ಕಾಫಿನಾಡು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಾಇದೆ. ಇದರ ನಡುವೆ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷವನ್ನು ಸೇರ್ಪೆಡೆಗೊಂಡಿರುವ ಕೈ ಟಿಕೆಟ್ ಆಕ್ಷಾಂಕಿ ಹೆಚ್.ಡಿ.ತಮ್ಮಯ್ಯ ವರ್ಸಸ್ ಬಿಜೆಪಿ ನಾಯಕರ ವಾಕ್ ಸಮರವೂ ಜೋರಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.12): ಕಾಫಿನಾಡು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಾಇದೆ. ಇದರ ನಡುವೆ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷವನ್ನು ಸೇರ್ಪೆಡೆಗೊಂಡಿರುವ ಕೈ ಟಿಕೆಟ್ ಆಕ್ಷಾಂಕಿ ಹೆಚ್.ಡಿ.ತಮ್ಮಯ್ಯ ವರ್ಸಸ್ ಬಿಜೆಪಿ ನಾಯಕರ ವಾಕ್ ಸಮರವೂ ಜೋರಾಗಿದೆ. ಬಿಜೆಪಿ ವರ್ಸಸ್ ಕೈ ಟಿಕೆಟ್ ಆಕ್ಷಾಂಕಿ ತಮ್ಮಯ್ಯ ನಡುವೆ ವಾಕ್ ಸಮರ ನಡೆಯುತ್ತಿದ್ದು ಇದರ ಮುಂದುವರಿದ ಭಾಗವಾಗಿ ಇಂದು ಜಿಲ್ಲಾ ಬಿಜೆಪಿ ವಕ್ತಾರ ಚಿಕ್ಕದೇವನೂರು ರವಿ ಹೆಚ್.ಡಿ.ತಮ್ಮಯ್ಯ ವಿರುದ್ದ ವಾಗ್ದಳಿ ಮುಂದುವರಿಸಿದ್ದಾರೆ.
undefined
ಕಾಂಗ್ರೆಸ್ ಪಕ್ಷದ ನಾಯಕರನ್ನು ಮೆಚ್ಚಿಸುವ ಸಲುವಾಗಿ ತಮ್ಮಯ್ಯ ಟೀಕೆ: ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಅವರ ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದೆ ಭ್ರಷ್ಟಾಚಾರ ಆರೋಪ ಮಾಡಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಚಿಕ್ಕದೇವನೂರು ರವಿ ತಿಳಿಸಿದರು. ಕಾಂಗ್ರೆಸ್ ಪಕ್ಷದ ನಾಯಕರನ್ನು ಮೆಚ್ಚಿಸುವ ಸಲುವಾಗಿ ಆ ಪಕ್ಷದ ಟಿಕೆಟ್ ಆಕಾಂಕ್ಷಿ ಎಚ್.ಡಿ.ತಮ್ಮಯ್ಯನವರು ಶಾಸಕರ ವಿರುದ್ಧ ಮಾತನಾಡುತ್ತಿದ್ದಾರೆ. ಕೈ ಟಿಕೆಟ್ ತಪ್ಪುವ ಹತಾಷೆಯಿಂದ ಆರೋಪ ಮಾಡಲಾಗುತ್ತಿದೆ ಎಂದರು. ಶಾಸಕರು ಈ ಚುನಾವಣೆಯಲ್ಲಿ ಅಧಿಕ ಮತಗಳಿಂದ 5ನೇ ಬಾರಿಗೆ ಶಾಸಕರಾಗಲಿದ್ದಾರೆ. 15 ವರ್ಷದ ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದ ತಮ್ಮಯ್ಯನವರು ಯಾವ ರೀತಿ ಅಭಿವೃದ್ಧಿ ಕೆಲಸ ನಿರ್ವಹಿಸಿದ್ದಾರೆಂಬುದು ಜನರಿಗೆ ತಿಳಿದಿರುವ ವಿಷಯವೆಂದರು.
ಪ್ರವಾಸಿ ರೀತಿಯ ಹೊರಗಿನ ಅಭ್ಯರ್ಥಿಗಳಿಗೆ ಕೊಡಗಿನ ಜನ ಬೆಂಬಲಿಸಲ್ಲ: ಮಂತರ್ ವಿರುದ್ಧ ಶಾಸಕ ಅಪ್ಪಚ್ಚು ರಂಜನ್ ವ್ಯಂಗ್ಯ
ತಮ್ಮಯ್ಯನವರಿಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ಕೊಟ್ಟಿರರಿಲ್ಲ: ಕಾಂಗ್ರೆಸ್ ಪಕ್ಷವನ್ನು ಸೇರಿ ತಿಂಗಳಾಗಿದೆ. ಆದರೆ ಪಕ್ಷದಲ್ಲಿ ಕೆಲವರು ಬಿಜೆಪಿ ಏಜೆಂಟರಾಗಿ ಕೆಲಸ ನಿರ್ವಹಿಸುತ್ತಿದ್ದಾರೆಂದು ಹೇಳಿಕೆ ನೀಡಿದ್ದಾರೆ. ತಮ್ಮಯ್ಯನವರಿಗೆ ನೈತಿಕತೆ ಇದ್ದಿದ್ದರೆ ಅಂತಹ ನಾಯಕರುಗಳ ಹೆಸರನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು. ಎರಡು ವರ್ಷಗಳಿಂದ ತಮ್ಮಯ್ಯನವರಿಗೆ ಬಿಜೆಪಿಯ ಜಿಲ್ಲಾ ಕಮಿಟಿಯಲ್ಲಿ ಯಾವುದೇ ಸ್ಥಾನಮಾನ ಕೊಟ್ಟಿರುವುದಿಲ್ಲ. ಇವರು ಕಾಲಕಾಲಕ್ಕೆ ಪಕ್ಷವನ್ನು ಬದಲಿಸುವ ಪ್ರವೃತ್ತಿ ಉಳ್ಳವರು ಎಂಬ ಕಲ್ಪನೆ ಪಕ್ಷದಲ್ಲಿತ್ತು. ಹಾಗಾಗಿ ಯಾವುದೇ ಹುದ್ದೆಯನ್ನು ಕೊಟ್ಟಿರಲಿಲ್ಲವೆಂದು ತಿಳಿಸಿದರು.
ಬಿಜೆಪಿ ಟಿಕೆಟ್ ಮಿಸ್ ಆಗಲು ಬಿಎಸ್‌ವೈ, ವಿಜಯೇಂದ್ರ ಕಾರಣ: ಗೂಳಿಹಟ್ಟಿ ಶೇಖರ್
ಮತ್ತೋರ್ವ ಜಿಲ್ಲಾ ವಕ್ತಾರ ಟಿ.ರಾಜಶೇಖರ್ ಮಾತನಾಡಿ, ಶಾಸಕರ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದು, ದಾಖಲೆಗಳಿದ್ದರೆ ಬಿಡುಗಡೆಗೊಳಿಸಲು ಮುಂದಾಗಬೇಕೆಂದು ಒತ್ತಾಯಿಸಿ, ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸುವುದು ಒಳಿತ್ತೆಂದರು. ಮಧು, ಕೋಟೆ ದಿನೇಶ್ ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.