ಕಾಂಗ್ರೆಸ್‌ನ ಭದ್ರಕೋಟೆಯಾದ ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಮತದಾರರೇ ನಿರ್ಣಾಯಕರಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಮುಖಂಡ ಸಾದಿಕ್ ಪೈಲ್ವಾನ್‌ರಿಗೆ ಅವಕಾಶ ಕಲ್ಪಿಸಲು ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.
ದಾವಣಗೆರೆ (ಮಾ.2) : ಕಾಂಗ್ರೆಸ್‌ನ ಭದ್ರಕೋಟೆಯಾದ ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಮತದಾರರೇ ನಿರ್ಣಾಯಕರಾಗಿದ್ದು, ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಮುಖಂಡ ಸಾದಿಕ್ ಪೈಲ್ವಾನ್‌ರಿಗೆ ಅವಕಾಶ ಕಲ್ಪಿಸಲು ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಮುಖಂಡ ಹಜರತ್ ಅಲಿ(Muslim leader Hazrat Ali) ಮಾತನಾಡಿ ಸುಮಾರು 83 ಸಾವಿರ ಮುಸ್ಲಿಂ ಮತದಾರರೇ(Muslim voters) ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ಸಿ(Congress)ಗೆ ಶಕ್ತಿಯಾಗಿದ್ದು, ಕಳೆದ ಚುನಾವಣೆಯಲ್ಲಿಯೇ ತಮ್ಮ ಕೊನೆಯ ಚುನಾವಣೆ ಎಂಬುದಾಗಿ ಘೋಷಣೆ ಮಾಡಿದ್ದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ(MLA Dr. Shamanur Sivashankarappa)ನವರು 2023ರ ಚುನಾವಣೆಯಲ್ಲಿ ಮುಸ್ಲಿಂ ಸಮಾಜದ ಸಾದಿಕ್ ಪೈಲ್ವಾನ್‌ರಿಗೆ ಅವಕಾಶ ಮಾಡಿಕೊಡಲಿ ಎಂದರು.
ಹೊನ್ನಾಳಿ: ರೇಣುಕಾಚಾರ್ಯ ಎದುರು ತೊಡೆ ತಟ್ಟೋರು ಯಾರು?
ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗ(Assembly constituency)ಳಲ್ಲಿ ಇಲ್ಲದಷ್ಟುಮುಸ್ಲಿಂ ಮತದಾರರು ದಕ್ಷಿಣದಲ್ಲಿದ್ದಾರೆ. ಎಲ್ಲಾ ಜಾತಿ, ಧರ್ಮೀಯರಿಗಿಂತ ಹೆಚ್ಚು ಮುಸ್ಲಿಂ ಮತಗಳಿರುವ ದಕ್ಷಿಣದಲ್ಲಿ ಸಾದಿಕ್ ಪೈಲ್ವಾನ್‌ರಿಗೆ ಸ್ಪರ್ಧಿಸಲು ಕಾಂಗ್ರೆಸ್ ವರಿಷ್ಠರು ಅವಕಾಶ ಮಾಡಿಕೊಡಬೇಕು. ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರಿಗೆ ಭೇಟಿ ಮಾಡಿ, ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಒಂದು ಸಲವೂ ಮುಸ್ಲಿಮರಿಗೆ ಅವಕಾಶ ನೀಡಿಲ್ಲ. ಪ್ರತಿ ಚುನಾವಣೆಯಲ್ಲೂ ಇದೇ ತಮ್ಮ ಕೊನೆಯ ಚುನಾವಣೆ. ಮುಂದಿನ ಸಲ ಮುಸ್ಲಿಮರಿಗೆ ಟಿಕೆಟ್ ನೀಡುವುದಾಗಿ ಸುಳ್ಳು ಆಶ್ವಾಸನೆ ನೀಡಿಯೇ ಸಮುದಾಯವನ್ನು ಕಡೆಗಣಿಸುತ್ತಾ ಬರಲಾಗಿದೆ. ಪ್ರತಿ ಸಲವೂ ಮುಸ್ಲಿಮರು ನೀಡಿದಷ್ಟುಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬೇರೆ ಯಾವುದೇ ಸಮುದಾಯವೂ ನೀಡಿಲ್ಲ. ಆದರೂ, ಮುಸ್ಲಿಮರಿಗೆ ಕಾಂಗ್ರೆಸ್ಸಿನಲ್ಲಿ ಮನ್ನಣೆ, ಅವಕಾಶ ಸಿಕ್ಕಿಲ್ಲ ಎಂದು ದೂರಿದರು.
ಜೆಡಿಎಸ್ ಟಿಕೆಟ್ ತ್ಯಾಗ:
ಒಂದೇ ಕುಟುಂಬದ ನಾಯಕತ್ವದಿಂದಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳೂ ಆಗದೇ ದಕ್ಷಿಣ ಕ್ಷೇತ್ರ ಸೊರಗುತ್ತಿದೆ. ಕ್ಷೇತ್ರದ ಜನರೂ ಭಾರೀ ಬದಲಾವಣೆ ಬಯಸುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ಸಿನಿಂದ ಮುಸ್ಲಿಂ ಸಮಾಜಕ್ಕೆ ಟಿಕೆಟ್ ನೀಡಿದರೆ ಜೆಡಿಎಸ್ ಪಕ್ಷದ ದಕ್ಷಿಣದ ಟಿಕೆಟ್ ಆಕಾಂಕ್ಷಿ ಜೆ.ಅಮಾನುಲ್ಲಾ ಖಾನ್ ತಮ್ಮ ಸ್ಪರ್ಧೆ ತ್ಯಾಗ ಮಾಡುವುದಾಗಿ ಘೋಷಿಸಿದ್ದಾರೆ. ಎಸ್‌ಡಿಪಿಐ ಸಹಿತ ಮುಸ್ಲಿಂ ಅಭ್ಯರ್ಥಿಗೆ ಬೆಂಬಲಿಸುವ ಭರವಸೆ ನೀಡಿದೆ. ಈಗಾಗಲೇ ಸಾದಿಕ್ ಪೈಲ್ವಾನ್ ಕಾಂಗ್ರೆಸ್ ಟಿಕೆಟ್ ಬಯಸಿ, ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ರಾಜ್ಯ, ರಾಷ್ಟ್ರೀಯ ನಾಯಕರಿಗೂ ಟಿಕೆಟ್‌ಗೆ ಮನವಿ ಮಾಡಿದ್ದಾರೆ ಎಂದು ಹಜರತ್ ಅಲಿ ತಿಳಿಸಿದರು.
ದಾವಣಗೆರೆ: ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲವೆಂದು ಸಾಬೀತುಪಡಿಸಿ: ಎಂ.ಪಿ.ರೇಣುಕಾಚಾರ್ಯ ಸವಾಲ್
ಮುಸ್ಲಿಂ ಮುಖಂಡರಾದ ಕೆ.ಎಚ್.ಮಹಬೂಬ್, ಜಬೀ ಹಜರತ್, ಎ.ಎನ್.ದಾದಾಪೀರ್, ಮುಸ್ತಫಾ, ಸೈಯದ್ ಅಕ್ಬರ್ ಅಲಿ, ಕೆ.ಜಮಾಲುದ್ದೀನ್, ದಾದಾಪೀರ್ ಇತರರಿದ್ದರು.