ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಮರ್ಥ ಆಡಳಿತ ನಡೆಸಲು ವಿಫಲ: ಕೋಟ ಶ್ರೀನಿವಾಸ ಪೂಜಾರಿ

By Kannadaprabha News  |  First Published Nov 10, 2023, 9:03 PM IST

ರಾಜ್ಯದಲ್ಲಿ 39 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಬರದಿಂದಾಗಿ ಒಣಗಿದೆ. ಇದರಿಂದಾಗಿ 33 ಸಾವಿರ ಕೋಟಿ ನಷ್ಟವಾಗಿದ್ದು, ಬಿಜೆಪಿ ಬರ ಅಧ್ಯಯನ ಆರಂಭಿಸಿದ ಬಳಿಕ ಜನರ ಕಣ್ಣಿಗೆ ಮಂಕು ಬಳಿಯಲು ಕೇವಲ 324 ಕೋಟಿ ಹಣ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿದರು. 


ಕುಂದಾಣ (ನ.10): ರಾಜ್ಯದಲ್ಲಿ 39 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಬರದಿಂದಾಗಿ ಒಣಗಿದೆ. ಇದರಿಂದಾಗಿ 33 ಸಾವಿರ ಕೋಟಿ ನಷ್ಟವಾಗಿದ್ದು, ಬಿಜೆಪಿ ಬರ ಅಧ್ಯಯನ ಆರಂಭಿಸಿದ ಬಳಿಕ ಜನರ ಕಣ್ಣಿಗೆ ಮಂಕು ಬಳಿಯಲು ಕೇವಲ 324 ಕೋಟಿ ಹಣ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ಮಾಜಿ ಸಚಿವ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಆರೋಪಿದರು. ಹೋಬಳಿಯ ಕೊಯಿರ, ಶ್ಯಾನಪ್ಪನಹಳ್ಳಿ ಹೊಸಹಳ್ಳಿ ಭಾಗದ ರೈತರನ್ನು ಭೇಟಿ ಮಾಡಿ ಬರದಿಂದಾಗಿರುವ ನಷ್ಟವನ್ನು ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವಿರಾರು ಎಕರೆ ಜೋಳ ಬೆಳೆದಿದ್ದ ರೈತನ ಕೈಯಲ್ಲಿ ಒಂದು ತೆನೆ ಫಸಲಿಲ್ಲ. 

ರಾಗಿ ಬೆಳೆದವರು ಸಂಪೂರ್ಣವಾಗಿ ಬತ್ತಿಹೋಗಿದ್ದಾರೆ. ಕಡಲೆ ಹಾಕಿದವರು ಭೂಮಿಯಲ್ಲಿ ಇಂಗಿ ಹೋಗಿದ್ದಾರೆ. ಇಂತಹ ಧಾರುಣ ಪರಿಸ್ಥಿತಿಯಲ್ಲಿ ರೈತರ ಬಳಿ ರಾಜ್ಯ ಸರ್ಕಾರ ಧಾವಿಸಿ ಬರಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಭವಿ ರಾಜಕಾರಣಿ ಎನ್ನುತ್ತಾರೆ, ಬಿಜೆಪಿ ಬರ ಅಧ್ಯಯನ ಕೈಗೊಳ್ಳುವ ಮುನ್ನವೇ ರಾಜ್ಯ ಸರ್ಕಾರ ಬರ ಪರಿಹಾರ ಘೋಷಿಸುತ್ತದೆ ಎಂದು ಭಾವಿಸಿದ್ದೆವು. ಆದರೆ ಕಾಂಗ್ರೆಸ್ ಸರ್ಕಾರ ಬರದಲ್ಲಿ ಪರಿತಪಿಸುತ್ತಿರುವ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಮರ್ಥ ಆಡಳಿತ ನಡೆಸಲು ವಿಫಲವಾಗಿದೆ. 

