚಾರದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯರ ವಿರುದ್ಧ ನಿರಂತರ ಅಪಪ್ರಚಾರ ಮಾಡಲಾಗಿದೆ.

ಮಂಕಾಳ ವೈದ್ಯರು ಅಧಿಕಾರ ಇದ್ದಾಗ ಮತ್ತು ಇಲ್ಲದಾಗ ಮಠ, ಮಂದಿರಗಳಿಗೆ ಎಷ್ಟುಸಹಾಯ ಮಾಡಿದ್ದಾರೆ ಮತ್ತು ಶಾಸಕ ಸುನೀಲ ನಾಯ್ಕ ಎಷ್ಟುಸಹಾಯ ಮಾಡಿದ್ದಾರೆನ್ನುವ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದು, ಶಾಸಕ ಸುನೀಲ ನಾಯ್ಕ ಮತ್ತು ಬಿಜೆಪಿಯವರು ಚರ್ಚೆಗೆ ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದ ವೆಂಕಟೇಶ ನಾಯ್ಕ, ಯಾರೇ ಆಗಲೀ ಸುಳ್ಳು ಹೇಳಿ ರಾಜಕೀಯ ಮಾಡಬಾರದು. ಶಾಸಕ ಸುನೀಲ ನಾಯ್ಕರು ಮಂಕಾಳ ವೈದ್ಯರು ಶಾಸಕರಿದ್ದ ಸಂದರ್ಭದಲ್ಲಿ ತಂದ ಅನುದಾನದ ಭೂಮಿಪೂಜೆ ಮಾಡುತ್ತಿದ್ದಾರೆ. ರಸ್ತೆ ಮುಂತಾದ ಕಾಮಗಾರಿಗಳನ್ನು ಅವರು ತಂದಿದ್ದು ಬಿಟ್ಟರೆ ಬೇರೆ ಏನು ಕಾಮಗಾರಿ ತಂದಿದ್ದಾರೆಂದು ಸ್ಪಷ್ಟಪಡಿಸಲಿ ಎಂದರು.

Karnataka assembly election 2023: ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಕುಟುಂಬದ ಕುಡಿ ಬಿಜೆಪಿಗೆ ಎಂಟ್ರಿ!

ಈ ವೇಳೆ ಕಾಂಗ್ರೆಸ್‌ ಮುಖಂಡರಾದ ವಿಠಲ ನಾಯ್ಕ, ಈಶ್ವರ ನಾಯ್ಕ, ವಿಷ್ಣು ದೇವಡಿಗ, ಮಂಜಪ್ಪ ನಾಯ್ಕ, ಗೋಪಾಲ ನಾಯ್ಕ, ರಮೇಶ ಗೊಂಡ, ಸುರೇಶ ನಾಯ್ಕ, ಮಂಜುನಾಥ ನಾಯ್ಕ ಬೆಳಕೆ ಮುಂತಾದವರಿದ್ದರು.

click me!