ಬಳ್ಳಾರಿಯಿಂದ ಸ್ಪರ್ಧಿಸುವಂತೆ ದಿವಾಕರ ಬಾಬು ಆಹ್ವಾನ: ಚುನಾವಣೆಗೆ ಇನ್ನೂ ಸಮಯವಿದೆ ನೋಡೋಣ ಎಂದ ಸಿದ್ದರಾಮಯ್ಯ!

Published : Mar 24, 2023, 03:21 PM IST
ಬಳ್ಳಾರಿಯಿಂದ ಸ್ಪರ್ಧಿಸುವಂತೆ ದಿವಾಕರ ಬಾಬು ಆಹ್ವಾನ: ಚುನಾವಣೆಗೆ ಇನ್ನೂ ಸಮಯವಿದೆ ನೋಡೋಣ ಎಂದ ಸಿದ್ದರಾಮಯ್ಯ!

ಸಾರಾಂಶ

ಸಿನಿಯಾರಿಟಿ ಮೇಲೆ ನನಗೆ ಟಿಕೆಟ್ ಸಿಗೋದು ಗ್ಯಾರಂಟಿ. ಆದ್ರೇ ಸಿದ್ದರಾಮಯ್ಯ ಬಳ್ಳಾರಿಗೆ ಬರೋದು ಸೂಕ್ತವಾಗಿದೆ. ಬಳ್ಳಾರಿ ಡೆವಲಪ್ಮೆಂಟ್ ಗೆ ಸಿದ್ದರಾಮಯ್ಯ ಬಳ್ಳಾರಿ ಗೆ ಬಂದ್ರೇ ಸೂಕ್ತ ಎಂದಿದ್ದಾರೆ. ಅಲ್ಲದೇ ಇಂಡಸ್ಟ್ರೀಸ್ ಡೆವಲಪ್ಮೆಂಟ್  ಮತ್ತು ಬಳ್ಳಾರಿಯ ಡೆವಲಪ್ಮೆಂಟ್ ಮಾಡೋಕೆ ಸಿದ್ದರಾಮಯ್ಯ ಬರಬೇಕಿದೆ ಎಂದು ಮಾಜಿ ಸಚಿವ ದಿವಾಕರ ಬಾಬು ಆಹ್ವಾನ ನೀಡಿದದ್ದಾರೆ.

ವರದಿ : ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಮಾ.24) : ಈಗಾಗಲೇ ಸಿದ್ದರಾಮಯ್ಯ ಅವರಿಗೆ ರಾಜ್ಯದ ಹಲವು ಭಾಗದಿಂದ ಸ್ಪರ್ಧೆ ಮಾಡೋಕೆ ಆಹ್ವಾನ ಬಂದಿದ್ದು, ಇದೀಗ  ಬಳ್ಳಾರಿಯಿಂದಲೂ ಸ್ಪರ್ಧೆ ಮಾಡುವಂತೆ ಆಹ್ವಾನಿಸಲಾಗಿದೆ.

2010 ರಲ್ಲಿ ಬಳ್ಳಾರಿ ಪಾದಯಾತ್ರೆ ಮಾಡೋ ಮೂಲಕ ಮುಖ್ಯಮಂತ್ರಿಯಾದರು. ಬಳ್ಳಾರಿಗೆ(Bellary) ಬಂದಾಗಲೇಲ್ಲ ಸಿದ್ದರಾಮಯ್ಯ(Siddaramaiah)ಗೆ ಒಳ್ಳೆಯದಾಗಿದೆ. ಹೀಗಾಗಿ ಬಳ್ಳಾರಿಗೆ ಬನ್ನಿ ಎಂದು ಮಾಜಿ ಸಚಿವ ದಿವಾಕರ ಬಾಬು(Divakar babu)  ಸಿದ್ದರಾಮಯ್ಯಗೆ ಆಹ್ವಾನ ನೀಡಿದ್ದಾರೆ. ಈ ಬಗ್ಗೆ  ಸಿದ್ದರಾಮಯ್ಯ ಕೂಡ
 ಚುನಾವಣೆ(Karnataka assembly election)ಗೆ ಸಮಯವಿದೆ ನೋಡೋಣ ಎಂದಿದ್ದಾರಂತೆ.

 

ಕೋಲಾರ ಬಿಟ್ಟು ಬಾದಾಮಿ ಬಿಟ್ಟು ಇನ್ಯಾವುದು? ಕಡೂರು ಕ್ಷೇತ್ರ ಅಂತಿದ್ದಾರೆ ಸಿದ್ದರಾಮಯ್ಯ!

ಬಾಲದಂತೆ ಉದ್ದವಿರೋ ಆಕಾಂಕ್ಷಿಗಳ ಸಂಖ್ಯೆ:

ಈ ಬಾರಿ ಕಾಂಗ್ರೆಸ್(Congress) ಅಧಿಕಾರಕ್ಕೆ ಬಂದೇ ಬರುತ್ತದೆ ಎನ್ನುವ ನಿಟ್ಟಿನಲ್ಲಿ ಬಳ್ಳಾರಿ ನಗರ ಕ್ಷೇತ್ರ(Bellary city constituency)ದಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಆದ್ರೇ, ಬಳ್ಳಾರಿ ನಗರದ ಎಲ್ಲ ಆಕಾಂಕ್ಷಿಗಳಿಗೆ ಮಾಸ್ಟರ್ ಸ್ಟ್ರೋಕ್ ನೀಡಿರೋ ದಿವಾಕರ ಬಾಬು  ನೇರವಾಗಿ ಸಿದ್ದರಾಮಯ್ಯ ನವರನ್ನು ಆಹ್ವಾನ ನೀಡೋ ಮೂಲಕ ಹೊಸದೊಂದು ಚರ್ಚೆ ಹುಟ್ಟು ಹಾಕಿದ್ದಾರೆ. 

