ಅಸೆಂಬ್ಲಿ ಚುನಾವಣೆ ಹೊಸ್ತಿಲಲ್ಲಿ ಕೇಸರಿ ಪಡೆ ಶಕ್ತಿ ಪ್ರದರ್ಶನಕ್ಕೆ ಕಲಬುರಗಿಯಲ್ಲಿ ಸಿದ್ಧತೆ, ಸ್ಥಳ ಪರಿಶಿಲನೆ ನಡೆಸಿದ ಸಚಿವ ನಿರಾಣಿ
ಕಲಬುರಗಿ(ಅ.28): ಕಲಬುರಗಿಯಲ್ಲಿ ಅ.30ರಂದು ಬಿಜೆಪಿ ಇತರೆ ಹಿಂದುಳಿದ ವರ್ಗಗಳ (ಓಬಿಸಿ) ವಿರಾಟ್ ಜಾಗೃತಿ ಸಮಾವೇಶ ಆಯೋಜಿಸಿದೆ. ಕಲ್ಯಾಣ ಕರ್ನಾಟಕದ ಎಲ್ಲಾ 7 ಜಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಇರುವ ಓಬಿಸಿ ಜನ ಸಮುದಾಯವನ್ನು ಕಲಬುರಗಿಯಲ್ಲಿ ಸೇರಿಸುವ ಮೂಲಕ ಬಿಜೆಪಿ ಭಾರಿ ಶಕ್ತಿ ಪ್ರದರ್ಶನಕ್ಕೆ ವೇದಿಕೆ ರೂಪಿಸಿದೆ. ವಿಧಾನ ಸಭೆ ಚುನಾವಣೆಯ ಹೊಸ್ತಿಲಲ್ಲೇ ಕೇಸರಿ ಪಡೆಯ ಕಲಬುರಗಿ ಓಬಿಸಿ ಸಮಾವೇಶ ಆ ಪಕ್ಷದ ಶಕ್ತಿ ಪ್ರದರ್ಶನದ ರೂಪದಲ್ಲಿ ಹೊರಹೊಮ್ಮುವ ಸಾಧ್ಯತೆಗಳು ನಿಚ್ಚಳವಾಗಿವೆ.
ಕಲಬುರಗಿ ಹೊರ ವಲಯ ನಾಗನಹಲ್ಳಿ ಪೊಲೀಸ್ ತರಬೇತಿ ಶಾಲೆ ಪಕ್ಕದಲ್ಲಿರುವ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ರದ್ದೇವಾಡಗಿಯವರಿಗೆ ಸೇರಿರುವ 30 ಎಕರೆ ವಿಶಾಲ ಭೂಪ್ರದೇಶದಲ್ಲಿ ಸಮಾವೇಶಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಪಕ್ಷದ ಓಬಿಸಿ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರ ಬಾಬೂ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅದಾಗಲೇ 3 ಬಾರಿ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಸಿದ್ಧತೆಗಳಿಗೆ ಮುನ್ನುಡಿ ಬರೆದಿದ್ದಾರೆ.
Mandya : ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸ ಇದೆ : ಮತ್ತೆ ಚುನಾವಣೆ ಸ್ಪರ್ಧೆ
ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಈ ಸ್ಥಳಕ್ಕೆ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಗಳ ಪರಿಶೀಲನೆ ಮಾಡಿದ್ದಾರೆ. ಓಬಿಸಿ ಸಮಾವೇಶದ ಮಾಧ್ಯಮ ವಕ್ತಾರ, ಎಂಎಲ್‌ಸಿ ಶಶಿಲ್ ನಮೋಶಿ ಪ್ರಕಾರ ಸಮಾವೇಶಕ್ಕೆ 3 ರಿಂದ 4 ಲಕ್ಷ ಓಬಿಸಿ ಸಮುದಾಯಕ್ಕೆ ಸೇರಿದ ಜನತೆ ಪಾಲೊಳ್ಳುತ್ತಿದ್ದಾರೆ.
