ಬಿಜೆಪಿ ಸ್ವಾರ್ಥ ರಾಜಕಾರಣಕ್ಕೆ ಧರ್ಮವನ್ನು ಬಳಸುತ್ತಿದೆ: ಡಿ. ಕೆ.ಶಿವಕುಮಾರ್‌

By Kannadaprabha NewsFirst Published Oct 22, 2024, 6:30 AM IST
Highlights

ಧರ್ಮ ಹಾಗೂ ರಾಜಕಾರಣ ಬೇರೆ ಬೇರೆಯಾಗಿರಬೇಕು. ಆದರೆ, ಬಿಜೆಪಿಗರು ತಮ್ಮ ಸ್ವಾರ್ಥಕ್ಕೆ ಧರ್ಮವನ್ನು ಬಳಸಿಕೊಳ್ಳುತ್ತಾರೆ. ಅರ್ಚಕರಿಗೆ ನಿವೇಶನ ನೀಡುವ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ದೇವಸ್ಥಾನಗಳ ಅಭಿವೃದ್ಧಿ ಸೇರಿ ಇತರೆ ಮಸೂದೆಯನ್ನು ಬಿಜೆಪಿ ಇದೇ ಕಾರಣಕ್ಕೆ ವಿರೋಧಿಸಿತು. ಆದರೂ ನಾವು ಅದನ್ನು ವಿಧಾನಪರಿಷತ್‌ನಲ್ಲಿ ಪಾಸ್ ಮಾಡಿದ್ದೇವೆ. ಇದೀಗ ರಾಜ್ಯಪಾಲರು ಮಸೂದೆಯನ್ನು ತಮ್ಮ ಇಟ್ಟುಕೊಂಡಿದ್ದಾರೆ: ಡಿಸಿಎಂ ಡಿ. ಕೆ.ಶಿವಕುಮಾರ್‌ 

ಬೆಂಗಳೂರು(ಅ.22):  ಬಿಜೆಪಿ ಧರ್ಮವನ್ನು ಜನರ ಬದುಕನ್ನು ಅಭಿವೃದ್ಧಿಪಡಿಸಲು ಬಳಸದೆ ರಾಜಕಾ ರಣಕ್ಕೆ ಬಳಸಿಕೊಳ್ಳುತ್ತಿದೆ. ಇದೇ ಕಾರಣದಿಂದ ಅರ್ಚಕರ, ದೇವಸ್ಥಾನಗಳ ಅಭಿವೃದಿಗೆ ಕಾಂಗ್ರೆಸ್ ತಂದೆ ಮಸೂದೆ ವಿರೋಧಿಸಿದೆ ಎಂದು ಡಿಸಿಎಂ ಡಿ. ಕೆ.ಶಿವಕುಮಾರ್‌ ಹೇಳಿದರು. 

ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಆರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಸೋಮವಾರ ಆಯೋಜಿಸಿದ್ದ ' ಘಂಟಾನಾದ-2' ಸಮಾವೇಶದಲ್ಲಿ ಅವರು ಮಾತನಾಡಿದರು. ಧರ್ಮ ಹಾಗೂ ರಾಜಕಾರಣ ಬೇರೆ ಬೇರೆಯಾಗಿರಬೇಕು. ಆದರೆ, ಬಿಜೆಪಿಗರು ತಮ್ಮ ಸ್ವಾರ್ಥಕ್ಕೆ ಧರ್ಮವನ್ನು ಬಳಸಿಕೊಳ್ಳುತ್ತಾರೆ. ಅರ್ಚಕರಿಗೆ ನಿವೇಶನ ನೀಡುವ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ದೇವಸ್ಥಾನಗಳ ಅಭಿವೃದ್ಧಿ ಸೇರಿ ಇತರೆ ಮಸೂದೆಯನ್ನು ಬಿಜೆಪಿ ಇದೇ ಕಾರಣಕ್ಕೆ ವಿರೋಧಿಸಿತು. ಆದರೂ ನಾವು ಅದನ್ನು ವಿಧಾನಪರಿಷತ್‌ನಲ್ಲಿ ಪಾಸ್ ಮಾಡಿದ್ದೇವೆ. ಇದೀಗ ರಾಜ್ಯಪಾಲರು ಮಸೂದೆಯನ್ನು ತಮ್ಮ ಇಟ್ಟುಕೊಂಡಿದ್ದಾರೆ ಎಂದರು. 

