'ಶಾ ಬಿಜೆಪಿ ಸರ್ಕಾರ ಇರುತ್ತೆ ಅಂದಿದ್ರು, ಆದ್ರೆ ಯಡಿಯೂರಪ್ಪ CM ಆಗಿರ್ತಾರೆ ಅಂದಿಲ್ಲ'

Published : Jan 18, 2021, 03:23 PM IST
'ಶಾ ಬಿಜೆಪಿ ಸರ್ಕಾರ ಇರುತ್ತೆ ಅಂದಿದ್ರು, ಆದ್ರೆ ಯಡಿಯೂರಪ್ಪ CM ಆಗಿರ್ತಾರೆ ಅಂದಿಲ್ಲ'

ಸಾರಾಂಶ

ಬಿಜೆಪಿ ವರಿಷ್ಠರು ಏನೇ ಎಚ್ಚರಿಕೆ ಕೊಟ್ಟರೂ ಬಸನಗೌಡ ಪಾಟೀಲ್ ಯತ್ನಾಳ್‌ ಮಾತ್ರ  ಅದ್ಯಾವುದನ್ನು ಕೇರ್ ಮಾಡದೇ ಸಿಎಂ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ಮುಂದುವರಿಸಿದ್ದಾರೆ.

ಹಾವೇರಿ, (ಜ.18): ಸಚಿವ ಸ್ಥಾನ ಕೈತಪ್ಪಿದ್ದರಿಂದ ಸಿಎಂ ವಿರುದ್ಧ ಸಿಡಿ ಬಾಂಬ್​ ಸಿಡಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಜ.16, 17 ಕರ್ನಾಟಕ ಪ್ರವಾಸದ ವೇಳೆ ಇನ್ನೂ ಮುಂದಿನ ಎರಡೂವರೆ ವರ್ಷ ಬಿಜೆಪಿ ಅಧಿಕಾರದಲ್ಲಿ ಇರುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಇಂದು (ಸೋಮವಾರ) ಹಾವೇರಿಯಲ್ಲಿ ಪ್ರತಿಕ್ರಿಯಿಸಿರುವ ಯತ್ನಾಳ್​, ಅಮಿತ್ ಶಾ 2.5 ವರ್ಷ ಬಿಜೆಪಿ ಸರ್ಕಾರವಿರುತ್ತದೆ ಅಂದಿದ್ದಾರೆ. ಆದರೆ, ಯಡಿಯೂರಪ್ಪ ಸಿಎಂ ಆಗಿರುತ್ತಾರೆ ಅಂತ ಹೇಳಿಲ್ಲ ಎಂದರು.

ಅಸಮಾಧಾನಿತರಿಗೆ ಚಳಿ ಬಿಡಿಸಿದ ಚಾಣಕ್ಯ, ಬಂಡಾಯ ಥಂಡಾ ಥಂಡಾ, ಖೇಲ್ ಖತಂ, ನಾಟಕ್ ಬಂದ್!

ಯಡಿಯೂರಪ್ಪ ಸಿಎಂ ಆಗಿರುವವರೆಗೂ ನಾನು ಮಂತ್ರಿ ಆಗುವುದಿಲ್ಲ. ನಾನು ಸಚಿವ ಸ್ಥಾನ ಕೇಳಿದವನಲ್ಲ. ಯಾವ್ಯಾವ ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲವೋ, ಅಂತಹ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡುವಂತೆ ಹೇಳಿದ್ದೆ ಅಷ್ಟೇ. ಇನ್ನು ನನಗೆ ಸಚಿವ ಸ್ಥಾನ ಕೊಟ್ಟರೂ ತೆಗೆದುಕೊಳ್ಳುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು. 

ಇನ್ನು ಇದೇ ವೇಳೆ ಏಪ್ರಿಲ್‌ ಏಪ್ರಿಲ್ ನಂತರ ಸಿಎಂ ಸ್ಥಾನದಿಂದ ಬಿಎಸ್​ವೈ ಕೆಳಗಿಳಿಯಲಿದ್ದಾರೆ ಎನ್ನುವ ಸಿದ್ದರಾಮಯ್ಯನವರ ಹೇಳಿಕೆಗೆ ಗ್ಗೆ ಮಾತನಾಡಿದ ಯತ್ನಾಳ್,  ಯಡಿಯೂರಪ್ಪ, ಸಿದ್ದರಾಮಯ್ಯ ಬಹಳ ಆಪ್ತರು. ಹೀಗಾಗಿ ಬಿಎಸ್​ವೈ ಯಾವಾಗ ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎನ್ನುವ ವಿಚಾರ ಸಿದ್ದರಾಮಯ್ಯಗೆ ಗೊತ್ತಿರುತ್ತದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಟಿ ಅಮೂಲ್ಯ ಪತಿ ಜಗದೀಶ್‌ ಆರ್‌ ಚಂದ್ರಗೆ ಉತ್ತಮ ಹುದ್ದೆ ಕೊಟ್ಟ BJP ಪಕ್ಷ! ಏನದು?
ಇರಾನ್-ಇಸ್ರೇಲ್‌ ಯುದ್ಧ: ಭಾರತಕ್ಕೆ ರಫ್ತು, ಆಮದು ಆಗುವ ವಸ್ತುಗಳೇನು? ನಮ್ಮಲ್ಲಿ ಬೆಲೆ ಏರಿಕೆ ಆಗುತ್ತಾ?