ರಾಹುಲ್ ಗಾಂಧಿ ಹುಚ್ಚ, ಸೋನಿಯಾ ಗಾಂಧಿ ವಿಷಕನ್ಯೆ ಎಂಬ ಬಸವರಾಜ್ ಪಾಟೀಲ್ ಯತ್ನಾಳ್ ಹೇಳಿಕೆ ಬಿಜೆಪಿ ಸಂಸ್ಕೃತಿ ಅಲ್ಲ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಚಿಕ್ಕಮಗಳೂರು (ಏ.29) : ರಾಹುಲ್ ಗಾಂಧಿ ಹುಚ್ಚ, ಸೋನಿಯಾ ಗಾಂಧಿ ವಿಷಕನ್ಯೆ ಎಂಬ ಬಸವರಾಜ್ ಪಾಟೀಲ್ ಯತ್ನಾಳ್ ಹೇಳಿಕೆ ಬಿಜೆಪಿ ಸಂಸ್ಕೃತಿ ಅಲ್ಲ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಳಸ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರ ಹೇಳಿಕೆಯನ್ನ ನಾವು ಒಪ್ಪುವುದಿಲ್ಲ, ಯತ್ನಾಳ್ ಬೇರೆ ಪಕ್ಷಗಳ ನಾಯಕರ ಬಗ್ಗೆ ಇಂತಹ ಹೇಳಿಕೆ ನೀಡಬಾರದು ಎಂದರು.
undefined
ಪ್ರಧಾನಿ ನರೇಂದ್ರ ಮೋದಿ(Narendra Modi)ಯವರನ್ನು ವಿಷ ಸರ್ಪ ಎಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(AICC President Mallikarjun kharge) ಹೇಳಿಕೆಗೆ ಶೋಭಾ ಕರಂದ್ಲಾಜೆ (Shobha karanddlaje)ಆಕ್ರೋಶ ವ್ಯಕ್ತಪಡಿಸಿದರು. ಪ್ರಪಂಚ ಮೋದಿಯನ್ನ ಹೊಗಳುತ್ತಿದೆ, ಕೊಂಡಾಡುತ್ತಿದೆ. ರಷ್ಯಾ-ಉಕ್ರೇನ್ ಯುದ್ಧವಾದಾಗ ಮಧ್ಯಸ್ಥಿಕೆ ವಹಿಸಿದ್ದು ಪ್ರಧಾನಿ ಮೋದಿ, ಜಗತ್ತೇ ಮೆಚ್ವಿರೋ ನಾಯಕರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದರು.
ಶಿವಮೊಗ್ಗ: ಸಂಸದ ರಾಘವೇಂದ್ರ ನೇತೃತ್ವದಲ್ಲಿ ಸ್ನೇಹಮಿಲನ, ಬಿಜೆಪಿ ಸೇರ್ಪಡೆ
ಮೋದಿಗೆ ಸೋನಿಯಾಗಾಂಧಿಯವರು ಸಾವಿನ ವ್ಯಾಪಾರಿ ಅಂದಿದ್ರು, ಪ್ರಿಯಾಂಕ ಗಾಂಧಿ(Priyanka gandhi)ಯವರು ನಾಲಾಯಕ್, ಹಿಟ್ಲರ್ ಅಂದಿದ್ರು, ಮಹಾರಾಷ್ಟ್ರ ಚುನಾವಣೆ ವೇಳೆ ಖರ್ಗೆ 100 ತಲೆ ರಾವಣ ಅಂದಿದ್ದರು. ಈಗ ವಿಷ ಸರ್ಪ, ನೆಕ್ಕಿ ನೋಡಿದರೆ ಸಾಯ್ತೀರಾ ಅಂದಿದ್ದಾರೆ ಎಂದ ಅವರು, ಖರ್ಗೆ, ಕೇವಲ ಕರ್ನಾಟಕದ ನಾಯಕರಲ್ಲ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು. ಅವರ ಮಾತನ್ನು ಚೀನಾ, ಪಾಕಿಸ್ತಾನ, ಅಮೇರಿಕಾ ಎಲ್ಲಾ ಕೇಳಿಸಿಕೊಳ್ತಾರೆ. ಅವರಿಗೆ ಅವಮಾನ ಮಾಡುವುದನ್ನ ಯಾರೂ ಕ್ಷಮಿಸಲ್ಲ, ಖರ್ಗೆ ಅವರು ಬೇಷರತ್ ಕ್ಷಮೆ ಕೇಳಬೇಕು. ಚುನಾವಣಾ ಆಯೋಗ ಕಾಂಗ್ರೆಸ್ ಖರ್ಗೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ(Siddaramaiah) ಅವರಿಗೆ ಸೋಲುವ ಭಯ ಕಾಡುತ್ತಿದೆ. ಹಾಗಾಗಿ, ಹತಾಶರಾಗಿದ್ದಾರೆ. ಸೋಮಣ್ಣ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ, ಸೋಲಿನ ಭಯದಿಂದ ಕಾಂಗ್ರೆಸ್ ಹಲ್ಲೆಗೆ ಮುಂದಾಗಿದೆ, ಮತದಾರರು ಸಿದ್ದರಾಮಯ್ಯನವರನ್ನ ಸೋಲಿಸಿ ಮನೆಗೆ ಕಳುಹಿಸುತ್ತಾರೆ ಎಂದರು.
ಬಿಜೆಪಿ ಸರ್ಕಾರ ಇಲ್ಲದ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಅಪೂರ್ಣ: ಶೋಭಾ ಕರಂದ್ಲಾಜೆ