ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋದಿಲ್ಲ: ಎಚ್‌.ಡಿ.ಕುಮಾರಸ್ವಾಮಿ ಭವಿಷ್ಯ

By Kannadaprabha News  |  First Published Feb 18, 2023, 6:40 AM IST

ಈಗಾಗಲೇ ನಾನು 70 ವಿಧಾನಸಭಾ ಕ್ಷೇತ್ರಗಳ ಸಾವಿರಾರು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ನನಗಿರುವ ಮಾಹಿತಿ ಮತ್ತು ಅಲ್ಲಿನ ವಾತಾವರಣದ ಪ್ರಕಾರ ಬಿಜೆಪಿ ಮತ್ತೆ ಅಧಿ​ಕಾರಕ್ಕೆ ಬರೋದಿಲ್ಲ. ಅದರಲ್ಲೂ ಸ್ವತಂತ್ರವಾಗಿ ಅಧಿ​ಕಾರಕ್ಕೆ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು. 


ಚನ್ನಪಟ್ಟಣ (ಫೆ.18): ಈಗಾಗಲೇ ನಾನು 70 ವಿಧಾನಸಭಾ ಕ್ಷೇತ್ರಗಳ ಸಾವಿರಾರು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ನನಗಿರುವ ಮಾಹಿತಿ ಮತ್ತು ಅಲ್ಲಿನ ವಾತಾವರಣದ ಪ್ರಕಾರ ಬಿಜೆಪಿ ಮತ್ತೆ ಅಧಿ​ಕಾರಕ್ಕೆ ಬರೋದಿಲ್ಲ. ಅದರಲ್ಲೂ ಸ್ವತಂತ್ರವಾಗಿ ಅಧಿ​ಕಾರಕ್ಕೆ ಬರುವುದಕ್ಕೆ ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದರು. ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ತಾಲೂಕಿಗೆ ಆಗಮಿಸಿದ್ದ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾನತಾಡಿ, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಮತ ನೀಡಿದರೆ ಪ್ರಯೋಜನ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ಗೆ ಮತ ಹಾಕಿದರೆ ಯಾರಿಗೆ ಲಾಭ? ಈಗಾಗಲೇ ಕಾಂಗ್ರೆಸ್‌ನಲ್ಲಿ 15 ಜನ ಸಿಎಂ ಆಗೋದಕ್ಕೆ ತಯಾರಾಗಿದ್ದೇವೆ ಎಂದು ಹೇಳಿದ್ದಾರೆ. ಹೀಗಿರುವಾಗ ಕಾಂಗ್ರೆಸ್‌ಗೆ ವೋಟ್‌ ನೀಡಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಜನ ನನಗೆ ಮತ ಕೊಟ್ಟರೆ ಭದ್ರವಾಗಿ ಆದ್ರೂ ಇಟ್ಟುಕೊಳ್ಳುತ್ತೇನೆ. ಅವರಿಗೆ ಕೊಟ್ಟರೆ ಏನು ಉಪಯೋಗ ಆಗುತ್ತೆ. ಪಾಪ ಅವರು ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇಟ್ಟುಕೊಂಡು ಹೇಳ್ತಾ ಇದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಕೇಳಲು ಎಲ್ಲರಿಗೂ ಅವಕಾಶ ಇದೆ. ಆದರೆ ಜೆಡಿಎಸ್‌ಗೆ ಮತ ಹಾಕಬೇಡಿ ಅನ್ನೋದು ತಪ್ಪು. ನಿಮ್ಮ ಕಾರ್ಯವೈಖರಿ ತಿಳಿಸಿ ಮತ ಕೇಳಿ ಅಷ್ಟೇ, ಇನ್ನೊಬ್ಬರಿಗೆ ನೀಡಿಬೇಡಿ ಎಂದಲ್ಲ ಎಂದು ಡಿ.ಕೆ.ಶಿವಕುಮಾರ್‌ಗೆ ಟಾಂಗ್‌ ನೀಡಿದರು. ಅಮಿತ್‌ ಶಾ ಬಂದಾಗ ಜೆಡಿಎಸ್‌ಗೆ ಮತ ನೀಡಿದರೆ ಅದು ಕಾಂಗ್ರೆಸ್‌ಗೆ ಹಾಕಿದ ರೀತಿ. ಜೆಡಿಎಸ್‌ ಕಾಂಗ್ರೆಸ್‌ನ ಬಿ ಟೀಂ ಎನ್ನುತ್ತಾರೆ. ಇಲ್ಲಿ ಕಾಂಗ್ರೆಸ್‌ನವರು ಜೆಡಿಎಸ್‌ ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ ಮಾಡುತ್ತಾರೆ. ಆದರೆ ನಾನು ನನ್ನ ಕಾರ್ಯಕ್ರಮಗಳನ್ನು ನೋಡಿ ಮತ ನೀಡಿ ಎಂದು ಜನರ ಬಳಿ ಕೇಳಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.

