ಹೆಣ ಬೀಳೋದನ್ನೇ ಕಾಯುವ ಬಿಜೆಪಿ ಒಂದು ಭಯೋತ್ಪಾದಕ ಪಕ್ಷ : ಬಿಕೆ ಹರಿಪ್ರಸಾದ್‌

By Kannadaprabha News  |  First Published Feb 18, 2023, 8:33 AM IST

ಬಿಜೆಪಿ ಅದೊಂದು ಭಯೋತ್ಪಾದಕ ಪಕ್ಷ. ಹೆಣ ಬೀಳುವುದನ್ನೇ ಕಾಯುತ್ತಾರೆ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಆರೋಪಿಸಿದರು.


ಹೊನ್ನಾವರ (ಫೆ.18) : ಬಿಜೆಪಿ ಅದೊಂದು ಭಯೋತ್ಪಾದಕ ಪಕ್ಷ. ಹೆಣ ಬೀಳುವುದನ್ನೇ ಕಾಯುತ್ತಾರೆ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಆರೋಪಿಸಿದರು.

ಅವರು ಹಳದೀಪುರದ ಗೋಪಿನಾಥ ಸಭಾಭವನದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಏರ್ಪಡಿಸಿದ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Latest Videos

undefined

ಬಿಜೆಪಿಯವರು ಉದ್ರೇಕಕಾರಿ ಭಾಷಣ ಮಾಡುತ್ತಾರೆ. ಪ್ರಚೋದನೆ ನೀಡುತ್ತಾರೆ. ರಸ್ತೆ, ಮನೆ, ಬೆಳಕು, ಕೇಳಿದರೆ ಜನರಿಗೆ ಲವ್‌ ಜಿಹಾದಿ ಬಗ್ಗೆ ಮಾತಾಡಿ ಎನ್ನುತ್ತಾರೆ ಎಂದು ಹರಿಪ್ರಸಾದ ದೂರಿದರು.

Karnataka Budget 2023: ಘೋಷಿತ ಯೋಜನೆಗೆ ಅಧಿಕೃತ ಮುದ್ರೆ ಒತ್ತಿದ ಬಜೆಟ್‌

ಮಲತಾಯಿ ಧೋರಣೆ:

ರಾಜ್ಯದಲ್ಲಿ .6.7 ಲಕ್ಷ ಕೋಟಿ ಜಿಎಸ್ಟಿಹಣ ಸಂಗ್ರಹವಾಗಿದೆ. ಅದರಲ್ಲಿ ಶೇ.45 ಹಣ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರವು ಕೊಡಬೇಕು. ಆದರೆ ರಾಜ್ಯಕ್ಕೆ ಬಂದ ಹಣ ಕೇವಲ .2.7 ಲಕ್ಷ ಕೋಟಿ ಮಾತ್ರ ಆಗಿದೆ. ಆದರೆ ಕೇಂದ್ರವು ಬಿಜೆಪಿ()BJP( ರಾಜ್ಯಗಳಿಗೆ ಹೆಚ್ಚು ಹಣ ನೀಡಿದೆ. ಕೇಂದ್ರದ ಮಲತಾಯಿ ಧೋರಣೆಯನ್ನು ರಾಜ್ಯದ ಪ್ರತಿ ನಾಗರಿಕರು ಖಂಡಿಸಬೇಕು ಎಂದರು.

ರಾಜ್ಯದಲ್ಲಿ ಕೊರೋನಾ(Corona) ತಾಂಡವವಾಡಿದಾಗ, ಅತಿವೃಷ್ಠಿ, ನೆರೆಹಾವಳಿ ಕಾಡಿದಾಗ, ಚಾಮರಾಜ ನಗರ(Chamarajanagara)ದಲ್ಲಿ ಆಮ್ಲಜನಕ ಕೊರತೆಯಿಂದ ಜನ ಸತ್ತಾಗ, ರಾಜ್ಯಕ್ಕೆ ಮುಖ ತೋರಿಸದ ಪ್ರಧಾನಿ ನರೇಂದ್ರ ಮೋದಿ(PM Narendra Modi) ಈಗ ಕ್ರಿಕೆಟ್‌ ತಾರೆಗಳ, ಚಲನಚಿತ್ರ ನಟರನ್ನು ಭೇಟಿ ಆಗಲು ಬರುತ್ತಿದ್ದಾರೆ. ರಂಗು ರಂಗಿನ ಡ್ರೆಸ್‌, ಟೋಪಿ ಹಾಕಿ ಕರ್ನಾಟಕಕ್ಕೆ ಬರುವ, ಬಣ್ಣ ಬದಲಿಸುವ ಊಸರವಳ್ಳಿ ಆಗಿದ್ದಾರೆ ಎಂದು ಆರೋಪಿಸಿದರು.

