ರಾಜೀನಾಮೆ ಕೊಟ್ಟ ತಕ್ಷಣ ಪಕ್ಷವೇನು ಮುಳುಗಿ ಹೋಗಲ್ಲ, ಬಿಜೆಪಿ ಸಂಸದ ಟಾಂಗ್

By Ramesh B  |  First Published Jul 30, 2022, 4:12 PM IST

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಪ್ರವೀಣ್ ನಿಟ್ಟೂರು ಹತ್ಯೆಗೆ ಖಂಡಿಸಿ  ಆವೇಷಭರಿತರಾಗಿ ಸ್ವಪಕ್ಷದ ಸರಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದ  ಬಿಜೆಪಿ ಯುವ ಮೋರ್ಚ ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ಸಂಸದ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ನೋಡಿ.


ದಾವಣಗೆರೆ, (ಜುಲೈ.30):  ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ ತೀವ್ರ ಸ್ವರೂಪಪಡೆದುಕೊಂಡಿದ್ದು, ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಯುವ ಮೋರ್ಚ  ತಮ್ಮ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಹಿಂದೂಗಳಿಗೆ ನಮ್ಮ ಬಿಜೆಪಿ ಸರ್ಕಾರವೇ ರಕ್ಷಣೆ ಇಲ್ಲ ಎಂದು ಹಲವು ಜಿಲ್ಲೆಗಳಲ್ಲಿ ಯುವ ಮೋರ್ಚ ಕಾರ್ಯಕರ್ತರು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ.

ರಾಜೀನಾಮೆ ಕೊಟ್ಟ ತಕ್ಷಣ ಪಕ್ಷವೇನು ಮುಳುಗಿ ಹೋಗಲ್ಲ. ಇದು 11 ಕೋಟಿ ಕಾರ್ಯಕರ್ತರನ್ನ ಹೊಂದಿರುವ ಪಕ್ಷ. ಅವರು ಯಾರು ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ರಾಜೀನಾಮೆ ಕೊಡುವ ಮುನ್ನ ನಮ್ಮ ಜಿಲ್ಲಾದ್ಯಕ್ಷರು ಶಾಸಕರು ನಮ್ಮ ಕಡೆ ಮಾತನಾಡಬೇಕು. ಅವರು ಪಕ್ಷಕ್ಕೆ ಇದುವರೆಗು ರಾಜೀನಾಮೆ ಸಲ್ಲಿಸಿಲ್ಲ ಅವರು ಕೊಟ್ಟಿದ್ದರು ಒಪ್ಪಿಗೆಯಾಗೊಲ್ಲ ಎಂದರು.

Tap to resize

Latest Videos

ಪಕ್ಷದ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆ ವಾಪಸ್‌: ಶುಭಂ

ಟೀವಿಯಲ್ಲಿ ಬರಬೇಕೆಂದು ರಾಜೀನಾಮೆ ಕೊಟ್ಟಿದ್ದೇವೆಂದು ಹೇಳಿರಬೇಕು. ಅವರಿಗೆ ಎಲ್ಲರನ್ನು ಮಾತನಾಡಿಸಿ ಸಮಾಧಾನ‌ಪಡಿಸುತ್ತೇವೆ. ಈ ಹಿಂದೆ 32 ಹತ್ಯೆಯಾಗಿದ್ದು ಕಾಂಗ್ರೆಸ್ ನಲ್ಲಿ . ನಮ್ಮ ಸರ್ಕಾರ ಇದ್ದಾಗ ಎರಡು ಹತ್ಯೆ ಆಗಿದೆ. ಕಾನೂನುಬದ್ಧವಾಗಿ ಸಂವಿಧಾನಾತ್ಮಕವಾಗಿ ನಮ್ಮ ಮುಖ್ಯಮಂತ್ರಿ ಗಳು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಯಾರೋ ಹೇಳಿದ್ದಾರೆಂದು ಎನ್ಕೌಂಟರ್ ಮಾಡಿದ್ರೆ ನೀವೇ ಗುಂಡಿಕ್ಕಿ ಕೊಂದರು ಎಂದು ಸುದ್ದಿ ಮಾಡಿ ಸರ್ಕಾರ ಬೀಳಿಸುತ್ತೀರಾ. ಕಾನೂನುಬದ್ದವಾಗಿ ನಮ್ಮ ಮುಖ್ಯ ಮಂತ್ರಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ರಾಜ್ಯಾಧ್ಯಕ್ಷ ಸಂದೀಪ್‌ ಕುಮಾರ್ ಸ್ಪಷ್ಟನೆ
 ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಖಂಡಿಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವ ಯುವ ಮೋರ್ಚಾ ಪದಾಧಿಕಾರಿಗಳ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ. ಅವರೆಲ್ಲರ ಜೊತೆ ಮಾತುಕತೆ ನಡೆಸಿ ಮನವೊಲಿಸಲಾಗುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಸಂದೀಪ್‌ ಕುಮಾರ್  ಸ್ಪಷ್ಟಪಡಿಸಿದ್ದಾರೆ.

