Karnataka election 2023: ದಲಿತರ ಪಾಲಿಗೆ ಕಾಂಗ್ರೆಸ್‌ ಸುಡುವ ಮನೆ ಇದ್ದಂತೆ: ನಾರಾ​ಯಣಸ್ವಾಮಿ

By Kannadaprabha News  |  First Published Mar 24, 2023, 2:14 PM IST

ಕಾಂಗ್ರೆಸ್‌ ದಲಿತರ ಪಾಲಿಗೆ ಸುಡುವ ಮನೆ ಇದ್ದಂತೆ. ಅದರ ಸಂಸ್ಕೃತಿಯೇ ಅಂತದ್ದು. ನಾನು 40 ವರ್ಷಗಳಿಂದ ಆ ಪಕ್ಷದಲ್ಲಿದ್ದು ಅನುಭವಿಸಿದ್ದೇನೆ. ಇನ್ನು ಮುಂದಾದರೂ ದಲಿತರು ಜಾಗ್ರತರಾಗಬೇಕು ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.


ಶಿರಹಟ್ಟಿ (ಮಾ.24) : ಕಾಂಗ್ರೆಸ್‌ ದಲಿತರ ಪಾಲಿಗೆ ಸುಡುವ ಮನೆ ಇದ್ದಂತೆ. ಅದರ ಸಂಸ್ಕೃತಿಯೇ ಅಂತದ್ದು. ನಾನು 40 ವರ್ಷಗಳಿಂದ ಆ ಪಕ್ಷದಲ್ಲಿದ್ದು ಅನುಭವಿಸಿದ್ದೇನೆ. ಇನ್ನು ಮುಂದಾದರೂ ದಲಿತರು ಜಾಗ್ರತರಾಗಬೇಕು ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ(Chalavadi narayanaswamy) ಹೇಳಿದರು.

ಗುರುವಾರ ಶಿರಹಟ್ಟಿಪಟ್ಟಣದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಎಸ್‌ಸಿ, ಎಸ್‌ಟಿ, ಒಬಿಸಿ ಮೋರ್ಚಾಗಳ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

Tap to resize

Latest Videos

undefined

ಜಿಎಸ್‌ ಪಾಟೀಲ ಶಾಸಕರಾಗಬೇಕು, ಸಿದ್ರಾಮಯ್ಯ ಸಿಎಂ ಆಗಬೇಕು: ಅಂಬೇಗಾಲಲ್ಲಿ ಕಾಲಕಾಲೇಶ್ವರ ಬೆಟ್ಟವೇರಿದ ಯುವಕ!

ಸಿದ್ದರಾಮಯ್ಯ(Siddaramaiah) ಸಿಎಂ ಆಗಿದ್ದಾಗ ಎಸ್‌ಸಿಪಿ, ಟಿಎಸ್‌ಪಿ ಯೋಜನೆ(TSP Scheme) ಅಡಿಯಲ್ಲಿ ಈ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಬಜೆಟ್‌ನಲ್ಲಿ . 26 ಸಾವಿರ ಕೋಟಿ ಅನುದಾನ ತೆಗೆದಿಟ್ಟಿದ್ದರು. ಈ ಹಣವನ್ನು ವರ್ಷದಲ್ಲಿ ಖರ್ಚುಮಾಡದೇ ಇರುವುದರಿಂದ ಮೆಟ್ರೋ ಅಭಿವೃದ್ಧಿಗೆ . 10 ಸಾವಿರ ಕೋಟಿ, ರಸ್ತೆ ಅಭಿವೃದ್ಧಿಗೆ . 5 ಸಾವಿರ ಕೋಟಿ, ಕೆರೆ ಹೂಳು ತೆಗೆಯಲು . 5 ಸಾವಿರ ಕೋಟಿ ಅಂತ ಒಟ್ಟು 20 ಸಾವಿರ ಕೋಟಿ ಖರ್ಚು ಮಾಡಿದ್ದು, ಉಳಿದ 6 ಸಾವಿರ ಕೋಟಿಯಲ್ಲಿ ಮಾತ್ರ ಹಿಂದುಳಿದ ಜನಾಂಗದ ಅಭಿವೃದ್ಧಿಗೆ ಬಳಕೆ ಮಾಡಿದ್ದು, ಇದು ದಲಿತ, ಹಿಂದುಳಿದ, ಅಲ್ಪ ಸಂಖ್ಯಾತರಿಗೆ ಮಾಡಿದ ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿದರು.

ರಾಜ್ಯದಾದ್ಯಂತ 7 ಮೋರ್ಚಾಗಳ ಸಮಾವೇಶಗಳು ನಡೆಯುತ್ತಿವೆ. 4 ರಥಯಾತ್ರೆಗಳು ನಡೆಯುತ್ತಿದೆ. ಮತದಾರರು ಕೂಡ ಜಾಗ್ರತರಾಗಿದ್ದು, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಮತ್ತೆ ಪ್ರಧಾನಿ

ದೇಶ, ಸಂಸ್ಕೃತಿಯ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು. ಕರ್ನಾಟಕದಲ್ಲಿ ಬಿಜೆಪಿ(Karnataka BJP) ಪೂರ್ಣ ಬಹುಮತ ಪಡೆಯುವಂತಾಗಬೇಕು. ಬಿಜೆಪಿ ಅಭಿವೃದ್ಧಿ ಕಾರ್ಯಗಳಿಂದ ಜನಮನ್ನಣೆ ಗಳಿಸಿದೆ. ರಾಜ್ಯದಲ್ಲಿ ಬಿಜೆಪಿ ಈ ಬಾರಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಹೇಳಿದರು.

ಗದಗನಲ್ಲಿ ಎಚ್‌.ಕೆ.ಪಾಟೀಲರ ಪಾರಮ್ಯ ಮುರಿಯುವುದು ಬಿಜೆಪಿಗೆ ಸವಾಲು..!

ಶಾಸಕ ರಾಮಣ್ಣ ಲಮಾಣಿ, ಮಹೇಂದ್ರ ಕೌತಾಳ, ಮಂಜುನಾಥ ಓಲೇಕಾರ, ರವಿ ದಂಡಿನ, ಫಕ್ಕೀರೇಶ ರಟ್ಟಿಹಳ್ಳಿ ಮಾತನಾಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಲಿಂಗರಾಜ ಪಾಟೀಲ, ಹೇಮಗಿರೀಶ ಹಾವಿನಾಳ, ಜಾನು ಲಮಾಣಿ, ನಾಗರಾಜ ಲಕ್ಕುಂಡಿ, ಸಂತೋಷ ಅಕ್ಕಿ, ಉಷಾ ದಾಸರ, ಮೋಹನ್‌ ಗುತ್ತೆಮ್ಮನವರ, ರಾಮಣ್ಣ ಡಂಬಳ, ಅಶೋಕ ಹೆಬ್ಬಳ್ಳಿ, ವಿರೂಪಕ್ಷಪ್ಪ ಅಣ್ಣಿಗೇರಿ ಸೇರಿ ಅನೇಕರು ಇದ್ದರು.

click me!