Tap to resize

Latest Videos

ಕುಮಾರಣ್ಣ ಸರ್ಕಾರ ರಚನೆಗೆ ಬೆಂಬಲ ಸೂಚಿಸಬೇಕು: ನಿಖಿಲ್‌ ಕುಮಾರಸ್ವಾಮಿ

ಅಭಿವೃದ್ಧಿ ಮಾಡಿದ್ದರೆ ಸೀರೆ ಏಕೆ ಹಂಚಬೇಕಿತ್ತು?: 20 ವರ್ಷ ಚನ್ನಪಟ್ಟಣದ ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ್‌ ಕ್ಷೇತ್ರ ಅಭಿವೃದ್ಧಿ ಮಾಡಿದ್ದರೆ ಸೀರೆ ಹಂಚಿಕೊಂಡು ರಾಜಕೀಯ ಮಾಡುವ ಅನಿವಾರ್ಯತೆ ಇದೆಯೇ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಸೀರೆ ಹಂಚಿಕೊಂಡು ಈ ತಾಲೂಕಿನ ಜನರ ಸ್ವಾಭಿಮಾನ ಉಳಿಸಲು ಅವರು ಹೊರಟಿದ್ದಾರ? ತಾಲೂಕಿನ ಜನ ಅವರ ಕುಟುಂಬಗಳಿಗೆ ಸೀರೆ ತಂದುಕೊಡದ ಪರಿಸ್ಥಿತಿಯಲ್ಲಿ ಇದ್ದಾರೆಯೇ. ಸೀರೆ ಕೊಟ್ಟು ವೋಟು ಪಡೆಯಬೇಕಾ? ಮುಂದಿನ ಚುನಾವಣೆಯಲ್ಲಿ ಜನರೇ ತೀರ್ಮಾನ ಮಾಡುತ್ತಾರೆ. ಚನ್ನಪಟ್ಟಣದಲ್ಲಿ ನಟಿ ರಮ್ಯ ಸ್ಪರ್ಧೆಗೆ ಪ್ರತಿಕ್ರಿಯಿಸಿ, ಆಕೆ ಕೂಡ ನನ್ನ ಸಹೋದರಿ ಇದ್ದಂತೆ. ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು. ಆಕೆ ಸ್ಪ​ರ್ಧಿಸಿದರೆ ಸ್ವಾಗತಿಸುತ್ತೇನೆ. ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್‌ ಇಬ್ಬರೂ ಚರ್ಚಿಸಿ ಸ್ಪರ್ಧೆ ಮಾಡಿಸಲಿ. ಇದು ಪ್ರಜಾಪ್ರಭುತ್ವ ಚುನಾವಣೆ ಯಾರಿಗೆ ಏನು ಶಾಶ್ವತ ಅಲ್ಲ. ನಾನು ಸೋಲು- ಗೆಲುವು ಎರಡನ್ನು ಸಮಚಿತ್ತದಿಂದ ಸ್ವೀಕರಿಸಿದ್ದೇನೆ ಎಂದರು.

