ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ವಿಜಯೇಂದ್ರ ಮೊದಲ ಘೋಷಣೆ, ಶುಕ್ರವಾರ ವಿಪಕ್ಷ ನಾಯಕನ ಆಯ್ಕೆ!

By Suvarna News  |  First Published Nov 10, 2023, 8:19 PM IST

ಬಿಜೆಪಿ ಹೈಕಮಾಂಡ್ ಕರ್ನಾಟಕದ ನೂತನ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆ ಮಾಡಿದೆ. ಇದರ ಬೆನ್ನಲ್ಲೇ ವಿಜಯೇಂದ್ರ ಮೊದಲ ಘೋಷಣೆ ಮಾಡಿದ್ದಾರೆ. ಮುಂದಿನ ಶುಕ್ರವಾರ ವಿಪಕ್ಷ ನಾಯಕ ಆಯ್ಕೆ ನಡೆಯಲಿದೆ ಎಂದಿದ್ದಾರೆ.


ಬೆಂಗಳೂರು(ನ.10) ಕಳೆದ ಹಲವು ತಿಂಗಳಿನಿಂದ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಖಾಲಿಯಾಗಿತ್ತು. ವಿಧಾನಸಭಾ ಚುನಾವಣೆ ಬಳಿಕ ಖಾಲಿಯಾಗಿದ್ದ ಸ್ಥಾನಕ್ಕೆ ಆಯ್ಕೆ ಕಗ್ಗಂಟ್ಟಾಗಿತ್ತು. ಹಲವು ಸುತ್ತಿನ ಮಾತುಕತೆ, ಚರ್ಚೆ ನಡುವೆಯೂ ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬವಾಗಿತ್ತು. ಅಳೆದು ತೂಗಿ ಬಿಜೆಪಿ ಹೈಕಮಾಂಡ್, ಬಿಎಸ್ ಯಡಿಯೂರಪ್ಪ ಪುತ್ರ, ಶಾಸಕ ಬಿವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ನೀಡಿದೆ. ನೂತನ ಜವಾಬ್ದಾರಿ ವಹಿಸಿಕೊಂಡ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಬಿವೈ ವಿಜಯೇಂದ್ರ, ಮುಂದಿನ ಶುಕ್ರವಾರ ವಿಪಕ್ಷ ನಾಯಕನ ಆಯ್ಕೆ ನಡೆಯಲಿದೆ ಎಂದು ಘೋಷಿಸಿದ್ದಾರೆ.

ಮುಂದಿನ ಶುಕ್ರವಾರ(ನವೆಂಬರ್ 17)  ಕೇಂದ್ರದಿಂದ ವೀಕ್ಷರು ರಾಜ್ಯಕ್ಕೆ ಆಗಮಿಸುತ್ತಾರೆ. ಇದೇ ದಿನ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎಲ್ಲಾ ನಾಯಕರು, ಹಿರಿಯರ ಅಭಿಪ್ರಾಯ ಸಂಗ್ರಹಿಸಿ ವಿಪಕ್ಷ ನಾಯಕನ ಆಯ್ಕೆ ಅಂತಿಮಗೊಳಿಸಲಾಗುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ. ವಿಪಕ್ಷ ನಾಯಕನಿಲ್ಲದೆ ಬಿಜೆಪಿ ತೀವ್ರ ಮುಜುಗರ ಅನುಭವಿಸಿತ್ತು. ಇದೀಗ ಈ ಮುಖಭಂಗದಿಂದ ಹೊರಬರಲು ಶುಕ್ರವಾರಕ್ಕೆ ಡೇಟ್ ಫಿಕ್ಸ್ ಮಾಡಿದೆ.

Tap to resize

Latest Videos

Breaking: ಬಿಎಸ್‌ವೈ ಪುತ್ರನಿಗೆ ದೀಪಾವಳಿ ಗಿಫ್ಟ್‌, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ನೇಮಕ!

