ಪಕ್ಷದ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆ ವಾಪಸ್‌: ಶುಭಂ

ಪಕ್ಷದ ಸದಸ್ಯತ್ವಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆಯುತ್ತಿದ್ದೇವೆ ಎಂದು ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಶುಭಂ ಕಳಸ  ತಿಳಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಖಂಡಿಸಿ ರಾಜೀನಾಮೆ ನೀಡಿದ್ದರು.

Resignation from party membership returned say shubham rav

ಕಾರವಾರ (ಜು.30) : ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರನ್ನು ಪಕ್ಷದ ಮುಖಂಡರು ಕ್ಷಮಿಸಬೇಕು. ಪಕ್ಷದ ಸದಸ್ಯತ್ವಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆಯುತ್ತಿದ್ದೇವೆ ಎಂದು ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಶುಭಂ ಕಳಸ ಹೇಳಿದರು.\ ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯುವ ಮೋರ್ಚಾದಿಂದ ಗುರುವಾರ ನಡೆಸಿದ ಪ್ರತಿಭಟನೆಯಲ್ಲಿ ಮುಖಂಡರ ವಿರುದ್ಧ ಹೇಳಿಕೆ ನೀಡಲಾಗಿತ್ತು. ಜತೆಗೆ ರಾಜೀನಾಮೆ ನೀಡಲಾಗಿತ್ತು. ಆದರೆ ಬಳಿಕ ಹಿರಿಯರು ತಿಳಿ ಹೇಳಿದ್ದಾರೆ. ಜತೆಗೆ ಪಕ್ಷದ ಕಾರ್ಯಕರ್ತರ ಒತ್ತಾಸೆಯಂತೆ ಪ್ರವೀಣ ಹತ್ಯೆ ಪ್ರಕರಣದಲ್ಲಿ ಆರೋಪಿಗಳ್ನನು ಬಂಧಿಸಲಾಗಿದೆ. ಮೃತರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ, ಗೃಹ ಸಚಿವ, ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರನ್ನು ಒಳಗೊಂಡು ಎಲ್ಲ ಮುಖಂಡರಲ್ಲಿ ಕ್ಷಮೆ ಕೇಳುತ್ತೇವೆ. ರಾಜೀನಾಮೆಯನ್ನೂ ಹಿಂಪಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.

ಪ್ರವೀಣ್ ಹತ್ಯೆ ಖಂಡಿಸಿ ಸಾಮೂಹಿಕ ರಾಜಿನಾಮೆಗೆ ಮುಂದಾದ ಚಿಕ್ಕಮಗಳೂರು ಯುವ ಮೋರ್ಚಾ ಸದಸ್ಯರು

ಬಿಜೆಪಿ(BJP) ಒಂದು ಕುಟುಂಬವಿದ್ದಂತೆ. ಯಾರಿಗೆ ತೊಂದರೆಯಾದರೂ ಎಲ್ಲ ಸದಸ್ಯರಿಗೂ ನೋವಾಗುತ್ತದೆ. ಪ್ರವೀಣ ಕೊಲೆ ಅತ್ಯಂತ ದುಃಖವಾಗಿದ್ದು, ಮನಸ್ಸಿಗೆ ಬೇಸರವಾಗಿ ಗುರುವಾರ ಸರ್ಕಾರದ ಹಾಗೂ ಪಕ್ಷದ ಮುಖಂಡರ ವಿರುದ್ಧ ಮಾತನಾಡಲಾಗಿತ್ತು. ಮುಂದೆ ಈ ರೀತಿ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಮುಜುಗರ ಆಗದ ರೀತಿಯಲ್ಲಿ, ವರ್ಚಸ್ಸಿಗೆ ಧಕ್ಕೆಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸುತ್ತೇವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಸ್‌ ಗುನಗಿ, ಅವಿನಾಶ ಉಳ್ವೇಕರ, ಶೇಖರ ನಾಯ್ಕ, ನಾಗರಾಜ ದುರ್ಗೇಕರ, ಅಜಯ ಜೋಶಿ, ರಹುಲ್‌ ಪುರಲೇಕರ, ಸಂದೇಶ ತಳೇಕರ ಮೊದಲಾದವರು ಇದ್ದರು.

