ಮೋದಿ ಸರ್ಕಾರದಿಂದ ರೈತರಿಗೆ ಬೆಂಬಲ ಬೆಲೆ: ಭಗವಂತ ಖೂಬಾ ಶ್ಲಾಘ​ನೆ

By Kannadaprabha News  |  First Published Jun 10, 2023, 5:37 AM IST

ದೇಶದ ಬೆನ್ನೆಲುಬಾದ ಅನ್ನದಾತನ ಬೆನ್ನಿಗೆ ನರೇಂದ್ರ ಮೋದಿ ಸರ್ಕಾರ ಸದಾಕಾಲ ನಿಂತಿದ್ದು, ಮತ್ತೊಮ್ಮೆ ರೈತರ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.


ಬೀದರ್ (ಜೂ.10) : ದೇಶದ ಬೆನ್ನೆಲುಬಾದ ಅನ್ನದಾತನ ಬೆನ್ನಿಗೆ ನರೇಂದ್ರ ಮೋದಿ ಸರ್ಕಾರ ಸದಾಕಾಲ ನಿಂತಿದ್ದು, ಮತ್ತೊಮ್ಮೆ ರೈತರ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ರೈತರ ಮೊಗದಲ್ಲಿ ಮಂದಹಾಸ ತರಿಸಿದ ಕೇಂದ್ರ ಸರ್ಕಾರವು ದೇಶದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದ್ದು, ಕನಿಷ್ಠ ಬೆಂಬಲ ಬೆಲೆ ಘೋಷಿಸಿ ರೈತರಿಗೆ ಹೆಚ್ಚಿನ ಆದಾಯಕ್ಕಾಗಿ ಕೈಗೊಂಡಿರುವ ಕ್ರಮವನ್ನು ಸಚಿವರು ಶ್ಲಾಘಿಸಿದ್ದಾರೆ.

Tap to resize

Latest Videos

undefined

ರೈತರಿಗೆ ಮೋದಿ ಸರ್ಕಾರದಿಂದ ಗುಡ್‌ ನ್ಯೂಸ್‌: ಹಲವು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

ನಮ್ಮ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ತೊಗರಿಗೆ ರು.7000 (400 ರು.ಹೆಚ್ಚಳ) ಹೆಸರು ಬೇಳೆಗೆ ರು.8558 (803 ರು. ಹೆಚ್ಚಳ) ಉದ್ದಿನ ಬೇಳೆಗೆ ರು.6950 (350 ರು.ಹೆಚ್ಚಳ) ಸೂರ್ಯಕಾಂತಿ ಬೀಜ ರು.6760 (360 ರು.ಹೆಚ್ಚಳ) ಸೋಯಾಬೀನ್‌ ಹಳದಿ ರು.4600 (300 ರು.ಹೆಚ್ಚಳ) ಜೋಳ-ಹೈಬ್ರಿಡ್‌ ರು.3180 (210 ರು.ಹೆಚ್ಚಳ) ಜೋಳ-ಮಾಲ್ದಂಡಿ ರು.3225 (235 ರು.ಹೆಚ್ಚಳ) ಇತ್ಯಾದಿ ಬೇಳೆಗಳಿಗೆ ಕನಿಷ್ಠ ಬೆಂಬಲ ಹೆಚ್ಚಳ ಮಾಡಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ರೈತರಿಗೆ ಸಹಾಯವಾಗಲಿದೆ. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಎಲ್ಲಾ ರೈತರು ಕನಿಷ್ಠ ಬೆಂಬಲ ಬೆಲೆಯ ಸದೂಪಯೋಗ ಪಡೆದುಕೊಳ್ಳಲು ಕೇಂದ್ರ ಸಚಿವರು ರೈತರಲ್ಲಿ ಮನವಿ ಮಾಡಿ​ದ್ದಾರೆ. ಪ್ರಯುಕ್ತ ಸಮಸ್ತ ರೈತರ ಪರವಾಗಿ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಹಾಗೂ ಕೃಷಿ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌ಗೆ ಕೇಂದ್ರ ಸಚಿವ ಭಗವಂತ ಖೂಬಾ ಧನ್ಯವಾದ ತಿಳಿಸಿದ್ದಾರೆ.

ಬೀದರ್: ಈಶ್ವರ್ ಖಂಡ್ರೆಗೆ ಜಿಲ್ಲೆ ಉಸ್ತು​ವಾ​ರಿ, ಅಭಿ​ವೃ​ದ್ಧಿಯ ಜವಾ​ಬ್ದಾರಿ!

 ಮುಂಗಾರು ಬೆಳೆ ಬೆಂಬಲ ಬೆಲೆ ಹೆಚ್ಚಳ: ಬಿಜೆಪಿ ಸ್ವಾಗತ

ಉಡುಪಿ: 2023-24ನೇ ಸಾಲಿನ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ. ದೇಶದ ಪ್ರಮುಖ ಆಹಾರ ಬೆಳೆಗಳಾದ ಭತ್ತ, ರಾಗಿ ಹಾಗೂ ದ್ವಿದಳ ಧಾನ್ಯಗಳಾದ ತೊಗರಿ, ಹೆಸರು ಕಾಳು, ಉದ್ದು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ಈ ಕ್ರಮ ದೇಶದಲ್ಲಿ ಬೆಳೆ ವೈವಿಧ್ಯತೆಗೆ ಉತ್ತೇಜನ ಮತ್ತು ಹೆಚ್ಚು ಪ್ರದೇಶದಲ್ಲಿ ಬಿತ್ತನೆಗೆ ಪ್ರೋತ್ಸಾಹ, ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ವೃದ್ಧಿ, ಗ್ರಾಮೀಣ ರೈತರ ಆದಾಯವನ್ನು ಹೆಚ್ಚಿಸಲಿದೆ. ಬೆಳೆಗಳ ಉತ್ಪಾದನಾ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರ ಈ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ನಿರ್ಧರಿಸಿದ್ದು, ಈ ಮಹತ್ವದ ನಿರ್ಧಾರವು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ಹಾಗೂ ಗೋವಾದ ಕೇಂದ್ರೀಯ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಶಿವಕುಮಾರ್‌ ಅಂಬಲಪಾಡಿ ತಿಳಿಸಿದ್ದಾರೆ.

click me!