Latest Videos

ಒಳಮೀಸಲಾತಿ ಬಗ್ಗೆ ಮಾತು ಕೊಟ್ಟಂತೆ ನಡೀತೀವಿ, ಎಡಗೈ-ಬಲಗೈ ಸಮುದಾಯಕ್ಕೆ ಸರ್ಕಾರದಿಂದ ನ್ಯಾಯ: ಡಿಸಿಎಂ

ಅರ್ಚಕರ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಬಿಜೆಪಿಗರು ನಮ್ಮನ್ನು ಹಿಂದೂ ವಿರೋಧಿಗಳು ಎಂದು ಬಿಂಬಿ ಸುತ್ತಾರೆ. ಹೇಗಿದ್ದರೂ ಹಿಂದೂ, ಅರ್ಚ ಕರು ನಮಗೆ ಮತ ಹಾಕುತ್ತಾರೆ ಎಂದು ಅವರು ಹಿಂದೂಗಳನ್ನು ಉದಾಸೀನ ಮಾಡುತ್ತಾರೆ. ಅರ್ಚಕರ ತಸ್ತೀಕ್ ಹೆಚ್ಚಳ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಅರ್ಚಕರು ಮೃತಪಟ್ಟರೆ 2 ಲಕ್ಷ ಪರಿಹಾರ, ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಆರಂಭಿಸಿದ್ದು ಕಾಂಗ್ರೆಸ್. ನಾವು ಹಿಂದು ವಿರೋಧಿಗಳಾದರೆ ಇಂತಹ ಕೆಲಸ ಮಾಡಲು ಸಾಧ್ಯವೆ? ಎಂದು ಪ್ರಶ್ನಿಸಿದರು. 

ಗೃಹಸಚಿವ ಡಾ.ಜಿ.ಪರವೇಶ್ವರ್ ಮಾತನಾಡಿ, ಹಿಂದೂ ಧರ್ಮದ ವಿಚಾರಧಾರೆಗಳ ವಿರುದ್ಧ ಕಾಂಗ್ರೆಸ್ ಇಲ್ಲ. ಸಂವಿಧಾನದಲ್ಲಿ ಹೇಳಿದಂತೆ ಪ್ರತಿಯೊಂದು ಧರ್ಮವನ್ನು ನಾವು ಗೌರವಿಸುತ್ತೇವೆ. ಕಾಂಗ್ರೆಸ್ ಹಿಂದೂ ವಿರೋಧಿಎಂಬುದುಸತ್ಯ ರೋಧಿ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು. 

ಯುದ್ಧಕ್ಕೆ ಮುನ್ನ ಶಸ್ತ್ರ ತ್ಯಾಗ ಮಾಡಿತಾ ಜೆಡಿಎಸ್? ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಡಿಕೆಶಿ ಸ್ಫೋಟಕ ಹೇಳಿಕೆ!

ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಹೊಸ ಮಸೂದೆಯಲ್ಲಿ ಎ,ಬಿ, ಗ್ರೇಡ್ ದೇವಸ್ಥಾನಗಳ ಹಣವನ್ನು ಸಾಮಾನ್ಯ ಸಂಗ್ರಹಣ ನಿಧಿಗೆ ಪಡೆದು ಅದನ್ನು ಸಿ ಗ್ರೆಡ್‌ನ ಕನಿಷ್ಠ 1000 ದೇವಸ್ಥಾನಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಇದಕ್ಕೆ 20ಕೋಟಿ ಬೇಕಾಗಲಿದೆ. ಅರ್ಚಕರ ವಿಮೆ ಕಂತಿಗೆ ಪ್ರತಿ ತಿಂಗಳು 2ಕೋಟಿ ಮೀಸಲಿಡಲಾಗುತ್ತಿದೆ. ವರ್ಷಕ್ಕೆ 1000 ಅರ್ಚಕರ ಮನೆ ನಿರ್ಮಾಣಕ್ಕೆ ಧನ ಸಹಾಯ ನೀಡಲು ತೀರ್ಮಾನಿಸಲಾ ಗಿದೆ. ಜಿಲ್ಲೆಗಳಲ್ಲಿ ಸಾಮಾನ್ಯ ಸಂಗ್ರಹ ನಿಧಿಯನ್ನು ಅರ್ಚಕರ, ಸಿಬ್ಬಂದಿ ಕ್ಷೇಮಾಭಿವೃದ್ಧಿಗೆ ಮಾತ್ರ ಬಳಸಲು ನಿರ್ಧರಿಸಲಾಗಿದೆ ಎಂದರು. 

ಅರ್ಚಕರ ಖಾತೆಗೆ ನೇರವಾಗಿ ತಸ್ತೀಕ್ ಬರುವಂತೆ ಮಾಡಲಾಗುತ್ತಿದ್ದು, ಡಿಸೆಂಬರ್‌ನಿಂದ ಇದು ಜಾರಿಯಾಗ ಲಿದೆ. ವರ್ಷಕ್ಕೆ 1200 ಅರ್ಚಕರಿಗೆ ಕಾಶಿ ಯಾತ್ರೆಗೆ ಹೋಗಲು ಅನುವುಮಾಡಿ ಕೊಡಲಾಗಿದೆ ಎಂದರು. ಒಕ್ಕೂಟದ ಅಧ್ಯಕ್ಷ ಪ್ರೊ. ಡಾ. ರಾಧಾಕೃಷ್ಣ ಕೆ.ಇ., ಪ್ರಧಾನಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಸೇರಿ ಇತರರಿದ್ದರು.

click me!