ದೇಶದಲ್ಲಿ ಹೊಸ ಈಸ್ಟ್ ಇಂಡಿಯಾ ಕಂಪನಿ ಅಂದ್ರೆ ಅದು ಬಿಜೆಪಿ. ದ್ವಂದ್ವ ನೀತಿನ ಪಾಲಿಸುವುದು ಬಿಜೆಪಿ ಡಿ.ಎನ್.ಎ ದಲ್ಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಆರೋಪ ಮಾಡಿದರು.
ಹುಬ್ಬಳ್ಳಿ (ಏ.24): ದೇಶದಲ್ಲಿ ಹೊಸ ಈಸ್ಟ್ ಇಂಡಿಯಾ ಕಂಪನಿ ಅಂದ್ರೆ ಅದು ಬಿಜೆಪಿ. ದ್ವಂದ್ವ ನೀತಿನ ಪಾಲಿಸುವುದು ಬಿಜೆಪಿ ಡಿ.ಎನ್.ಎ ದಲ್ಲಿದೆ. ಹೇಳುವುದು ಒಂದು, ಮಾಡುವುದು ಮತ್ತೊಂದು. ಇನ್ನು ಮೋದಿ ಪ್ರಧಾನ ಮಂತ್ರಿ ಅಲ್ಲ ಪರಿಧಾನ್ ಮಂತ್ರಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಆರೋಪ ಮಾಡಿದರು.
ಹುಬ್ಬಳ್ಳಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಈಸ್ಟ್ ಇಂಡಿಯಾ ಕಂಪನಿ ಅಂದ್ರೆ ಅದು ಬಿಜೆಪಿ. ದ್ವಂದ್ವ ನೀತಿನ ಪಾಲಿಸುವುದು ಬಿಜೆಪಿ ಡಿ.ಎನ್.ಎ ದಲ್ಲಿದೆ. ಹೇಳುವುದು ಒಂದು, ಮಾಡುವುದು ಮತ್ತೊಂದು. ಮೋದಿ ಅವರೇ ಖುದ್ದು ಖಾಲಿ ಚೊಂಬು. ಮೋದಿ ಪ್ರಧಾನ ಮಂತ್ರಿ ಅಲ್ಲ ಪರಿಧಾನ್ ಮಂತ್ರಿ. ಪ್ರತಿ ವರ್ಷ ಮೋದಿ ಅವರಿಂದ ಖಾಲಿ ಚೊಂಬು ಗ್ಯಾರಂಟಿ ಕೊಡಲಾಗುತ್ತಿದೆ. ಉದ್ಯೋಗ ಸೃಷ್ಟಿ, ಕಪ್ಪು ಹಣ ವಾಪಸ್ ಸೇರಿ ಎಲ್ಲ ಗ್ಯಾರಂಟಿಗಳಲ್ಲಿ ಚೊಂಬು ಕೊಟ್ಟಿದ್ದಾರೆ. ಕಳೆದ 10 ವರ್ಷದಲ್ಲಿ ಮೋದಿ ಏನು ಮಾಡಿಲ್ಲ. ಜನರಿಗೆ ಚೀಟಿಂಗ್ ಮಾಡೊ ಕೆಲಸ ಮಾಡಿದ್ದಾರೆ. ಇದು ನಾಚಿಕೆಗೇಡಿನ ವರ್ತನೆ. ಈ ಬಗ್ಗೆ ನಾವು ಬಹಿರಂಗ ಚರ್ಚೆಗೆ ಸಿದ್ದರಾಗಿದ್ದೇವೆ. ಬೇಕಾದರೆ ಪತ್ರಕರ್ತರೆ ಜಡ್ಜ್ ಆಗಲಿ. ಸ್ಥಳವನ್ನು ಅವರೇ ನಿಗದಿ ಮಾಡಲಿ. ಸಿಎಂ, ಡಿಸಿಎಂ ಸೇರಿ ನಮ್ಮ ಸಚಿವರು, ಮುಖಂಡರು ಚರ್ಚೆಗೆ ಸಿದ್ಧರಾಗಿದ್ದಾರೆ ಎಂದು ಹೇಳಿದರು.
