ತಾಕತ್ತಿದ್ದರೆ ಬಿಜೆಪಿ-ಜೆಡಿಎಸ್‌ನವರು ಎನ್‌ಸಿಆರ್‌ಬಿ ವರದಿ ಬಿಡುಗಡೆಗೊಳಿಸಿ: ಸಚಿವ ಸಂತೋಷ್ ಲಾಡ್

By Kannadaprabha News  |  First Published Aug 7, 2024, 4:45 PM IST

ಕಾಂಗ್ರೆಸ್ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ-ಜೆಡಿಎಸ್‌ನವರು ಮೊದಲು ಎನ್‌ಸಿಆರ್‌ಪಿ ರಿಪೋರ್ಟ್‌ನ್ನು ಬಿಡುಗಡೆಗೊಳಿಸಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸವಾಲು ಹಾಕಿದರು. 


ಮಂಡ್ಯ (ಆ.07): ಕಾಂಗ್ರೆಸ್ ಸರ್ಕಾರದ ವಿರುದ್ಧ ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ-ಜೆಡಿಎಸ್‌ನವರು ಮೊದಲು ಎನ್‌ಸಿಆರ್‌ಪಿ ರಿಪೋರ್ಟ್‌ನ್ನು ಬಿಡುಗಡೆಗೊಳಿಸಲಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸವಾಲು ಹಾಕಿದರು. ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಕಾಂಗ್ರೆಸ್ ಜನಾಂದೋಲನಾ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಸವಾಲಾಗಿ ಜನಾಂದೋಲನ ಸಮಾವೇಶ ನಡೆಯುತ್ತಿದೆ. ಎನ್‌ಸಿಆರ್‌ಬಿ ರಿಪೋರ್ಟ್ ಬಿಡುಗಡೆಗೊಳಿಸಿ ನಂತರ ಪಾದಯಾತ್ರೆ ಮಾಡುವಂತೆ ಚಾಲೆಂಜ್ ಮಾಡಿದರು

ಆ ವರದಿಯ ಪ್ರಕಾರ ದೇಶದಲ್ಲಿ 35 ಸಾವಿರ ವಿದ್ಯಾರ್ಥಿಗಳ ಆತ್ಮಹತ್ಯೆ ಆಗಿದೆ. 16 ಸಾವಿರ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಿರುದ್ಯೋಗಿಗಳ ಆತ್ಮಹತ್ಯೆ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. 13 ಲಕ್ಷ ಯುವತಿಯರ ನಾಪತ್ತೆ ಬಗ್ಗೆ ಯಾರೂ ಉಸಿರುಬಿಡುತ್ತಿಲ್ಲ ಎಂದು ಟೀಕಿಸಿದರು. ಬಿಜೆಪಿಯವರು ನೀವೇ ಸೈಟ್ ಕೊಟ್ಟಿರೋದು. ಇವತ್ತು ನೀವೇ ಹಗರಣದ ಬಗ್ಗೆ ಮಾತನಾಡುತ್ತಿದ್ದೀರಿ. ನೀವು ಕಾನೂನು ಬಾಹೀರವಾಗಿ ಮಾಡಿರುವುದನ್ನು ನಮ್ಮ ತಲೆಗೆ ಕಟ್ಟಲು ಯತ್ನಿಸುತ್ತಿದ್ದೀರಿ ಎಂದು ದೂರಿದರು.