ಕನ್ನಡಪ್ರಭ ಜೊತೆ ಮಾತನಾಡಿದ ಶಶಿಲ್ ನಮೋಶಿ ಸಮಾವೇಶಕ್ಕೆ ಬಂದು ಹೋಗುವ ಎಲ್ಲರಿಗೂ ಅನುಕೂಲವಾಗುವಂತೆ ಭಾರಿ ಸಿದ್ಧತೆಗಳು ಸಾಗಿವೆ. ವಾಹನಗಳ ನಿಲುಗಡೆ, ವೇದಿಕೆ ಸಿದ್ಧತೆಗಳು ಅಂತಿಮ ಹಂ ತಲುಪಿವೆ. ಗಣ್ಯರೆಲ್ಲರ ಬರುವಿಕೆಗೆ ಅಗತ್ಯ ಸಿದ್ಧತೆಗಳು ಸಾಗಿವೆ ಎಂದರು.
ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಲೀನ ಕುಮಾರ್ ಕಟೀಲ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್, ಬಿಜೆಪಿ ಓಬಿಸಿ ರಾಷ್ಟ್ರೀಯ ಮೋರ್ಚಾ ಅಧ್ಯಕ್ಷ ಲಕ್ಷ್ಮಣ, ರಾಜ್ಯದ ಓಬಿಸಿ ಪ್ರಮುಖರು, ಜಿಲ್ಲಾವಾರು ಪದಾಧಿಕಾರಿಗಳು, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಭಗವಂತ ಖೂಬಾ, ರಾಜೇವ ಚಂದ್ರಶೇಖರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯಾ ಗುತ್ತೇದಾರ್, ಕಲಾಣ ನಾಡಿನ ಬಿಜೆಪಿ ಪಕ್ಷದ ಶಾಸಕರು, ಸಂಸದರು ಸೇರಿದಂತೆ ಪ್ರಮುಖರನೇಕರು ಪಾಲ್ಗೊಳ್ಳುತ್ತಿದ್ದಾರೆಂದು ಶಶಿಲ್ ನಮೋಶಿ ಹೇಳಿದ್ದಾರೆ.
'ಶ್ರೀರಾಮುಲು ವರ್ಚಸ್ಸು ಸಹಿಸದೆ ಸಿದ್ದರಾಮಯ್ಯ ಹತಾಶ'
ಅಸೆಂಬ್ಲಿ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಯ ಈ ಸಮಾವೇಶ ನಡೆಯುತ್ತಿರೋದು ಸಹಜವಾಗಿಯೇ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಪಕ್ಷ ಓಬಿಸಿ ಸಮುದಾಯದವರನ್ನು ತನ್ನತ್ತ ಹೆಚ್ಚಿನ ಪ್ರಮಾಣದಲ್ಲಿ ಸೆಳೆಯಲು ಈ ಸಮಾವೇಶದ ಮೂಲಕ ಪ್ರತ್ನ ಮಾಡುತ್ತಿರೋದು ಸ್ಪಷ್ಟವಾಗಿದೆ.
ಈಗಾಗಲೇ ಮೀಸಲಾತಿ ಪ್ರಮಾಣ ಹೆಚ್ಚಿಸುವ ಮೂಲಕ ಎಸ್ಸಿ, ಎಸ್ಟಿಸಮುದಾಯಗಳ ಗಮನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ಕಲಬುರಗಿಯ ಓಬಿಸಿ ಸಮಾವೇಶದ ಮೂಲಕ , ಪಕ್ಷ ಸಂಘಟನೆ, ಚುನಾವಣೆ ರಾಜಕೀಯ ವಿಚಾರವಾಗಿ ತಾನಂದುಕೊಂಡಿದ್ದನ್ನು ಸಾಧಿಸಲು ಮುಂದಾಗಿದೆ.