ಇನ್ನೂ ಸಿದ್ದರಾಮಯ್ಯ ಆಹ್ವಾನಕ್ಕೂ ಮುನ್ನ ಬಳ್ಳಾರಿಯ ಹಿರಿಯ ನಾಯಕರಾದ ಅಲ್ಲಂ ವೀರಭದ್ರಪ್ಪ, ಸೂರ್ಯನಾರಾಯಣ ರೆಡ್ಡಿ ಸೇರಿದಂತೆ ಹಲವಾರ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡಿದ್ದಾರಂತೆ.  ಇನ್ನೂ ದಿವಾಕರ ಬಾಬು ಹೇಳೋ ಪ್ರಕಾರ ಕಾಂಗ್ರೆಸ್ ಪಟ್ಟಿ ಮುಂದಿನ ವಾರ ರಿಲೀಸ್ ಅಗಲಿದೆ ಬಳ್ಳಾರಿಯಲ್ಲಿ ಅತಿಹೆಚ್ಚು ಆಕಾಂಕ್ಷಿಗಳಿದ್ದಾರೆ. ಖಚಿತವಾಗಿ ಕಾಂಗ್ರೆಸ್ ಗೆಲ್ಲುತ್ತದೆ ಹೀಗಾಗಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ ಎಂದಿದ್ದಾರೆ.

ಸಿನಿಯಾರಿಟಿ ಮೇಲೆ ನನಗೆ ಟಿಕೆಟ್ ಸಿಗೋದು ಗ್ಯಾರಂಟಿ. ಆದ್ರೇ ಸಿದ್ದರಾಮಯ್ಯ ಬಳ್ಳಾರಿಗೆ ಬರೋದು ಸೂಕ್ತವಾಗಿದೆ. ಬಳ್ಳಾರಿ ಡೆವಲಪ್ಮೆಂಟ್ ಗೆ ಸಿದ್ದರಾಮಯ್ಯ ಬಳ್ಳಾರಿ ಗೆ ಬಂದ್ರೇ ಸೂಕ್ತ ಎಂದಿದ್ದಾರೆ. ಅಲ್ಲದೇ ಇಂಡಸ್ಟ್ರೀಸ್ ಡೆವಲಪ್ಮೆಂಟ್  ಮತ್ತು ಬಳ್ಳಾರಿಯ ಡೆವಲಪ್ಮೆಂಟ್ ಮಾಡೋಕೆ ಸಿದ್ದರಾಮಯ್ಯ ಬರಬೇಕಿದೆ ಎಂದಿದ್ದಾರೆ.

ಕೊಪ್ಪಳ, ಕುಷ್ಠಗಿಯಿಂದ ಸ್ಪರ್ಧೆ?: ಸಿದ್ದರಾಮಯ್ಯ ಗೆಲುವಿನ ಸೂತ್ರಕ್ಕೆ ಹೀಗಿದೆ ಜಾತಿ ಲೆಕ್ಕಾಚಾರ!

ರಾಜ್ಯದಲ್ಲಿ ಎಲ್ಲೇ ಸ್ಪರ್ಧೆ ಮಾಡಿದ್ರೂ ಸಿದ್ದರಾಮಯ್ಯ ಗೆಲ್ತಾರೆ

ಸಿದ್ದರಾಮಯ್ಯ ರಾಜ್ಯದಲ್ಲಿ ಸ್ಪರ್ದೆ ಮಾಡೋಕೆ ಸ್ಥಳವಿಲ್ಲ ಅನ್ನೋದಲ್ಲ. ಅವರು ಮಗನಿಗೆ ವರುಣಾ ಬಿಟ್ಟು ಬರಬೇಕು. ಹಿಂದೆ ಹಿರಿಯ ನಾಯಕರು ಬಳ್ಳಾರಿಗೆ ಬಂದು ಸ್ಪರ್ಧೆ ಮಾಡಿದ ಉದಾಹರಣೆ ಇದೆ ಎಂದು  ಸೋನಿಯಾಗಾಂಧಿ(Soniya gandhi)ಚುನಾವಣೆ ಉದಾಹರಣೆ ನೀಡಿದರು. ಅಲ್ಲದೇ ಸೋನಿಯಾ ಗಾಂಧಿ ಚುನಾವಣೆ ಬಳಿಕ ಬಳ್ಳಾರಿಗೆ ಸಾಕಷ್ಟು ಅನುದಾನ ಹರಿದು ಬಂದಿತ್ತು. ಅಲ್ಲದೇ ಮತ್ತೊಮ್ಮೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಬಳ್ಳಾರಿಯಿಂದಲೇ ಸ್ಪರ್ಧೆ ಮಾಡಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