ಬಿಜೆಪಿ ಸೋಲಿಸಲು ವಿಪಕ್ಷಗಳಿಗೆ 3 ಸಲಹೆ ಕೊಟ್ಟ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್

By BK AshwinFirst Published Mar 20, 2023, 8:25 PM IST
Highlights

2024ರಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟು ಅಸ್ಥಿರ ಮತ್ತು ಸೈದ್ಧಾಂತಿಕವಾಗಿ ಭಿನ್ನವಾಗಿರುವುದರಿಂದ ಅದು ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ.

ನವದೆಹಲಿ (ಮಾರ್ಚ್‌ 20, 2023): 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ಈಗಿನಿಂದಲೇ ನಾನಾ ತಯಾರಿಗಳನ್ನು ನಡೆಸುತ್ತಿದೆ. ತೃತೀಯ ರಂಗ ರಚನೆ ಅಥವಾ ಬಿಜೆಪಿ ವಿರುದ್ಧ ಎಲ್ಲ ಪಕ್ಷಗಳು ಸೇರಿ ಹೋರಾಟ ಮಾಡಲು ಸಹ ಪ್ಲ್ಯಾನ್‌ಗಳು ನಡೀತಿವೆ. ಈ ಪ್ಲ್ಯಾನ್‌ಳು ಕೆಲಸ ಮಾಡಲ್ಲ ಎಂದು ಪ್ರಶಾಂತ್‌ ಕಿಶೋರ್‌ ಹೇಳಿಕೊಂಡಿದ್ದಾರೆ. ಅಲ್ಲದೆ, ಬಿಜೆಪಿ ಸೋಲಿಸಲು ಅವರು ವಿಪಕ್ಷಗಳಿಗೆ 3 ಸಲಹೆಗಳನ್ನು ನೀಡಿದ್ದಾರೆ.

2024 ರಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟು ಅಸ್ಥಿರ ಮತ್ತು ಸೈದ್ಧಾಂತಿಕವಾಗಿ ಭಿನ್ನವಾಗಿರುವುದರಿಂದ ಅದು "ಎಂದಿಗೂ ಕೆಲಸ ಮಾಡುವುದಿಲ್ಲ" ಎಂದು ಪ್ರಶಾಂತ್ ಕಿಶೋರ್ ಇಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಿಂದಾದ ಪ್ರಯೋಜನಗಳನ್ನು ಸಹ ಚುನಾವಣಾ ತಂತ್ರಜ್ಞ ಪ್ರಶ್ನಿಸಿದ್ದಾರೆ.

ಇದನ್ನು ಓದಿ: From the India Gate: ಅಧಿಕಾರಿ ಸಸ್ಪೆಂಡ್‌, ಮೇಲಿನವರು ಸೇಫ್‌: ತೃತೀಯ ರಂಗ ಬಲಗೊಳಿಸಲು ಮತ್ತೆ ‘ದೀದಿ’ ಯತ್ನ..!

ಪ್ರತಿಪಕ್ಷಗಳ ಒಗ್ಗಟ್ಟು ಅನ್ನೋದು ಕೇವಲ ಒಂದು ಮುಖವಾಗಿದ್ದು, ಪಕ್ಷಗಳು ಅಥವಾ ನಾಯಕರನ್ನು ಒಟ್ಟಿಗೆ ಸೇರಿಸಿದ ಕೂಡಲೇ ಅದು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ. ಈ ವೇಳೆ, ಬಿಜೆಪಿಯನ್ನು ಸೋಲಿಸುವುದು ಹೇಗೆ ಎಂಬ 3 ಸಲಹೆಗಳನ್ನು ನೀಡಿದ್ದಾರೆ ಪ್ರಶಾಂತ್‌ ಕಿಶೋರ್‌.

"ನೀವು ಬಿಜೆಪಿಗೆ ಸವಾಲು ಹಾಕಬೇಕಾದರೆ, ನೀವು ಹಿಂದುತ್ವ, ರಾಷ್ಟ್ರೀಯತೆ ಮತ್ತು ಕಲ್ಯಾಣವಾದ ಎಂಬ ಅದರ 3 ಶಕ್ತಿಗಳನ್ನು ಅರ್ಥಮಾಡಿಕೊಳ್ಳಬೇಕು. ಇದು ಕೇಸರಿ ಪಕ್ಷದ ಮೂರು ಹಂತದ ಸ್ತಂಭವಾಗಿದೆ. ನೀವು ಈ ಪೈಕಿ ಎರಡು ಹಂತಗಳನ್ನಾದರೂ ಭೇದಿಸಲು ಸಾಧ್ಯವಾಗದಿದ್ದರೆ, ನೀವು ಬಿಜೆಪಿಗೆ ಸವಾಲು ಹಾಕಲು ಸಾಧ್ಯವಿಲ್ಲ " ಎಂದು ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಇದನ್ನೂ ಓದಿ: ಕೈ ನಾಯಕನಿಗೆ ಶಾಕ್: ರಾಹುಲ್‌ ಗಾಂಧಿ ಮನೆಗೆ ದೌಡಾಯಿಸಿದ ದೆಹಲಿ ಪೊಲೀಸರು..!

ಹಿಂದುತ್ವ ಸಿದ್ಧಾಂತದ ವಿರುದ್ಧ ಹೋರಾಡಲು ಸಿದ್ಧಾಂತಗಳ ಒಕ್ಕೂಟ ಇರಬೇಕು. ಉದಾಹರಣೆಗೆ, ಗಾಂಧಿವಾದಿಗಳು, ಅಂಬೇಡ್ಕರ್‌ವಾದಿಗಳು, ಸಮಾಜವಾದಿಗಳು, ಕಮ್ಯುನಿಸ್ಟರು.. ಸಿದ್ಧಾಂತ ಬಹಳ ಮುಖ್ಯ. ಆದರೂ, ಸಿದ್ಧಾಂತದ ಆಧಾರದ ಮೇಲೆ ನೀವು ಕುರುಡು ನಂಬಿಕೆಯನ್ನು ಹೊಂದಲು ಸಾಧ್ಯವಿಲ್ಲ ಎಂದೂ ಪ್ರಶಾಂತ್‌ ಕಿಶೋರ್‌ ಹೇಳಿಕೊಂಡಿದ್ದಾರೆ.