ಸದನದಲ್ಲಿ ವಿಪಕ್ಷ ನಾಯಕನಿಲ್ಲದ ಬಿಜೆಪಿ ಮೇಲೆ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದರು. ಇನ್ನು ಚುನಾವಣೆ ಫಲಿತಾಂಶದ ಬಳಿಕ ಇಲ್ಲೀವರೆಗೂ ಬಿಜೆಪಿ ನಾಯಕರನ್ನು ವಿಪಕ್ಷ ನಾಯಕನಿಲ್ಲದ ಹಡಗು ಎಂದು ತಿವಿದಿದ್ದರು. ಇತ್ತ ಬಿಜೆಪಿ ಹಿರಿಯ ನಾಯಕರು ವಿಪಕ್ಷ ನಾಯಕನ ವಿಳಂಬದಿಂದ ಮುಜುಗರ ಅನುಭವಿಸಿರುವುದನ್ನೂ ಒಪ್ಪಿಕೊಂಡಿದ್ದರು. ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಮಹತ್ವದ ಘೋಷಣೆ ಮಾಡುವ ಮೂಲಕ ವಿಪಕ್ಷ ನಾಯಕನ ಕಾಯುವಿಕೆಗೆ ಅಂತ್ಯಹಾಡಿದ್ದಾರೆ. 

ಬಿವಿ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ಎದುರಾಗಿದೆ. ಕಾರಣ ಈ ಹಿಂದಿನ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ರನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸದೇ ಕಡೆಗಣಿಸಿತ್ತು. ಕಟೀಲ್ ಪಾಲಿಟಿಕಲ್ ಜೋಕರ್ ಎಂದು ಕಾಂಗ್ರೆಸ್ ಬಿಂಬಿಸಿತ್ತು. ಈ ಮೂಲಕ ಬಿಜೆಪಿ ದೌರ್ಬಲ್ಯವನ್ನು ಕಾಂಗ್ರೆಸ್ ಲಾಭವಾಗಿ ಪರಿವರ್ತಿಸಿತ್ತು. ಆದರೆ ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಕಾಂಗ್ರೆಸ್‌ಗೆ ಲಘುವಾಗಿ ಪರಿಗಣಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

DVS ಮುಂದಿನ ನಡೆ ಏನು..? ಪಕ್ಷಕ್ಕಾಗಿ ದುಡಿಯುತ್ತಾರಾ? ಮುನಿಸಿಕೊಳ್ತಾರಾ?

ಪ್ರಬಲ ಸಮುದಾಯದ ಯಡಿಯೂರಪ್ಪ ಬೆನ್ನಿಗೆ ಇರುವುದರಿಂದ ಕಾಂಗ್ರೆಸ್ ಗೆ ಪೈಪೋಟಿ ಎದುರಿಸುವುದು ಸಹಜವಾಗಿದೆ. ಇನ್ನು ಬಿಎಸ್ ಯಡಿಯೂರಪ್ಪ,  ಜಗದೀಶ್ ಶೆಟ್ಟರ್, ಲಕ್ಷ್ಣಣ್ ಸವದಿ ಸೇರಿದಂತೆ ಕೆಲ ಲಿಂಗಾಯಿತ ನಾಯಕರ ಕಡೆಗಣಿಸಲಾಗಿದೆ ಅನ್ನೋ ಆರೋಪವನ್ನು ಕಾಂಗ್ರೆಸ್ ಹಬ್ಬಿಸಿ ಯಶಸ್ವಿಯಾಗಿತ್ತು. ಇದೀಗ ಬಿಎಸ್‌ವೈ ಪುತ್ರ ವಿಜಯೇಂದ್ರಗೆ ಅಧ್ಯಕ್ಷ ಪಟ್ಟ ನೀಡುವ ಮೂಲಕ ಮತ್ತೆ ಲಿಂಗಾಯಿತ ಮತಗಳನ್ನು ಬಿಜೆಪಿ ಕ್ರೋಢೀಕರಿಸಿದೆ. ಪ್ರಬಲ ಸಮುದಾಯದ ಯಡಿಯೂರಪ್ಪ ಬೆನ್ನಿಗೆ ಇರುವುದರಿಂದ ಕಾಂಗ್ರೆಸ್ ಪೈಪೋಟಿ ಎದುರಿಸುವುದು ಸಹಜ. 

ಇತ್ತ ಕಾಂಗ್ರೆಸ್ ಲಿಂಗಾಯಿತರನ್ನು ಕಡೆಗಣಿಸುತ್ತಿದೆ ಅನ್ನೋ ಆರೋಪವನ್ನು ಇದೀಗ ಬಿಜೆಪಿ ಪ್ರಬಲವಾಗಿ ಎತ್ತಿಕೊಳ್ಳಲಿದೆ. ಹೀಗಾಗಿ ಕಾಂಗ್ರೆಸ್ ಇದುವರೆಗಿನ ಸ್ಟ್ರಾಟರ್ಜಿಯನ್ನು ಸಂಪೂರ್ಣವಾಗಿ ಬದಲಿಸಬೇಕಿದೆ. 
 

click me!