Breaking: ರಾಜ್ಯದಲ್ಲಿ 23 ಜನರ ಮೇಲೆ ಪ್ರಚೋದನಕಾರಿ ಭಾಷಣ ಕೇಸ್ ದಾಖಲು; ಹಾಸನದ್ದು ವಿಶೇಷ ಕೇಸ್
ಸಂವಿಧಾನ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ, ನಾವು ಬದಲಾವಣೆ ವಿಚಾರ ಮಾತನಾಡಿಲ್ಲ. ಸಂವಿಧಾನ ಬದಲಾವಣೆ ವಿಚಾರವನ್ನು ಮಾತನಾಡಿದವರು ಬಿಜೆಪಿಯವರು. ಅನಂತಕುಮಾರ್ ಹೆಗಡೆ ಯಾರು ಸಂವಿಧಾನ ಬದಲಾವಣೆ ಮಾತುಗಳು ಬರ್ತಿರೋದೇ ಬಿಜೆಪಿ ನಾಯಕರ ಬಾಯಲ್ಲಿ. ಖುದ್ದು ಮೋದಿ ಅವರೇ ಸಂವಿಧಾನ ಬದಲಾವಣೆ ಪಿತೂರಿ ಮಾಡ್ತಿದ್ದಾರೆ. ಮೋದಿ ಪ್ರಧಾನ ಮಂತ್ರಿ ಅಲ್ಲ ಪರಿಧಾನ್ ಮಂತ್ರಿ. ಉಡುವ ಬಟ್ಟೆ, ಪೆನ್ ಹಿಡಿದು ಎಲ್ಲವೂ ದುಬಾರಿ ಎಂದು ಪ್ರಧಾನಿ ಮೋದಿ ವಿರುದ್ಧ ಸುರ್ಜೆವಾಲಾ ಹರಿಹಾಯ್ದರು.
ಹುಬ್ಬಳ್ಳಿಯಲ್ಲಿ ಕೊಲೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರ ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿಬಂದು ಮಾತನಾಡಿದ ಸುರ್ಜೇವಾಲಾ ಅವರು, ಈ ಮನೆ ಹೊರತುಪಡಿಸಿ ನೀವು ರಾಜಕಾರಣ ಮಾಡಿ. ಸಾವಿನ ಮನೆಯಲ್ಲಿ ಚುನಾವಣಾ ರಾಜಕಾರಣ ಸರಿಯಲ್ಲ. ಇವತ್ತು ನಮ್ಮ ಮಗಳು ನೇಹಾ ನಿವಾಸಕ್ಕೆ ಬಂದಿದ್ದೇವೆ. ನೇಹ ಕೇವಲ ನಿರಂಜನ್ ಹಿರೇಮಠ ಪುತ್ರಿ ಅಲ್ಲ. ಇಡೀ ಕರ್ನಾಟಕದ ಪುತ್ರಿ. ನಿರಂಜನ್ ನಮ್ಮ ಕುಟುಂಬದ ಸದಸ್ಯರು. ಈ ಘಟನೆ ಬಗ್ಗೆ ಅತ್ಯಂತ ದುಃಖವಿದೆ. ನಾವೆಲ್ಲ ಅವರ ಜೊತೆ ಇರ್ತೇವೆ. ಸಂಪೂರ್ಣ ನ್ಯಾಯ ಕೊಡೋಸೋದು ಸರ್ಕಾರದ ಕರ್ತವ್ಯ. ಈಗಾಗಲೇ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. ತ್ವರಿತಗತಿಯಲ್ಲಿ ನ್ಯಾಯದಾನ ಆಗಬೇಕು ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಡಬಲ್ ಸೆಕ್ಯೂರಿಟಿ; ಎಲ್ಲ ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ಅಳವಡಿಕೆ
ನೇಹಾ ಹತ್ಯೆ ಆರೋಪಿಗೆ ಕೇವಲ 90 ದಿನಗಳಲ್ಲಿ ನ್ಯಾಯದಾನ ಸಿಗಲಿದೆ ಅನ್ನೋ ವಿಶ್ವಾಸವಿದೆ. ಆರೋಪಿಗೆ ಗಲ್ಲು ಶಿಕ್ಷೆ ಆಗಬೇಕು. ಆಕೆಯ ಸಾವಿಗೆ ನ್ಯಾಯಾಲಯ ಸಿಗಬೇಕು. ವಿಶೇಷ ಕೋರ್ಟ್ ಖಂಡಿತಾ ತ್ವರಿತ ನ್ಯಾಯದಾನ ನೀಡಲಿದೆ. ಗಲ್ಲಿಗಿಂತ ಕಡಿಮೆ ಶಿಕ್ಷೆ ಸಿಗಲ್ಲ. ಇನ್ನು ಬಿಜೆಪಿಯಿಂದ ಸಿಬಿಐ ತನಿಖೆಗೆ ಆಗ್ರಹ ವಿಚಾರದ ಬಗ್ಗೆ ಮಾತನಾಡಿ ಸಿಐಡಿ ಮೇಲೆ ನಮಗೆ ನಂಬಿಕೆ ಇದೆ. ರಾಜ್ಯ ಪೊಲೀಸರ ಮೇಲೆ ವಿಶ್ವಾಸವಿದೆ. 90 ದಿನಗಳಲ್ಲಿ ಖಂಡಿತಾ ನ್ಯಾಯ ಸಿಗಲಿದೆ ಅನ್ನೋ ಖಾತ್ರಿಯಿದೆ ಎಂದು ರಣದೀಪ್ ಸಿಂಗ್ ಸುರ್ಜೇವಾಲಾ ತಿಳಿಸಿದರು.