ಈಶ್ವರಪ್ಪ ಹೇಳಿದ್ದು
ನಾವೆಲ್ಲರೂ ಪಕ್ಷಕ್ಕೆ ದುಡಿದಿದ್ದೇವೆ. ನಮ್ಮಕ್ಕಿಂತ ಮೊದಲು ಅನೇಕರು ತ್ಯಾಗ ಮಾಡಿ ಕಟ್ಟಿರುವ ಪಕ್ಷ ಬಿಜೆಪಿ. ಪರಿಣಾಮ ನಾವೆಲ್ಲ ಸ್ಥಾನ - ಮಾನದಲ್ಲಿದ್ದೇವೆ. ನರೇಂದ್ರ ಮೋದಿ ಪ್ರಧಾನಿಯಾಗಿ ವಿಶ್ವವೇ ಮೆಚ್ಚುವಂತೆ ಕೆಲಸ ಮಾಡುತ್ತಿದ್ದಾರೆ. ಯುವ ಮೋರ್ಚಾ ಕಾರ್ಯಕರ್ತರು ಈಗಷ್ಟೇ ಕಣ್ಣು ಬಿಡುತ್ತಿದ್ದಾರೆ. ಆಗಲೇ ನಾನು ರಾಜೀನಾಮೆ ಕೊಡುತ್ತೇನೆ ಅಂತಾರೆ. ಯುವ ಮೋರ್ಚಾ ಯುವಕರು ಪಕ್ಷಕ್ಕೆ ನೀಡಿದ ಕೊಡುಗೆ ಏನು ಎಂದು ಕೆಎಸ್ ಈಶ್ವರಪ್ಪ ಪ್ರಶ್ನಿಸಿದ್ದರು

 ಶ್ಯಾಮ್​ ಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯರ ಕಗ್ಗೊಲೆ ನಡೆಯಿತು. ಅವರು ಸತ್ತರು, ಆದರೆ ಅವರ ಸಿದ್ದಾಂತ ಸತ್ತಿದ್ಯಾ?. ಆಗ ಯಾರೂ ರಾಜೀನಾಮೆ ಕೊಟ್ಟು ಹಿಂದೆ ಸರಿಯಲಿಲ್ಲ. ರಾಜೀನಾಮೆ ಕೊಟ್ಟರೆ ಹಿಂದುತ್ವ ಮತ್ತು ನಮ್ಮ ಸಿದ್ಧಾಂತಕ್ಕೆ ಅಪಮಾನ ಮಾಡಿದಂತೆ ಎಂದು ನಮ್ಮ ಹಿರಿಯರು ನಮಗೆ ಹೇಳಿದ್ದಾರೆ. ನಾವು ಯಾವಾಗ ಸಾಯ್ತೀವೋ ಗೊತ್ತಿಲ್ಲ. ನೀವು ರಾಜೀನಾಮೆ ಯಾರಿಗೆ ಕೊಡುತ್ತಿದ್ದೀರಾ?. ಸಿದ್ಧಾಂತಕ್ಕೆ ರಾಜೀನಾಮೆ ಕೊಡುತ್ತೀರಾ ಎಂದು ಕಿಡಿಕಾರಿದ್ದರು.

click me!