ತಾಕತ್ತಿದ್ರೆ, ಧಮ್ಮಿದ್ರೆ..:

ಆಗ ಟಿಪ್ಪು ಸುಲ್ತಾನ(Tippu sultan)ನನ್ನು ಹೊಡೆದು ಹಾಕಿದ ಹಾಗೆ ಸಿದ್ದರಾಮಯ್ಯ(Siddaramaiah) ಅವರನ್ನು ಹೊಡೆದು ಹಾಕಿ ಎಂದು ಹೇಳುತ್ತಾರೆ. ಅಂಥವರಿಗೆ ನಾನು ನಮ್ಮ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ(CM Basavaraj Bommai) ಶೈಲಿಯಲ್ಲಿ ಪ್ರಶ್ನಿಸುತ್ತೇನೆ. ನಿಮಗೆ ತಾಕತ್ತಿದ್ರೆ, ಧಮ್ಮಿದ್ರೆ, ಸಿದ್ದರಾಮಯ್ಯ ಅವರ ಒಂದೇ ಒಂದು ಕೂದಲನ್ನು ಅಲುಗಾಡಿಸಿ ಎಂದು ಸವಾಲು ಹಾಕಿದರು.

ಮಂತ್ರಿ ಆಗಿದ್ದುಕೊಂಡು ಜನರನ್ನು ಕೆರಳಿಸಿ, ಪ್ರಚೋದನೆ ನೀಡುವ ಅಶ್ವಥ್‌ ನಾರಾಯಣ(Dr CN Ashwath Narayan) ತಮ್ಮ ಹೆಸರು ಬದಲಿಸಿಕೊಳ್ಳಲಿ ಎಂದರು. ಮಾಜಿ ಸಂಸದೆ ಮಾರ್ಗರೇಟ್‌ ಆಳ್ವ, ಮಾಜಿ ಸಚಿವ ಆರ್‌.ವಿ. ದೇಶಪಾಂಡೆ(RV Deshpande), ಮುಖಂಡರಾದ ಮಂಜುನಾಥ ಭಂಡಾರಿ, ಐವನ್‌ ಡಿಸೋಜಾ ಮಾತನಾಡಿದರು.

ಲವ್ ಜಿಹಾದ್ ಬಗ್ಗೆ ಮಾತ್ನಾಡೋ ನಳಿನ್‌ಗೆ ಲವ್ವಲ್ಲಿ ಹೆಚ್ಚು ಕಡಿಮೆ ಆಗಿರ್ಬೇಕು: ಬಿ.ಕೆ.ಹರಿಪ್ರಸಾದ್ ವ್ಯಂಗ್ಯ

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಗದೀಪ್‌ ತೆಂಗೇರಿ ಸ್ವಾಗತಿಸಿದರು. ಜೆ.ಡಿ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಾಂಗ್ರೆಸ್‌ ರಾಜ್ಯ ಮುಖಂಡ ನಿವೇದಿತಾ ಆಳ್ವ, ವಿ.ಎಸ್‌. ಆರಾಧ್ಯ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಾಯಿನಾಥ ಗಾಂವಕರ, ರಮಾನಂದ ನಾಯಕ್‌, ಮಂಜುನಾಥ ನಾಯ್ಕ, ಕಿಸಾನ್‌ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವಾನಂದ ಹೆಗಡೆ, ಮಹಿಳಾ ಘಟಕದ ಸುಜಾತಾ ಗಾವಂಕರ, ಅಲ್ಪಸಂಖ್ಯಾತ ಘಟಕದ ಮಜಿದ್‌ಸಾಬ್‌, ಕೆಪಿಸಿಸಿ ಸದಸ್ಯ ಎಂ.ಎನ್‌. ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

click me!