ಚಿಲ್ಲರೆ ರಾಜಕಾರಣ ನಡೆಯೋಲ್ಲ: ಚನ್ನಪಟ್ಟಣದಲ್ಲಿ ಬಮೂಲ್‌ ಉತ್ಸವ ಅಡ್ಡಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಯೋಗೇಶ್ವರ್‌ ಬೆಂಬಲಿಗರು ಕಾರ್ಯಕ್ರಮ ನಡೆಯದಂತೆ ತಡೆಯಲು ಹೊರಟಿದ್ದಾರೆ. ಅವರು ಈ ಹಿಂದೆ ಕಾರ್ಯಕ್ರಮ ಮಾಡಿದ್ದಾಗ ರಾಜಕೀಯ ಪ್ರೇರಿತ ಕಾರ್ಯಕ್ರಮ ಅಂತಾ ಅನ್ನಿಸಲಿಲ್ವ. ಈಗ ಸರ್ಕಾರದ ಅ​ಧಿಕಾರಿಗಳನ್ನು ಬಳಸಿಕೊಂಡು ಬಲವಂತವಾಗಿ ಬಮೂಲ್‌ ಉತ್ಸವ ಎಂದು ಹೆಸರೇ ಇಡಬಾರದು. ಕಾರ್ಯಕ್ರಮ ನಡೆಯಲೇ ಕೂಡದು ಎಂದು ರದ್ದು ಪಡಿಸಲು ಹೊರಟಿದ್ದಾರೆ. ಎಷ್ಟುತಾಲೂಕಿನಲ್ಲಿ ಕಾರ್ಯಕ್ರಮ ಆಗಿದೆ. ಚನ್ನಪಟ್ಟಣ ಒಂದಕ್ಕೆ ಏಕೆ ರಾಜಕೀಯ ನಡೆಯುತ್ತಿದೆ. ಚಿಲ್ಲರೆ ರಾಜಕೀಯ ಚನ್ನಪಟ್ಟಣದಲ್ಲಿ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಹಳ್ಳಿಗಳಿಗೆ ಹೋದರೆ ಡಬಲ್‌ ಎಂಜಿನ್‌ ವೈಫಲ್ಯ ತಿಳಿಯುತ್ತೆ: ಎಚ್‌ಡಿಕೆ

ರಾಮಮಂದಿರ ನಾನೇ ನಿರ್ಮಿಸಬೇಕು: ಬಿಜೆಪಿಯವರು ಬಜೆಟ್‌ನಲ್ಲಿ ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಘೋಷಣೆ ಮಾಡಿದ್ದಾರೆ. ಆದರೆ ಮುಂದೆ ರಾಮಮಂದಿರ ನಾನೇ ನಿರ್ಮಾಣ ಮಾಡಬೇಕು. ಅವರು ಮೂರು ವರ್ಷದಿಂದ ಕೆಲಸ ಮಾಡಿ ರಾಮಮಂದಿರ ಕಟ್ಟಿದ್ದರೆ ಮೆಚ್ಚುತ್ತಿದ್ದೆ. ಇದೀಗ ಚುನಾವಣೆ ಎರಡು ತಿಂಗಳು ಇರಬೇಕಾದರೆ ಘೋಷಣೆ ಮಾಡಿದ್ದಾರೆ. ಇದು ಬಜೆಟ್‌ ಬುಕ್‌ನಲ್ಲೇ ಇರುತ್ತದೆ. ಮುಂದಿನ ಚುನಾವಣೆಯಲ್ಲಿ ಯಾವ ಸರ್ಕಾರ ಬರುತ್ತೆ ಅನ್ನೋದು ನನಗೆ ಗೊತ್ತಿದೆ. ಅವರು ಘೋಷಣೆ ಮಾಡಿದರೂ ನಾನೇ ರಾಮಮಂದಿರ ನಿರ್ಮಾಣ ಮಾಡಬೇಕು. ರಾಮನಗರದಲ್ಲಿ ಬಂದು ರಾಮಮಂದಿರ ನಿರ್ಮಾಣ ಮಾಡಿದರೆ ಬಿಜೆಪಿ ಅ​ಧಿಕಾರಕ್ಕೆ ಬರೋಕಾಗುತ್ತಾ? ರಾಮನಗರ, ಮಂಡ್ಯದಲ್ಲಿ ಬಂದು ಡೈನಾಮೆಟ್‌ ಇಟ್ಟು ಛಿದ್ರ ಮಾಡುತ್ತೇನೆ ಅಂದರೆ ಅದು ಆಗುತ್ತಾ..? ಈ ಭಾಗದ ಜನರಿಗೆ ದೇವೆಗೌಡರ ಕುಟುಂಬದ ಮೇಲೆ ವಿಶೇಷÜ ಅಭಿಮಾನ ಇದೆ. ಈ ಹಿಂದೆ ರಾಮನಗರ ಹೇಗಿತ್ತು ಈಗ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

click me!