ದೇಶದ ಎಲ್ಲಾ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ, ಸೆ.7 ರಂದು ವರ್ಷಾಚರಣೆ ಆಚರಿಸಲು ಪ್ಲಾನ್

By Suvarna News  |  First Published Sep 3, 2023, 3:57 PM IST

ರಾಹುಲ್ ಗಾಂಧಿ ಆಯೋಜಿಸಿದ ಭಾರತ್ ಜೋಡೋ ಯಾತ್ರೆ ವರ್ಷಾಚರಣೆ ಮಾಡಲು ಕಾಂಗ್ರೆಸ್ ತುದಿಗಾಲಲ್ಲಿ ನಿಂತಿದೆ. ಸೆಪ್ಟೆಂಬರ್ 7 ರಂದು ಭಾರತ್ ಜೋಡೋ ಯಾತ್ರೆ ವರ್ಷಾಚರಣೆ ನಡೆಯಲಿದೆ. ಇದರ ಪ್ರಯುಕ್ತ ಕಾಂಗ್ರೆಸ್ ದೇಶದ ಎಲ್ಲಾ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ಆಯೋಜಿಸುತ್ತಿದೆ.


ನವದೆಹಲಿ(ಸೆ.03) ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಆಯೋಜಿಸಿದ ಭಾರತ್ ಜೋಡೋ ಯಾತ್ರೆ ವರ್ಷಾಚರಣೆ ಆಚರಿಸಲು ಕಾಂಗ್ರೆಸ್ ತಯಾರಿ ನಡೆಸಿದೆ.  2022ರ ಸೆಪ್ಟೆಂಬರ್ 7 ರಂದು ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದರು. ಇದೀಗ 2023ರ ಸೆಪ್ಟೆಂಬರ್ 7 ರಂದು ದೇಶದ ಎಲ್ಲಾ ಜಿಲ್ಲೆ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ಆಯೋಜಿಸಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ಭಾರತ್ ಜೋಡೋ ವರ್ಷಾಚರಣೆ ಪ್ರಯುಕ್ತ ಕಾಂಗ್ರೆಸ್ ವಿಶೇಷ ಯಾತ್ರೆ ಹಮ್ಮಿಕೊಂಡಿದೆ.  ಸೆಪ್ಟೆಂಬರ್ 7 ರಂದು ಸಂಜೆ 5 ಗಂಟೆಯಿಂದ 6 ಗಂಟೆ ವರೆಗೆ ಎಲ್ಲಾ ಜಿಲ್ಲೆಯಲ್ಲಿ ಭಾರತ್ ಜೋಡೋ ಯಾತ್ರೆ ನಡೆಯಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ 7 ರಂದು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಆರಂಭಿಸಿದ್ದರು. 130 ದಿನಗಳ ಅತೀ ದೊಡ್ಡ ಯಾತ್ರೆ 12 ರಾಜ್ಯಗಳಲ್ಲಿ ಹಾದು ಹೋಗಿತ್ತು. ಕನ್ಯಾಕುಮಾರಿಯಿಂದ ಆರಂಭಗೊಂಡು, ಕಾಶ್ಮೀರದಲ್ಲಿ ಅಂತ್ಯಗೊಂಡಿತ್ತು. ಜನವರಿ 30, 2023ರ ವರೆಗೆ ಈ ಯಾತ್ರೆ ನಡೆದಿತ್ತು. ಮೊದಲ ಆವೃತ್ತಿಯ ಭಾರತ್ ಜೋಡೋ ಯಾತ್ರೆ ವರ್ಷಾಚರಣೆ ಪ್ರಯುಕ್ತ ದೇಶದ ಎಲ್ಲಾ ಮೂಲೆ ಮೂಲೆಯಲ್ಲಿ ಯಾತ್ರೆ ಆಯೋಜಿಸಲಾಗಿದೆ.

Tap to resize

Latest Videos

ನನ್ನ, ರಾಹುಲ್‌ ಮಧ್ಯೆ ಯಾವುದೇ ಬಿರುಕು ಇಲ್ಲ: ಬಿಜೆಪಿಗೆ ಪ್ರಿಯಾಂಕಾ ತಿರುಗೇಟು

ಇನ್ನು ಎರಡನೇ ಆವೃತ್ತಿಯ ಭಾರತ್ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ಶೀಘ್ರದಲ್ಲೇ ಆರಂಭಿಸಲು ಪ್ಲಾನ್ ಮಾಡಿದೆ. ಈ ಯಾತ್ರೆ ಗುಜರಾತ್‌ನಿಂದ ಆರಂಭಗೊಳ್ಳಲಿದ್ದು, ಮೆಘಾಲಯ,  ಮಣಿಪುರ , ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ಸಂಚರಿಸಲಿದೆ.  ಇತ್ತೀಚೆಗೆ ರಾಹುಲ್ ಗಾಂಧಿ 9 ದಿನದ ಲಡಾಖ್ ಪ್ರವಾಸ ಮಾಡಿದ್ದರು. 

ಇನ್ನು  ಇದೇ ತಿಂಗಳ ಆರಂಭಿಕ ವಾರದಲ್ಲೇ ರಾಹುಲ್ ಗಾಂಧಿ  ಭಾರತ ಜಿ20 ಒಕ್ಕೂಟದ ಮಹತ್ವದ ಶೃಂಗಸಭೆ ಆಯೋಜಿಸುತ್ತಿರುವ ಹೊತ್ತಿನಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಯುರೋಪ್‌ ಪ್ರವಾಸ ಆಯೋಜಿಸಿದ್ದಾರೆ. ಸೆ.9 ಮತ್ತು 10 ರಂದು ದೆಹಲಿಯಲ್ಲಿ ಜಿ20 ಶೃಂಗ ಸಭೆ ನಡೆಯಲಿರುವ ಸಮಯದಲ್ಲೇ ರಾಹುಲ್‌ ಈ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನಕ್ಷೆ ಕಾನೂನುಬದ್ಧ: ಚೀನಾ ಮೊಂಡು ವಾದ: ಮೋದಿ ಮೌನ ಮುರಿಯಲಿ ಎಂದ ರಾಹುಲ್‌

ತಮ್ಮ ಪ್ರವಾಸದಲ್ಲಿ ರಾಹುಲ್‌, ಸೆ.7ರಂದು ಬ್ರಸೆಲ್ಸ್‌ನಲ್ಲಿ ಯೂರೋಪ್‌ ಒಕ್ಕೂಟದ ಪ್ರತಿನಿಧಿಗಳ ಜೊತೆ ಸಂವಾದ ನಡೆಸಲಿದ್ದಾರೆ, ಸೆ.8ರಂದು ಪ್ಯಾರಿಸ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿ ಉಪನ್ಯಾಸ ನೀಡಲಿದ್ದಾರೆ. ಸೆ.9ರಂದು ಪ್ಯಾರಿಸ್‌ನಲ್ಲಿ ‘ಲೇಬರ್‌ ಯೂನಿಯನ್‌ ಆಫ್‌ ಫ್ರಾನ್ಸ್‌’ ಜತೆಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸೆ.10 ರಂದು ಓಸ್ಲೋದಲ್ಲಿನ ಸಮಾರಂಭದಲ್ಲಿ ಭಾಗವಹಿಸಿ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.

click me!