ರಾಜ್ಯದಲ್ಲಿ ಬಿಜೆಪಿ ಬರೋಬ್ಬರಿ 140ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಗ್ಯಾರಂಟಿ. ಈ ಬಗ್ಗೆ ಬೇಕಾದರೆ ನಾ ಬಾಂಡ್ ಪೇಪರ್ ಮೇಲೆ ಬರೆದುಕೊಡಬಲ್ಲೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಹುಬ್ಬಳ್ಳಿ (ಮಾ.18) : ರಾಜ್ಯದಲ್ಲಿ ಬಿಜೆಪಿ ಬರೋಬ್ಬರಿ 140ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಗ್ಯಾರಂಟಿ. ಈ ಬಗ್ಗೆ ಬೇಕಾದರೆ ನಾ ಬಾಂಡ್ ಪೇಪರ್ ಮೇಲೆ ಬರೆದುಕೊಡಬಲ್ಲೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ(Jagadish shettar) ಹೇಳಿದರು.
ಇಲ್ಲಿನ ಸೆಂಟ್ರಲ್ ಕ್ಷೇತ್ರದ ಬೆಂಗೇರಿ ಸಂತೆ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದರು.
ಶ್ರೀರಂಗಪಟ್ಟಣದ ಆಂಜನೇಯನಿಗೆ ಬಿಜೆಪಿಯಿಂದಲೇ ನ್ಯಾಯ: ಸಿ.ಟಿ.ರವಿ
ಡಬಲ್ ಎಂಜಿನ್ ಸರ್ಕಾರ(Double engin government)ದಿಂದ ಸಾಕಷ್ಟುಅಭಿವೃದ್ಧಿಯಾಗಿದೆ. ಈ ಸಲವೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಹಿಂದೆ ಅಬ್ಬಬ್ಬಾ ಎಂದರೆ 110 ಸ್ಥಾನಗಳು ಬಂದಿದ್ದವು. ಆದರೆ, ಈ ಸಲ ಹಾಗೆ ಆಗಲ್ಲ. ಬರೋಬ್ಬರಿ 140ಕ್ಕೂ ಹೆಚ್ಚು ಸ್ಥಾಗಳು ಬರುವುದು ಗ್ಯಾರಂಟಿ. ನಾನು ರಾಜ್ಯದ ವಿವಿಧೆಡೆ ಪ್ರವಾಸ ಮಾಡಿದ್ದೇನೆ ಎಲ್ಲೆಡೆ ಬಿಜೆಪಿ ಅಲೆಯೇ ಇದೆ ಎಂದರು.
ಸೆಂಟ್ರಲ್ ಕ್ಷೇತ್ರ ಹಿಂದೆ ಗ್ರಾಮೀಣ ಕ್ಷೇತ್ರವಿತ್ತು. 1994ರಿಂದ ಈ ಕ್ಷೇತ್ರದಲ್ಲಿ ನನಗೆ ಆಶೀರ್ವದಿಸಿದ್ದೀರಿ. ಈ ಸಲವೂ ಬಿಜೆಪಿಗೆ ಮತ ಹಾಕುವ ಮೂಲಕ ಅಭಿವೃದ್ಧಿಗೆ ಬೆಂಬಲಿಸಬೇಕು ಎಂದರು.
ಶೆಟ್ಟರ್‌ಗೆ ಟಿಕೆಟ್ ಖಚಿತ
ಹುಬ್ಬಳ್ಳಿ-ಧಾರವಾಡ(Hubballi-dharwad) ಸೆಂಟ್ರಲ್ ಕ್ಷೇತ್ರದ ಸರಳ ಹಾಗೂ ಸಜ್ಜನ ರಾಜಕಾರಣಿ ಜಗದೀಶ ಶೆಟ್ಟರ. ಆರು ಸಲದಿಂದ ಗೆಲ್ಲಿಸಿಕೊಂಡು ಬರುತ್ತಿದ್ದೀರಿ. ಈ ಸಲವೂ ಅವರಿಗೆ ಆಶೀರ್ವದಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಈ ಮೂಲಕ ಕ್ಷೇತ್ರದಲ್ಲಿ ಶೆಟ್ಟರ ಅವರಿಗೇ ಟಿಕೆಟ್ ಖಚಿತ ಎಂಬುದನ್ನು ಸೂಚ್ಯವಾಗಿ ತಿಳಿಸಿದರು.
ವಿಜಯ ಸಂಕಲ್ಪ ಯಾತ್ರೆ(Vijayasankalpa yatre)ಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮೋದಿ ಯಾವ ರೀತಿ ಅಭಿವೃದ್ಧಿ ಪಡಿಸುತ್ತಿದ್ದಾರೋ ಅದೇ ರೀತಿ ಸೆಂಟ್ರಲ್ ಕ್ಷೇತ್ರದ ಅಭಿವೃದ್ಧಿಗೆ ಶೆಟ್ಟರ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ ಎಂದರು. ಈ ಸಲವೂ ಅವರಿಗೆ ಬೆಂಬಲಿಸಬೇಕು ಎಂದು ನುಡಿದರು.
KARNATAKA ELECTION 2023: ಮುಂಬರುವ ಚುನಾವಣೆ ಗೆಲ್ಲಲು ಕಾಂಗ್ರೆಸ್ ಕಸರತ್ತು
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಸ್ಮಾಸುರ ಇದ್ದಂತೆ. ಎಲ್ಲಿ ಕೈ ಇಡುತ್ತಾರೋ ಅಲ್ಲಿ ಖತಂ. ಕಾಂಗ್ರೆಸ್ ಪಕ್ಷದ ಪರವಾಗಿ ಇಷ್ಟುವರ್ಷ ಎಲ್ಲಿ ಚುನಾವಣೆ ಪ್ರಚಾರ ಮಾಡಿದ್ದಾರೋ ಅಲ್ಲಿ ಆ ಪಕ್ಷ ಸೋತಿದೆ. ಇಲ್ಲೂ ಅದೇ ಪರಿಸ್ಥಿತಿಯಾಗುತ್ತೆ.
ಪ್ರಹ್ಲಾದ ಜೋಶಿ, ಕೇಂದ್ರ ಸಚಿವ