Latest Videos

undefined

ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು

ಈ ಹಿಂದೆ ಯಡಿಯೂರಪ್ಪನವರ ಅವಧಿಯಲ್ಲಿ ಪ್ರವಾಹದಿಂದ ಮನೆ ಹಾನಿಯ ಪರಿಹಾರವಾಗಿ 5 ಲಕ್ಷ ದುರಸ್ತಿದಾಗಿ ಹಣ ಬಿಡುಗಡೆ ಮಾಡಿದ್ದರು. ಆಗ ಕೇಂದ್ರದ ಕಡೆ ಬೆಟ್ಟು ಮಾಡಿ ತೋರಿಸಿರಲಿಲ್ಲ. ಅಪಾರ ಪ್ರಮಾಣದಲ್ಲಿ ಜಮೀನು ಮಳೆಯಿಲ್ಲದೇ ರೈತರು ನಲುಗಿದರೂ 1 ರುಪಾಯಿ ಪರಿಹಾರ ನೀಡಿಲ್ಲ. ಜಿಲ್ಲಾಡಳಿತದೊಂದಿಗೆ ಮಾತನಾಡಿದಾಗ ಅಲ್ಪ ಪ್ರಮಾಣದಲ್ಲಿ ಹಣ ನೀಡಿದ್ದರೂ, ಅದರ ಬಳಕೆಗೆ ಮುಕ್ತ ಹಸ್ತವನ್ನು ರಾಜ್ಯ ಸರ್ಕಾರ ನೀಡಿಲ್ಲ ಎಂದು ಜಿಲ್ಲಾಡಳಿತಕ್ಕೆ ನೀಡಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಜನರಿಗೆ ಆಹಾರ ವ್ಯವಸ್ಥೆ ಜಾನುವಾರುಗಳಿಗೆ ಗೋಶಾಲೆ ನಿರ್ಮಾಣ ಮಾಡುವ ಮನಸ್ಥಿತಿ ಸರ್ಕಾರಕ್ಕಿಲ್ಲ. ಇಂತಹ ಧಾರುಣ ಸ್ಥಿತಿಯಲ್ಲಿ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರು ತೆಲಂಗಾಣ ರಾಜ್ಯದ ಚುನಾವಣಾ ಪ್ರಚಾರದಲ್ಲಿದ್ದಾರೆ. ಅವರಿಗೆ ಇಲ್ಲಿನ ರೈತರು ಬೇಕಾಗಿಲ್ಲ. ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯಲ್ಲಿ ಕಾಂಗ್ರೆಸ್‌ಗೆ ನಂಬಿಕೆ ಇಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಯಾರೊಬ್ಬರು ರೈತರ ಮನೆ ಬಾಗಿಲಿಗೆ ಹೋಗಿಲ್ಲ. ಇವರು ಬರವನ್ನು ನಿರ್ವಹಣೆ ಮಾಡುವ ರೀತಿ ಇದಾಗಿದೆ. ಇಷ್ಟೊಂದು ಬೇಜವಾಬ್ದಾರಿಯಿಂದ ಸರ್ಕಾರ ನಡೆಸುವ ಬದಲು ಸರ್ಕಾರ ವಿಸರ್ಜನೆ ಮಾಡುವುದು ಉತ್ತಮ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿ?ತ್ ಸದಸ್ಯ ಅ.ದೇವೇಗೌಡ, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಎವಿಎನ್ ನಾರಾಯಣಸ್ವಾಮಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎಂ.ರವಿ ಕುಮಾರ್, ಹಿರಿಯ ಮುಖಂಡ ನಾರಾಯಣ ಗೌಡ, ತಾಲೂಕು ಅಧ್ಯಕ್ಷ ಸುನೀಲ್, ಜಿಲ್ಲಾ ಅಸಂಘಟಿತ ಕಾರ್ಮಿಕ ಪ್ರಕೋಷ್ಟ ಅಧ್ಯಕ್ಷ ನೀಲೇರಿ ಅಂಬರೀಶ್ ಗೌಡ, ಬೆಂಗಳೂರು ಉತ್ತರ ತಾಲೂಕು ಅಧ್ಯಕ್ಷ ಕಡತನಮಲೆ ಸತೀಶ್, ಕಾಳಿ ಮುನಿರಾಜು, ಲೋಕೇಶ್ ಗೌಡ, ಕಾಳಿ ಮುನಿರಾಜು ಸೇರಿದಂತೆ ಇತರರಿದ್ದರು.

ಬರವನ್ನು ಪಕ್ಷಾತೀತವಾಗಿ ಎದುರಿಸಬೇಕು: ರಾಜ್ಯದಲ್ಲಿ ತೀವ್ರವಾಗಿ ಭೀಕರ ಬರದ ಸಮಯದಲ್ಲಿ 33 ಸಾವಿರ ಕೋಟಿ ನಷ್ಟವಾಗಿದ್ದರೆ ರಾಜ್ಯ ಸರ್ಕಾರ 10 ಸಾವಿರ ಕೋಟಿ ಪರಿಹಾರ ಘೋಷಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು. ಪಕ್ಷಾತೀತವಾಗಿ ಬರದ ಪರಿಸ್ಥಿತಿ ಎದುರಿಸಲು ಕೇಂದ್ರದಲ್ಲಿ ಪ್ರಧಾನಿ ಭೇಟಿಗೆ ಸರ್ವ ಪಕ್ಷಗಳ ನಿಯೋಗ ಕರೆದುಕೊಂಡು ಹೋಗುತ್ತಾರೆ ಎಂದರೆ, ಕರ್ನಾಟಕದಲ್ಲಿಯೇ ಕುಳಿತ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೇಂದ್ರ ಬರ ಪರಿಹಾರ ನೀಡುತ್ತಿಲ್ಲ ಎಂದು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.

ಕಾಂಗ್ರೆಸ್ ವಿರುದ್ಧ ತೆಲಂಗಾಣದಲ್ಲಿ ಪ್ರಚಾರ: ಕೋಡಿಹಳ್ಳಿ ಚಂದ್ರಶೇಖರ್

ಕೃಷಿಗೆ 3 ಗಂಟೆ ವಿದ್ಯುತ್‌ ನೀಡಿ: ಭೀಕರ ಬರದಿಂದ ನಲುಗಿರುವ ರೈತರು ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ಮೇಲೆ 2 ಲಕ್ಷ ಠೇವಣಿ ಹಣ ಇಡಬೇಕು ಎಂದು ಸರ್ಕಾರ ಆದೇಶ ಮಾಡಿದೆ. ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯರವರು ರೈತರಿಗೆ 7 ಗಂಟೆ ವಿದ್ಯುತ್ ನೀಡುತ್ತೇವೆ ಎಂದಿದ್ದರು, ನಿಮ್ಮ ಕೈಯಲ್ಲಾದರೆ ಸರಿಯಾಗಿ 3 ಗಂಟೆ ವಿದ್ಯುತ್ ಕೃಷಿಗಾಗಿ ನೀಡಿ, ಸರ್ಕಾರದ ಅಸ್ತಿತ್ವದ ಕುರಿತು ಜನರಲ್ಲಿ ಗೊಂದಲ ಉಂಟಾಗಿದೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.

click me!