
ನವದೆಹಲಿ(ಮಾ.24) ರಾಹುಲ್ ಗಾಂಧಿ ಅನರ್ಹ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಹಾಗೂ ಕಾನೂನಿನ ಲಾಭ ಪಡೆದುಕೊಂಡು ಈ ಕ್ರಮ ಕೈಗೊಂಡಿದೆ. ಬಿಜೆಪಿ ಸರ್ಕಾರ ಬಹಳ ಯೋಚನೆ ಮಾಡಿ, ಉದ್ದೇಶಪೂರ್ವಕವಾಗಿ ನಿರ್ಭೀತವಾಗಿ ಮಾತನಾಡುವ ರಾಹುಲ್ ಗಾಂಧಿಯ ಸದ್ದಡಗಿಸುವ ಪ್ರಯತ್ನ ಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ. ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ ಪ್ರಕರಣದ ಕುರಿತು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್, ಇದು ರಾಜಕೀಯ ಪ್ರೇರಿತ ಎಂದು ಆರೋಪಿಸಿದೆ.
ರಾಹುಲ್ ಗಾಂಧಿ ಪ್ರತಿ ವಿಚಾರವನ್ನು ಯಾವುದೇ ವಿಚಾರವನ್ನು ರಹಸ್ಯವಾಗಿದೆ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಮಾತುಗಳು ಬಿಜೆಪಿಗೆ ಪ್ರತಿ ಭಾರಿ ಹಿನ್ನಡೆ ತಂದಿದೆ. ರಾಹುಲ್ ಗಾಂಧಿ ಮಾತಿನಿಂದ ಬಿಜೆಪಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದರೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ದೇಶ ಪ್ರೇಮದ ಹೆಸರಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ. ಅದಾನಿ ಪ್ರಕರಣವನ್ನು ಮುಚ್ಚಿಹಾಕಲು ಬಿಜೆಪಿ ಸರ್ಕಾರ ಇದೀಗ ಅನರ್ಹ ನಾಟಕ ಆಡಿದೆ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಗ್ವಿ ಹೇಳಿದ್ದಾರೆ.
Rahul Gandhi ಪಾಲಿಗೆ ಆರಂಭ ಮಾತ್ರ, ಮಾಜಿ ಸಂಸದನ ಮೇಲಿದೆ ಇನ್ನೂ ನಾಲ್ಕು ಮಾನಹಾನಿ ಕೇಸ್!
ಡಿಮಾನಿಟೈಸೇಶನ್, ಚೀನಾ, ಜಿಎಸ್‌ಟಿ, ಅದಾನಿ ಪ್ರಕರಣ ಯಾವುದೇ ಇದ್ದರೂ ರಾಹುಲ್ ಗಾಂಧಿ ನಿರ್ಭೀತವಾಗಿ ಮಾತನಾಡುತ್ತಾರೆ. ಇದರಿಂದ ರಾಹುಲ್ ಗಾಂಧಿ ಸದ್ದಡಗಿಸಲು ಬಿಜೆಪಿ ಈ ರೀತಿಯ ಕುತಂತ್ರ ಮಾಡುತ್ತಿದೆ. ವಿದೇಶದಲ್ಲಿ ಭಾಷಣ ಮಾಡಿ ಮರಳಿದ ಬಳಿಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅತೀ ದೊಡ್ಡ ಷಡ್ಯಂತ್ರ ಮಾಡಿದೆ. ವಿದೇಶದಿಂದ ಮರಳಿ ಅಧಿವೇಶನಕ್ಕೆ ಆಗಮಿಸಿದಾಗ ಕ್ಷಮೆಯಾಚನೆಗೆ ಬಿಜೆಪಿ ಪಟ್ಟು ಹಿಡಿದಿತ್ತು. ಇದೀಗ ಅನರ್ಹಗೊಳಿಸಿದೆ. ಇವೆಲ್ಲವೂ ಬಿಜೆಪಿಯ ಷಡ್ಯಂತ್ರ ಎಂದು ಅಭಿಷೇಕ್ ಮನುಸಿಂಗ್ವಿ ಹೇಳಿದ್ದಾರೆ.