"ಮಾಧ್ಯಮಗಳಲ್ಲಿ ನೀವು ಪಕ್ಷಗಳು ಅಥವಾ ನಾಯಕರ ಒಟ್ಟುಗೂಡಿಸುವಿಕೆಯನ್ನು, ಪ್ರತಿಪಕ್ಷಗಳ ಮೈತ್ರಿಯನ್ನು ನೋಡುತ್ತಿದ್ದೀರಿ. ಯಾರು ಯಾರೊಂದಿಗೆ ಊಟ ಮಾಡುತ್ತಾರೆ, ಯಾರನ್ನು ಚಹಾಕ್ಕೆ ಆಹ್ವಾನಿಸುತ್ತಾರೆ ... ನಾನು ಅದನ್ನು ಸಿದ್ಧಾಂತದ ರಚನೆಯಲ್ಲಿ ನೋಡುತ್ತೇನೆ. ಅಂತಹ ಸಮಯದವರೆಗೆ ಸೈದ್ಧಾಂತಿಕ ಹೊಂದಾಣಿಕೆ ಆಗುವುದಿಲ್ಲ,  ಹಾಗೂ ಅಲ್ಲಿಯವರೆಗೆ, ಬಿಜೆಪಿಯನ್ನು ಸೋಲಿಸಲು ಯಾವುದೇ ಮಾರ್ಗವಿಲ್ಲ ಎಂದೂ ಅವರು ಸಂದರ್ಶನದಲ್ಲಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ನೆಹರೂ ಕುಟುಂಬ ಕುರಿತ ಹೇಳಿಕೆ: ಮೋದಿ ವಿರುದ್ಧ ಕಾಂಗ್ರೆಸ್‌ ಪಕ್ಷದಿಂದ ಹಕ್ಕಚ್ಯುತಿ ಅಸ್ತ್ರ

ಹಾಗೆ, ತನ್ನ ಸ್ವಂತ ಸಿದ್ಧಾಂತವು ಮಹಾತ್ಮ ಗಾಂಧಿಯವರ ಸಿದ್ಧಾಂತವಾಗಿದ್ದು, ಬಿಹಾರದಲ್ಲಿ ನಡೆದ "ಜನ್ ಸೂರಾಜ್ ಯಾತ್ರೆ" ಗಾಂಧಿಯವರ ಕಾಂಗ್ರೆಸ್ಸಿನ ಸಿದ್ಧಾಂತವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು. 2014 ರಿಂದ ಚುನಾವಣಾ ವಿಜಯಗಳೊಂದಿಗೆ CV ತುಂಬಿಕೊಂಡಿರುವ ಚುನಾವಣಾ ತಂತ್ರಗಾರ, ಬಿಹಾರದಲ್ಲಿ "ಜನ್ ಸೂರಾಜ್ ಯಾತ್ರೆ" ಯಲ್ಲಿ ಪ್ರವಾಸ ಮಾಡುತ್ತಿದ್ದು, ರಾಜ್ಯವನ್ನು ಅರ್ಥಮಾಡಿಕೊಳ್ಳುವ ಮತ್ತು ಹೊಸ ರಾಜಕೀಯ ವ್ಯವಸ್ಥೆಯನ್ನು ರಚಿಸುವ ಪ್ರಯತ್ನ ಎಂದು ಅವರು ಒತ್ತಾಯಿಸಿದ್ದಾರೆ.

ಇನ್ನು, ರಾಹುಲ್‌ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ಚುನಾವಣಾ ತಂತ್ರಜ್ಞ, "ಇದು ಕೇವಲ ನಡಿಗೆ ಮಾತ್ರವಲ್ಲ. 6 ತಿಂಗಳ ಭಾರತ್ ಜೋಡೋ ಯಾತ್ರೆಯಲ್ಲಿ ಸಾಕಷ್ಟು ಪ್ರಶಂಸೆ ಮತ್ತು ಟೀಕೆಗಳು ಬಂದವು. 6 ತಿಂಗಳ ನಡಿಗೆಯ ನಂತರ ನೀವು ಸ್ವಲ್ಪವಾದರೂ ವ್ಯತ್ಯಾಸವನ್ನು ನೋಡಬೇಕಲ್ಲ..? ಆ ಯಾತ್ರೆಯು ಪಕ್ಷದ ಚುನಾವಣಾ ಭವಿಷ್ಯವನ್ನು ಸುಧಾರಿಸಲು. ಇನ್ನು, ನಾನು ಕೇವಲ ನಾಲ್ಕು ಜಿಲ್ಲೆಗಳನ್ನು ಮಾತ್ರ ಸುತ್ತಲು ಸಾಧ್ಯವಾಗಿದ್ದು, ನನಗೆ ಯಾತ್ರೆಯು ಧ್ಯೇಯವಲ್ಲ, ಆದರೆ ಪ್ರದೇಶವನ್ನು ಅರ್ಥಮಾಡಿಕೊಳ್ಳುವುದು" ಎಂದೂ ಪಿಕೆ ಎಂದು ಹೆಸರುವಾಸಿಯಾಗಿರುವ ಪ್ರಶಾಂತ್‌ ಕಿಶೋರ್‌ ಹೇಳಿದರು.

click me!