ಸಂಪರ್ಕ ಕೊರತೆಯಿಂದಾಗಿ ರಘುಪತಿ ಭಟ್ಟರಿಗೆ ವಿಷಯ ತಿಳಿಸಲು ಸಾಧ್ಯವಾಗಿಲ್ಲ: ಕೋಟ ಶ್ರೀನಿವಾಸ ಪೂಜಾರಿ

By Govindaraj S  |  First Published Apr 12, 2023, 9:01 PM IST

ಜಿಲ್ಲೆಯಲ್ಲಿ ರಘುಪತಿ ಭಟ್‌ರಂತಹ  ಶ್ರೇಷ್ಠ ಕಾರ್ಯಕರ್ತನನ್ನು ಹುಡುಕುವುದು ಕಷ್ಟ. ಪಾರ್ಟಿಗೆ ಸಂಘಟನಾತ್ಮಕ ರಘುಪತಿ ಭಟ್ಟರ ಶ್ರಮ ಅಪಾರವಾದುದು. ಅದಕ್ಕೆ ಗೌರವವಿದೆ. ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.


ಉಡುಪಿ (ಏ.12): ಜಿಲ್ಲೆಯಲ್ಲಿ ರಘುಪತಿ ಭಟ್‌ರಂತಹ  ಶ್ರೇಷ್ಠ ಕಾರ್ಯಕರ್ತನನ್ನು ಹುಡುಕುವುದು ಕಷ್ಟ. ಪಾರ್ಟಿಗೆ ಸಂಘಟನಾತ್ಮಕ ರಘುಪತಿ ಭಟ್ಟರ ಶ್ರಮ ಅಪಾರವಾದುದು. ಅದಕ್ಕೆ ಗೌರವವಿದೆ. ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಸಂಪರ್ಕದ ಕೊರತೆಯಿಂದಾಗಿ ಪಕ್ಷದ ನಾಯಕರಿಗೆ ವಿಷಯ ತಿಳಿಸಲು ಸಾಧ್ಯವಾಗಿರದೇ ಇರಬಹುದು ಅದನ್ನು ಸರಿಪಡಿಸುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಅವರು ಬುಧವಾರ ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ, ಟಿಕೆಟ್ ವಂಚಿತ ರಘುಪತಿ ಭಟ್ ಅವರು, ಜಿಲ್ಲೆಯ ಹೊಂದಾಣಿಕೆಯ ವ್ಯವಸ್ಥೆಯಲ್ಲಿ ಅಲ್ಲೋ, ಇಲ್ಲೋ ಲೋಪವಾದ ಹಿನ್ನಲೆಯಲ್ಲಿ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ಇದೆ. 

ಮುಂದಿನ ದಿನಗಳಲ್ಲಿ ಪಾರ್ಟಿಯ ಚೌಕಟ್ಟಿನಲ್ಲಿ ಅವರನ್ನು ಸಕ್ರಿಯ ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು. ರಾಜಕಾರಣದಲ್ಲಿ ಇದೊಂದು ಕ್ರಾಂತಿಕಾರಿ ನಿರ್ಧಾರವಾಗಿದೆ. ಸುಳ್ಯದಲ್ಲಿ ಸಮಾಜದ ಕೊನೆಯ ಬಡವರ ನಡುವೆ ಬಡಿದಾಡುವ ಮಹಿಳೆ ಭಾಗೀರಥಿ ಮುಳೇರಿಯಾ ಅವರಿಗೆ ಟಿಕೆಟ್ ನೀಡಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಮುನಿರಾಜು ಎಂಬ 28 ವರ್ಷದ ಯುವಕನಿಗೆ ಅವಕಾಶ ಕಲ್ಪಿಸಲಾಗಿದೆ. ಯುವಮೋರ್ಚಾದ 6 ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದೇವೆ ಎಂದರು. ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 52 ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದೆ. 

Latest Videos

undefined

ಬಿಜೆಪಿ ಟಿಕೆಟ್ ಮಿಸ್ ಆಗಲು ಬಿಎಸ್‌ವೈ, ವಿಜಯೇಂದ್ರ ಕಾರಣ: ಗೂಳಿಹಟ್ಟಿ ಶೇಖರ್‌

32 ಜನ ಹಿಂದುಳಿದ ವರ್ಗದವರಿಗೆ ಪ್ರಥಮ ಪಟ್ಟಿಯಲ್ಲಿ ಅವಕಾಶ ಮಾಡಿಕೊಡಲಾಗಿದ್ದು 30 ಪ.ಜಾತಿ, 16 ಪ.ಪಂ, 8 ಮಹಿಳೆಯವರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಪಟ್ಟಿಯನ್ನು ಗಮನಿಸಿದರೇ ಬಿಜೆಪಿ ನಿಶ್ಚಿತವಾಗಿ ಬಹುಮತ ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಲಕ್ಷಣ ಸವದಿಯವರನ್ನು ಕರೆದು ಸಿಎಂ ಮಾತನಾಡುತ್ತಾರೆ. ಅವರ ಸಮಸ್ಯೆ ಬಗೆಹರಿಯುತ್ತದೆ. ಈಶ್ವರಪ್ಪ ಮತ್ತು ಹಾಲಾಡಿಯವರು ಸ್ವ ಇಚ್ಚೆಯಿಂದ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರ ನಿರ್ಧಾರವು ಇಡೀ ರಾಜ್ಯ ರಾಜಕಾರಣಕ್ಕೆ ಒಂದು ಮಾದರಿಯಾಗಿದೆ ಎಂದರು.  

ನನ್ನನ್ನು ಸಿಎಂ ಮಾಡಲು ಅಧಿಕ ಮತದಿಂದ ಗೆಲ್ಲಿಸಿ: ಸಚಿವ ಮುರುಗೇಶ್‌ ನಿರಾಣಿ

ಡಿ.ಕೆ.ಶಿವಕುಮಾರ್ ಅವರನ್ನು ಎದುರಿಸಲು ಅಶೋಕ್ ಸಮರ್ಥ ಎಂದು ಪಾರ್ಟಿಗೆ ಮನವರಿಕೆಯಾದ ಹಿನ್ನಲೆಯಲ್ಲಿ ಅವರನ್ನು ಕಣಕ್ಕಿಳಿಸಲಾಗಿದೆ.ವಿ.ಸೋಮಣ್ಣ ಅವರು ಹಿರಿಯ, ಪ್ರಭಾವಿ ನಾಯಕ, ಅವರು ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ದ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಇವರಿಗೆ ನೀಡಿದ ಎರಡು ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!