Karnataka politics: 'ಬಿಜೆಪಿ ಲೀಡರ್‌ಲೆಸ್‌ ಪಾರ್ಟಿ' - ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ವ್ಯಂಗ್ಯ

By Ravi JanekalFirst Published Sep 3, 2023, 6:00 PM IST
Highlights

‘ಬಿಜೆಪಿಯ ಮಾಜಿ ಶಾಸಕರು ಹಾಗೂ ಕಾರ್ಯಕರ್ತರಲ್ಲಿ ಕ್ಷೋಭೆ ಉಂಟಾಗಿದ್ದು, ಕಾಂಗ್ರೆಸ್‌ ಬರಬೇಕು ಎಂದು ಬಹಳಷ್ಟು ಜನರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಯಾರನ್ನೂ ಸೆಳೆಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಗದಗ (ಸೆ.3): ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದ್ದು, ಭಾರತೀಯ ಜನತಾ ಪಕ್ಷ ಈಗ ಲೀಡರ್‌ಲೆಸ್‌ ಪಾರ್ಟಿ ಆಗಿದೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ವ್ಯಂಗ್ಯಮಾಡಿದರು.

‘ಸರ್ಕಾರ ರಚಿಸಿ ನೂರು ದಿನಗಳಾದರೂ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿಲ್ಲ. ಬಿಜೆಪಿ ಎಷ್ಟು ಶೋಚನೀಯ ಪರಿಸ್ಥಿತಿಯಲ್ಲಿದೆ ಎಂಬುದನ್ನು ಇದು ಸೂಚಿಸುತ್ತದೆ. ಚೀಟಿ ಎತ್ತುವ ಮೂಲಕವಾದರೂ ಬಿಜೆಪಿ ತಾತ್ಕಾಲಿಕ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿ. ರಾಜ್ಯ ಬಿಜೆಪಿ(BJP karnataka) ಕೆಲವರ ಕಪಿಮುಷ್ಠಿಯಲ್ಲಿದ್ದು, ಹೀಗಾಗಿ ಸುಧಾರಣೆ ಆಗಿಲ್ಲ’ ಎಂದು ಕಿಡಿಕಾರಿದರು.

‘ಬಿಜೆಪಿಯ ಮಾಜಿ ಶಾಸಕರು ಹಾಗೂ ಕಾರ್ಯಕರ್ತರಲ್ಲಿ ಕ್ಷೋಭೆ ಉಂಟಾಗಿದ್ದು, ಕಾಂಗ್ರೆಸ್‌ ಬರಬೇಕು ಎಂದು ಬಹಳಷ್ಟು ಜನರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಯಾರನ್ನೂ ಸೆಳೆಯುವ ಪ್ರಶ್ನೆಯೇ ಇಲ್ಲ. ಅವರಾಗಿಯೇ ಬರುತ್ತಿದ್ದಾರೆ. ಬಿಜೆಪಿಯಲ್ಲಿ ಮಿಸ್‌ ಮ್ಯಾನೇಜ್‌ಮೆಂಟ್‌ ಇದ್ದು, ರಾಮದುರ್ಗದಲ್ಲಿ ಹಣ ಇದ್ದ ವ್ಯಕ್ತಿಗೆ ಟಿಕೆಟ್‌ ಕೊಟ್ಟರು. ಬೈಂದೂರಿನಲ್ಲಿ ಸುಕುಮಾರ್‌ ಶೆಟ್ಟಿ ಅವರಿಗೆ ಟಿಕೆಟ್‌ ತಪ್ಪಿಸಿದರು’ ಎಂದು ಆರೋಪ ಮಾಡಿದರು.

ಬಿಎಲ್ ಸಂತೋಷ್ ಯೋಗ್ಯತೆಗೆ ಜನರು ಉತ್ತರ ಕೊಟ್ಟಿದ್ದಾರೆ: ಸಚಿವ ಎಚ್‌ಸಿ ಮಹದೇವಪ್ಪ

‘ಲೋಕಸಭಾ ಚುನಾವಣೆ(Loksabha election 2024)ಯಲ್ಲಿ ಪ್ರಹ್ಲಾದ್‌ ಜೋಶಿ(Pralhad joshi) ವಿರುದ್ಧ ಯಾರು ನಿಲ್ಲಬೇಕು ಎಂಬುದನ್ನು ಕಾಂಗ್ರೆಸ್‌ ಹೈ ಕಮಾಂಡ್‌ ನಿರ್ಧಾರ ಮಾಡಲಿದೆ’ ಎಂದು ತಿಳಿಸಿದರು.

‘ಲಿಂಗಾಯತರಿಗೆ ಅನ್ಯಾಯವಾಗಿದದೆ ಎಂಬ ಕೂಗಿಗೆ ಈಗ ಹೋರಾಟದ ರೂಪ ಸಿಗುತ್ತಿದೆ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಲಿಂಗಾಯತರನ್ನು ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಇದರ ನೇತೃತ್ವವನ್ನು ಧರ್ಮದ ಜಗದ್ಗುರುಗಳು ವಹಿಸಿದ್ದಾರೆ’ ಎಂದು ತಿಳಿಸಿದರು.

ಎಚ್‌ಡಿಕೆ ಡಿಸ್ಚಾರ್ಜ್; ಆಪತ್ತಿಗಾದ ಆಪ್ತ ಸಹಾಯಕನಿಗೆ ಧನ್ಯವಾದ ತಿಳಿಸಿದ ಕುಮಾರಣ್ಣ

‘ಒಂದು ದೇಶ ಒಂದು ಚುನಾವಣೆ’ ಪರಿಕಲ್ಪನೆ ಐದಾರು ವರ್ಷಗಳಿಂದ ಚರ್ಚೆಯಲ್ಲಿದೆ. ಆದರೆ, ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಯಾವ ಹಿನ್ನಲೆಯಲ್ಲಿ ಈಗ ಕಮಿಟಿ ರಚಿಸಿದ್ದಾರೆ ಎಂಬುದು ಗೊತ್ತಿಲ್ಲ. ನನ್ನ ರಾಜಕೀಯ ಅನುಭವದಲ್ಲಿ ಹೇಳುವುದಾದರೆ ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವುದು ಸಾಧ್ಯವಿಲ್ಲ’ ಎಂದು ಹೇಳಿದರು.

click me!