ಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಎಂ.ಪಿ. ರೇಣುಕಾಚಾರ್ಯ ಪರ ಚುನಾವಣಾ ಪ್ರಚಾರಕ್ಕಾಗಿ ಹೊನ್ನಾಳಿಗೆ ಏಪ್ರಿಲ್ 30ರಂದು ಆಗಮಿಸಲಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್ ತಿಳಿಸಿದರು.
ಹೊನ್ನಾಳಿ (ಏ.28) : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಎಂ.ಪಿ. ರೇಣುಕಾಚಾರ್ಯ ಪರ ಚುನಾವಣಾ ಪ್ರಚಾರಕ್ಕಾಗಿ ಹೊನ್ನಾಳಿಗೆ ಏಪ್ರಿಲ್ 30ರಂದು ಆಗಮಿಸಲಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್ ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಅಗಳ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ನಡ್ಡಾ (JP Nadda)ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಸಂಸದ ಜಿ.ಎಂ.ಸಿದ್ದೇಶ್ವರ(GM Siddeshwar MP), ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಸೇರಿ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಬಿಜೆಪಿ ಅಭ್ಯರ್ಥಿ ರೇಣುಕಾಚಾರ್ಯ(BJP Candidate MP Renukacharya) ಸೇರಿ ಮುಖಂಡರು ಪ್ರತಿ ಗ್ರಾಮಕ್ಕೆ ಎರಡರಿಂದ ಮೂರು ಬಾರಿ ಭೇಟಿ ಮಾಡಿ ಮತಯಾಚನೆ ಮಾಡಿದ್ದಾರೆ.
ಕರ್ನಾಟಕ ಕದನ ಕಣಕ್ಕೆ ಕೇಸರಿ ಕಲಿಗಳ ಎಂಟ್ರಿ!
ರೇಣುಕಾಚಾರ್ಯ 5 ವರ್ಷ ಪ್ರತಿ ಕ್ಷಣನೂ ಜನರ ಮಧ್ಯೆ ಇದ್ದು ಅವರ ಎಲ್ಲಾ ಕಷ್ಟಸುಖಗಳಿಗೆ ಸ್ಪಂದಿಸಿದ್ದಾರೆ. ಕೋವಿಡ್ ವೇಳೆ ಜನರ ಸೇವಕನಂತೆ ಕೆಲಸ ಮಾಡಿದ್ದಾರೆ. ಜೊತೆಗೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕು ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದು ಕೆಲಸ ಮಾಡಿಸಿದ್ದಾರೆ. ಅಭಿವೃದ್ಧಿ ಕೆಲಸಗಳೇ ಅವರಿಗೆ ಶ್ರೀರಕ್ಷೆ. ಅವರ ಗೆಲವು ನಿಶ್ಚಿತ ಎಂದು ಹೇಳಿದರು.
ಕದನ ಕಣದಲ್ಲಿ ಇಂದಿನಿಂದ 'ಕೇಸರಿ' ನಾಯಕರ ಅಸಲಿ ಗೇಮ್..ಪ್ರಚಾರ ಅಖಾಡಕ್ಕೆ ಇಳಿದ 'ಚುನಾವಣಾ ಚಾಣಕ್ಯ
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಾಂತರಾಜ್ ಪಾಟೀಲ್ ಬಲಮುರಿ, ಸಿ.ಆರ್. ಶಿವಾನಂದ್, ಆರಕೆರೆ ನಾಗರಾಜ್, ಹಿರಿಯ ಮುಖಂಡ ಅರಕೆರೆ ಎ.ಬಿ. ಹನುಮಂತಪ್ಪ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಮಾದೇನಹಳ್ಳಿ ಕೆ.ಇ. ನಾಗರಾಜ್, ರುದ್ರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಶ್, ಮಹೇಶ್ ಹುಡೇದ್ ಮುಂತಾದವರಿದ್ದರು