Karnataka Budget 2023: ಬಿಜೆಪಿ ಸರ್ಕಾರದ್ದು ಸುಳ್ಳಿನ ಬಜೆಟ್‌: ಸುರ್ಜೆವಾಲಾ

By Kannadaprabha NewsFirst Published Feb 18, 2023, 7:42 AM IST
Highlights

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವುದು ಸುಳ್ಳಿನ ಬಜೆಟ್‌. ಮುಂದೆ ನಾವೇ ಮತ್ತೆ ಬಜೆಟ್‌ ಮಂಡಿಸುತ್ತೇವೆ. ಮಹದಾಯಿ ಯೋಜನೆಯನ್ನು ನಾವೇ ಪೂರ್ಣಗೊಳಿಸುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸುರ್ಜೆವಾಲಾ ಹೇಳಿದರು.

ಹುಬ್ಬಳ್ಳಿ (ಫೆ.18) : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವುದು ಸುಳ್ಳಿನ ಬಜೆಟ್‌. ಮುಂದೆ ನಾವೇ ಮತ್ತೆ ಬಜೆಟ್‌ ಮಂಡಿಸುತ್ತೇವೆ. ಮಹದಾಯಿ ಯೋಜನೆಯನ್ನು ನಾವೇ ಪೂರ್ಣಗೊಳಿಸುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸುರ್ಜೆವಾಲಾ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಕಳಸಾ-ಬಂಡೂರಿಗೆ ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಆದರೆ ಈ ಸರ್ಕಾರದ ಅವಧಿಯೇ ಒಂದು ತಿಂಗಳಿದೆ. ಅದ್ಹೇಗೆ ಬಿಡುಗಡೆ ಮಾಡುತ್ತಾರೆ? ಎಂದು ಪ್ರಶ್ನಿಸಿದರು.

Latest Videos

ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದಿಲ್ಲ: ಎಚ್‌.ಡಿ.ಕುಮಾರಸ್ವಾಮಿ ಭವಿಷ್ಯ

ನಮ್ಮ ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳನ್ನು ಕಾಪಿ ಮಾಡಿಕೊಂಡಿದ್ದಾರೆ. ಆದರೆ ಕಾಪಿ ಮಾಡುವಲ್ಲೂ ವಿಫಲವಾಗಿದ್ದಾರೆ. ಅದಕ್ಕೂ ಜಾಣ್ಮೆ ಬೇಕು ಎಂದು ವ್ಯಂಗ್ಯವಾಡಿದರು.

ಅಶ್ವತ್‌್ಥ ನಾರಾಯಣ ಬಂಧಿಸಿ:

ಟಿಪ್ಪು ಮುಗಿಸಿದಂತೆ ಸಿದ್ದರಾಮಯ್ಯ(Siddaramaiah) ಅವರನ್ನು ಮುಗಿಸಬೇಕು ಎಂದು ಹೇಳಿಕೆ ನೀಡಿರುವ ಸಚಿವ ಅಶ್ವತ್ಥ್ ನಾರಾಯಣ(Ashwath Narayan) ಅವರನ್ನು ಕೂಡಲೇ ಬಂಧಿಸಬೇಕು. ಬಿಜೆಪಿ(BJP)ಯದ್ದು ಗೋಡ್ಸೆ ಸಂಸ್ಕೃತಿ. ಗಾಂಧಿ ಕೊಂದ ಸಂಸ್ಕೃತಿ ಗೋಡ್ಸೆಯದ್ದು. ಅದೇ ಸಂಸ್ಕೃತಿಯೇ ಇಂದಿರಾಗಾಂಧಿ, ರಾಜೀವ ಗಾಂಧಿ, ಪಂಜಾಬಿನ ಸರ್ದಾರ ಬೇನ್‌ ಸಿಂಗ್‌ರನ್ನೂ ಕೊಂದಿತು. ನೂರಾರು ಕಾರ್ಯಕರ್ತರು ಭಾರತ ಉಳಿವಿಗೆ ಜೀವತ್ಯಾಗ ಮಾಡಿದ್ದಾರೆ. ನಾವು ಮತ್ತೆ ಮತ್ತೆ ಜೀವ ತ್ಯಾಗಕ್ಕೆ ಸಿದ್ಧ. ವಿದ್ವಂಸಕ ಕೃತ್ಯಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಪ್ರೀತಿಯ ಸಂದೇಶ ಸಾರುವವರು ನಾವು ಎಂದರು.

ಸಚಿವ ಸ್ಥಾನದಿಂದ ಅಶ್ವತ್‌್ ನಾರಾಯಣ ಅವರನ್ನು ವಜಾಗೊಳಿಸಿ ಕೂಡಲೇ ಬಂಧಿಸಬೇಕು. ಆದರೆ ಯಾಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯ ಬಿಜೆಪಿಗೆ ಕಾಡುತ್ತಿದೆ. ಅದಕ್ಕಾಗಿ ಈ ರೀತಿ ಹೇಳಿಕೆ ಕೊಡಿಸುತ್ತಿದ್ದಾರೆ. ಮಾತನಾಡಿದ್ದು ಅಶ್ವತ್‌್ಥ ನಾರಾಯಣ ಆದರೂ ಅದರ ಹಿಂದೆ ಪ್ರಧಾನಿ ನರೇಂದ್ರ ಮೋದಿ(PM Narendra Modi), ಜೆ.ಪಿ. ನಡ್ಡಾ, ಬಸವರಾಜ ಬೊಮ್ಮಾಯಿ,(Basavaraj bommai) ನಳಿನಕುಮಾರ್‌ ಕಟೀಲ್‌ ಇದ್ದಾರೆ. ಚುನಾವಣೆ ಸೋಲಿನಿಂದ ಬಚಾವಾಗಲು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

Karnataka Budget 2023: ಮಹದಾಯಿ ಯೋಜನೆಗೆ. ₹1000 ಕೋಟಿ​-ಕಿಮ್ಸ್‌ನಲ್ಲಿ ಐವಿಎಫ್‌

ನಾನೂ ಸೇರಿ ಹತ್ತು ಜನ ಮುಖ್ಯಮಂತ್ರಿ ಸ್ಪರ್ಧೆಯಲ್ಲಿದ್ದಾರೆ ಎಂಬ ಪರಮೇಶ್ವರ(Dr G Parameshwar) ಹೇಳಿಕೆ ಕುರಿತು, ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆ ಇಲ್ಲ. ಅವರು ಯಾವಾಗ ಈ ರೀತಿ ಹೇಳಿಕೆ ಕೊಟ್ಟಿದ್ದಾರೊ ಗೊತ್ತಿಲ್ಲ. ಆದರೆ ನಮ್ಮಲ್ಲಿ ಜನರ ಸೇವೆ ಮಾಡಲು ಸ್ಪರ್ಧೆ ನಡೆಯುತ್ತಿದೆ. ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಸ್ಪರ್ಧೆ ನಡೆದಿದೆ. ಬಿಜೆಪಿ ಕಿತ್ತೊಗೆದು ಕಾಂಗ್ರೆಸ್‌ ಸರ್ಕಾರ ತರುವುದಕ್ಕೆ ಸ್ಪರ್ಧೆ ನಡೆಯುತ್ತಿದೆ ಎಂದರು.

click me!