ಕಾನೂನಾತ್ಮಕ ವಿಚಾರದ ಬಗ್ಗೆ ಮಾತನಾಡುವುದಾದರೆ, ಪ್ರತಿಯೊಬ್ಬರು ತಪ್ಪುಗಳನ್ನು ಮಾಡುತ್ತಾರೆ. ಉತ್ತರ ಪ್ರದೇಶದ ಬಿಜೆಪಿ ನಾಯಕನ ವಿರುದ್ಧ ಸುಪ್ರೀಂ ಕೋರ್ಟ್ ದೋಷಿ ಎಂದು ತೀರ್ಪು ನೀಡಿತ್ತು. ಉಪಚುನಾವಣೆಯನ್ನು ಘೋಷಿಸಲಾಗಿದೆ. ಆದರೆ ಬಿಜೆಪಿ ನಾಯಕನಿಗೆ ಎಲ್ಲಾ ರೀತಿಯ ಕಾನೂನು ಅವಕಾಶ ಸಿಕ್ಕಿತ್ತು. ಕೋಲಾರದಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಆದರೆ ಪ್ರಕರಣ ದಾಖಲಾಗಿರುವುದು ಸೂರತ್‌ನಲ್ಲಿ. ಸೂರತ್ ಕೋರ್ಟ್‌ಗೆ ಈ ಪ್ರಕರಣದಲ್ಲಿ ತನಿಖೆ ನಡೆಸುವ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿಲ್ಲ. ಇದನ್ನು ಸೂರತ್‌ನಲ್ಲಿ ಹೇಗೆ ತೀರ್ಪು ನೀಡಲು ಸಾಧ್ಯ. ಈ ಪ್ರಕರಣದಲ್ಲಿ ಯಾವುದೇ ವಿಚಾರಣೆ ನಡೆಸದೆ ತ್ವರಿತವಾಗಿ ತೀರ್ಪು ಘೋಷಿಸಲಾಗಿದೆ ಎಂದು ಅಭಿಷೇಕ್ ಮನು ಸಿಂಗ್ವಿ ಹೇಳಿದ್ದಾರೆ.
Breaking: ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ!
ಎಪ್ರಿಲ್ 16, 2019ರಲ್ಲಿ ಸೂರತ್‌ನಲ್ಲಿ ಪ್ರಕರಣ ದಾಖಲಾಗಿತ್ತು. 2021ರಲ್ಲಿ ರಾಹುಲ್ ಗಾಂಧಿ ಸೂರತ್ ಕೋರ್ಟ್‌ನಲ್ಲಿ ತಮ್ಮ ಹೇಳಿಕೆ ನೀಡಿದ್ದರು. 2022ರಲ್ಲಿ ದೂರುದಾರ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ದೂರು ನೀಡಿದ್ದರು. ಆದರೆ ಈ ದೂರನ್ನು ಕೋರ್ಟ್ ತಿರಸ್ಕರಿಸಿತು. 11 ತಿಂಗಳ ಬಳಿಕ ದೂರುದಾರ ಫೆಬ್ರವರಿ 16ರಂದು ತಡೆಯಾಜ್ಞೆ ಹಿಂಪಡೆಯಲು ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿದ ಬಳಿಕ, ತ್ವರಿತಗತಿಯಲ್ಲಿ ತೀರ್ಪು ನೀಡಲಾಗಿದೆ ಎಂದು ಸಿಂಗ್ವಿ ಹೇಳಿದ್ದಾರೆ.
ರಾಹುಲ್ ಗಾಂಧಿ ಅನರ್ಹಗೊಳಿಸಲು ಆರ್ಟಿಕಲ್ 103 ಪ್ರಕಾರ ಚುನಾವಣಾ ಆಯೋಗ ಹಾಗೂ ರಾಷ್ಟ್ರಪತಿ ಅಭಿಪ್ರಾಯ ಕೇಳಬೇಕು. ಆದರೆ ಕ್ರಿಮಿನಲ್ ಕೇಸ್ ಇದ್ದರೆ ರಾಷ್ಟ್ರಪತಿ ಅಭಿಪ್ರಾಯ ಕೇಳುವ ಅಗತ್ಯವಿಲ್ಲ. ಇಲ್ಲಿ ಕೋರ್ಟ್ ತೀರ್ಪು ಬಂದ ಮರುದಿನವೇ ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಗೊಳಿಸಲಾಗಿದೆ. ಎಲ್ಲಾ ವಿಚಾರದಲ್ಲಿ ಬಿಜೆಪಿ ತ್ವರಿತವಾಗಿ ಕ್ರಮಗೊಳ್ಳುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.