Latest Videos

undefined

ವಾಲ್ಮೀಕಿ, ಮುಡಾ ಹಗರಣಗಳ ನೈತಿಕ ಹೊಣೆಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು

60 ಸಾವಿರ ಕೋಟಿ ಬಡವರ ಅಕೌಂಟಿಗೆ ಹಾಕಿದ ಸಿಎಂ ಸಿದ್ದರಾಮಯ್ಯ. ಜಿಎಸ್‌ಟಿ ವಿಚಾರವಾಗಿ ದೆಹಲಿಯಲ್ಲಿ ಗಮನ ಸೆಳೆದರು. ಹಣ ಬಿಡುಗಡೆಗೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದೇವು. ಇದರಿಂದ ಪ್ರಧಾನಿ ಮೋದಿಗೆ ಮುಜುಗರ ಆಗಿದೆ. ಹೀಗಾಗಿ ಮೋದಿ ಈ ರೀತಿಯ ಕುತಂತ್ರ ಮಾಡುತ್ತಿದ್ದಾರೆ. ಬಿಜೆಪಿಯವರ ವಿರುದ್ಧ ಸ್ಟ್ರೀಟ್ ಫೈಟ್, ರಾಜಕೀಯ ಫೈಟ್ ಹಾಗೂ ಕೋರ್ಟ್ ಫೈಟ್ ಮಾಡೋಕೂ ಕಾಂಗ್ರೆಸ್ ಸಿದ್ಧ ಎಂದು ಖಡಕ್ಕಾಗಿ ಹೇಳಿದರು.

ಸಿದ್ದು ಪರ ಬ್ಯಾಟಿಂಗ್‌: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರಿಂದ ನೋಟಿಸ್‌ ಹೋಗಿರುವ ವಿಚಾರವನ್ನು ಸಂಪುಟದ ಸಚಿವರು ಖಂಡಿಸಿದ್ದು, ಅಭಿಯೋಜನೆ ನೀಡಿದರೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದರೆ ಕಾನೂನಾತ್ಮಕ ಹೋರಾಟ ನಡೆಸಬೇಕಾಗುತ್ತದೆ. ಸಂವಿಧಾನದಲ್ಲಿ ರಾಜ್ಯಪಾಲರ ನಡವಳಿಕೆ ಮತ್ತು ಕಾರ್ಯವಿಧಾನ ಕುರಿತು ನಿಯಮಾವಳಿಗಳಿವೆ. ಸಚಿವ ಸಂಪುಟದ ಸಲಹೆ ಆಧರಿಸಿ ನಡೆದುಕೊಳ್ಳಬೇಕಾಗಿದೆ. 

ಮುಡಾದಲ್ಲಿ ಏನು ತಪ್ಪಾಗಿದೆ ಕೋರ್ಟ್‌ಗೆ ಬಾಂಡ್‌ನಲ್ಲಿ ನೀಡಲಿ: ಸಚಿವ ಆರ್‌.ಬಿ.ತಿಮ್ಮಾಪೂರ

ಆದರೆ, ಪ್ರಸ್ತುತ ರಾಜ್ಯಪಾಲರ ನಡೆಯು ಅನುಮಾನಾಸ್ಪದವಾಗಿದೆ ಎಂದು ಹೇಳಿದರು. ರಾಜ್ಯಪಾಲರನ್ನು ಮುಖ್ಯಮಂತ್ರಿಗಳು ಭೇಟಿಯಾಗಿ ವಿಸ್ತೃತವಾದ ವಿವರಣೆ ನೀಡಿದ್ದಾರೆ. ಅಲ್ಲದೇ, ದಾಖಲೆಗಳನ್ನು ಸಲ್ಲಿಕೆ ಮಾಡಿದ್ದಾರೆ. ಆದರೂ, ನೋಟಿಸ್ ನೀಡಿರುವುದು ಪ್ರಶ್ನಾರ್ಹವಾಗಿದೆ. ರಾಜ್ಯಪಾಲರ ನೋಟಿಸ್‌ಗೆ ಸರ್ಕಾರವು ಉತ್ತರ ನೀಡಲಿದೆ. ಅದನ್ನು ಮೀರಿ ಅಭಿಯೋಜನೆಗೆ ಅನುಮತಿ ನೀಡಿದರೆ ಕಾನೂನು ಹೋರಾಟ ಮುಂದುವರಿಸಬೇಕಾಗುತ್ತದೆ ಎಂದರು.

click me!