ಈ ಬಾರಿ ಚುನಾವಣೇಲಿ 'ಅವರ' ಅಂತ್ಯ ಆಗಲೇಬೇಕು: ಎಚ್.ಡಿ. ದೇವೇಗೌಡ

By Kannadaprabha News  |  First Published Apr 24, 2024, 4:31 PM IST

ಈ ಬಾರಿಯ ಲೋಕಸಭಾ ಚುನಾವಣೆಯಲಿ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟ 28 ಸ್ಥಾನ ಗೆಲ್ಲಬೇಕು. ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಯಾರಿಗೂ ಪ್ರಧಾನಿ ಆಗುವ ಯೋಗ್ಯತೆ ಇಲ್ಲ. ಈ ಸನ್ನಿವೇಶದಲ್ಲಿ ಚೀನಾ, ರಷ್ಯಾವನ್ನು ಹೆದರಿಸುವ ಸಾಮರ್ಥ್ಯ ಇರುವುದು ಮೋದಿಗೆ ಮಾತ್ರ, ಅವರ ಕೈ ಬಲ ಪಡಿಸಬೇಕು ಎಂದು ತಿಳಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ 

Former PM HD Devegowda Slams DK Brothers grg

ಹಾರೋಹಳ್ಳಿ(ಏ.24):  ಈ ಕ್ಷೇತ್ರದಲ್ಲಿ ಅವರಿಗೆ ಸೆಡ್ಡು ಹೊಡೆಯಬೇಕು. ನೀವು ಯಾರಿಗೂ ಹೆದರಬೇಡಿ. ಈ ಸಲ ಅವರ ಅಂತ್ಯ ಆಗಲೇಬೇಕು ಎಂದು ಡಿಕೆ ಸಹೋದರ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ತಾಲೂಕಿನ ಮರಳವಾಡಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಮೋದಿ ಮತ್ತು ಅಮಿತ್ ಶಾರವರ ಒತ್ತಾಯದ ಮೇರೆಗೆ ಮಂಜುನಾಥ್‌ರನ್ನು ನಿಲ್ಲಿಸಲಾಗಿದೆ. ನೀವೆಲ್ಲ ಮತ ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

Tap to resize

Latest Videos

ಜೆಡಿಎಸ್‌ಗೆ ಭವಿಷ್ಯ ಇಲ್ಲ ಎಂಬುದನ್ನು ಇಲ್ಲಿನ ಶಾಸಕರೇ ತೋರಿಸಿದ್ದಾರೆ: ಡಿ.ಕೆ.ಶಿವಕುಮಾರ್

ಜಯದೇವ ಸಂಸ್ಥೆ ನಿರ್ದೇಶಕರಾಗಿದ್ದಾಗ ಡಾ. ಸಿ.ಎನ್. ಮಂಜುನಾಥ್ ಅವರು ಸಾವಿರಾರು ಜನರಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ದೇಶದಲ್ಲಿ ಅವರ ನೈಪುಣ್ಯತೆ ಬಳಸಿಕೊಳ್ಳಲು, ಸಚಿವರನ್ನಾಗಿ ಮಾಡಿ ರಾಷ್ಟ್ರಕ್ಕೆ ಅವರ ಸೇವೆ ಬಳಸಿಕೊಳ್ಳಲು ಅವರನ್ನು ಚುನಾವಣೆಗೆ ನಿಲ್ಲಿಸಲಾಗಿದೆ. ಬಡ ಜನರಿಗೆ ಸೇವೆ ಸಲ್ಲಿಸಿರುವ ವ್ಯಕ್ತಿಯನ್ನು ನಿಲ್ಲಿಸಿದ್ದು ಅವರ ನಿಷ್ಠೆ, ಪ್ರಾಮಾಣಿಕತೆಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಮೋದಿ ಬಿಟ್ಟರೆ ಯಾರಿಲ್ಲ:

ಈ ಬಾರಿಯ ಲೋಕಸಭಾ ಚುನಾವಣೆಯಲಿ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟ 28 ಸ್ಥಾನ ಗೆಲ್ಲಬೇಕು. ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಬಿಟ್ಟರೆ ಯಾರಿಗೂ ಪ್ರಧಾನಿ ಆಗುವ ಯೋಗ್ಯತೆ ಇಲ್ಲ. ಈ ಸನ್ನಿವೇಶದಲ್ಲಿ ಚೀನಾ, ರಷ್ಯಾವನ್ನು ಹೆದರಿಸುವ ಸಾಮರ್ಥ್ಯ ಇರುವುದು ಮೋದಿಗೆ ಮಾತ್ರ, ಅವರ ಕೈ ಬಲ ಪಡಿಸಬೇಕು ಎಂದು ತಿಳಿಸಿದರು

ಪ್ರಧಾನಿ ಮೋದಿ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಕೇಂದ್ರದಲ್ಲಿ ಬಳಸಿಕೊಳ್ಳಲು ಉದ್ದೇಶಿಸಿದ್ದಾರೆ. ಆದ್ದರಿಂದಲೇ ಅವರನ್ನು ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಿಸಿದ್ದಾರೆ. ಕುಮಾರಸ್ವಾಮಿ ರಾಮನಗರ, ಚಿಕ್ಕಬಳ್ಳಾಪುರವೆಂಬ ಎರಡು ಹೊಸ ಜಿಲ್ಲೆಗಳನ್ನು ಮಾಡಿ ಕೊಡುಗೆ ನೀಡಿದ್ದಾರೆ ಎಂದರು.

vuukle one pixel image
click me!
vuukle one pixel image vuukle one pixel image