ಯುವ ಮೋರ್ಚಾ ಮುಖಂಡರ ರಾಜೀನಾಮೆ ಪಕ್ಷದ ದೌರ್ಬಲ್ಯ: ಶಾಸಕ ಸುನೀಲ್‌ ಹೆಗಡೆ

ಪ್ರವೀಣ ಕೊಲೆ ಕೃತ್ಯವನ್ನು ವಿರೋಧಿಸಿ ರಾಜ್ಯದಲ್ಲಿ ಯುವ ಮೋರ್ಚಾದ ಕಾರ್ಯಕರ್ತರು ಹಾಗೂ ಮುಖಂಡರು ರಾಜೀನಾಮೆ ನೀಡಲು ಪ್ರಾರಂಭಿಸಿರುವುದು ಪಕ್ಷದ ದೌರ್ಬಲ್ಯವಾಗಲಿದೆ ಎಂದು ಮಾಜಿ ಶಾಸಕ ಸುನೀಲ್‌ ಹೆಗಡೆ ಹೇಳಿದರು. ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕರ್ತರು ರಾಜೀನಾಮೆ ಕೊಡುವುದನ್ನು ಕೈಬಿಟ್ಟು ಪಕ್ಷಕ್ಕೆ ಶಕ್ತಿ ತುಂಬುವ ಕಾಯಕದಲ್ಲಿ ನಿರತರಾಗಬೇಕಾಗಿದೆ. ಕೆಲವು ಕಾಣದ ಕೈಗಳು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯನ್ನು ದುರ್ಬಲಗೊಳಿಸಲು ಈ ಕೃತ್ಯ ಎಸಗಿದ್ದನ್ನು ತಿಳಿಯಬೇಕಾಗಿದೆ ಎಂದು ಹೇಳಿದರು.

ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ಮುಖಂಡರು

ಬಿಜೆಪಿ ಶಕ್ತಿಯುತ ಪಕ್ಷವಾಗಿದೆ. ಪಕ್ಷಕ್ಕೆ ತನ್ನದೇಯಾದ ಹಿನ್ನೆಲೆ ಮತ್ತು ಇತಿಹಾಸವಿದ್ದು, ಇದನ್ನು ಎಲ್ಲರೂ ಅರಿಯಬೇಕಾಗಿದೆ. ಮುಸ್ಲಿಮರು ನಡೆಸುತ್ತಿರುವ ಮದರಸಾ ಹಾಗೂ ಅವರ ಪ್ರೇರಣೆಯಲ್ಲಿರುವ ಕೆಲವು ಸಂಘಟನೆಗಳನ್ನು ನಿಷೇಧ ಮಾಡುವುದರ ಮೂಲಕ ಹಿಂದಿನ ಸರ್ಕಾರವು ಕೆಲವು ಸಂಘಟನೆಗಳ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದನ್ನು ಗುರುತಿಸಿ ಅವುಗಳಿಗೆ ಮರುಜೀವ ನೀಡಬೇಕಾಗಿದೆ. ಸಹನೆಯಿಂದ ಮಾತ್ರ ಕೃತ್ಯವನ್ನು ಬೆಳಕಿಗೆ ತರಲು ಸಾಧ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಅನಿಲ್‌ ಮುತ್ನಾಳೆ, ವಿ.ಎಂ. ಪಾಟೀಲ್‌, ರತ್ನಮಾಲಾ ಮುಳೆ, ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಉದಯ ಹೂಲಿ, ರೂಪಾ ಗಿರಿ, ಶಾಂತಾ ಹಿರೇಕರ, ಉಮೇಶ ದೇಶಪಾಂಡೆ, ಹನುಮಂತ ತಳವಾರ, ರಾಜೇಶ್ವರಿ ಹಿರೇಮಠ, ಪುಟ್ಟು ಹುಟಗಿಕರ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios