ಇಂದು ಕಾಂಗ್ರೆಸ್‌ ಪ್ರತಿಭಟನೆ: ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

By BK AshwinFirst Published Jan 23, 2023, 10:56 AM IST
Highlights

ಅನೇಕ ಪ್ರಶ್ನೆಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಹಾಗೂ, ಈ ಪ್ರಶ್ನೆಗಳಿಗೆ ಉತ್ತರ ನೀಡಿದ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಎಂದು ಬಿಜೆಪಿ ಟೀಕಿಸಿದೆ.

ಬೆಂಗಳೂರು (ಜನವರಿ 23, 2023): ‘ಭ್ರಷ್ಟಾಚಾರ ನಿಲ್ಲಿಸಿ ಬೆಂಗಳೂರು ಉಳಿಸಿ’ ಹೆಸರಿನಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಕಾಂಗ್ರೆಸ್‌ ಇಂದು ಪ್ರತಿಭಟನೆ ನಡೆಸುತ್ತಿದೆ. ರಾಜ್ಯ ಸರ್ಕಾರದ ವೈಫಲ್ಯಗಳು, ದುರಾಡಳಿತ, ಭ್ರಷ್ಟಾಚಾರವನ್ನು ವಿರೋಧಿಸಿ ಕಾಂಗ್ರೆಸ್‌ ಧರಣಿ ನಡೆಸುತ್ತಿದೆ. ಈ ಮಧ್ಯೆ, ಕಾಂಗ್ರೆಸ್‌ಗೆ ತಿರುಗೇಟು ನೀಡಲು ರಾಜ್ಯ ಬಿಜೆಪಿ ಕಾಂಗ್ರೆಸ್‌ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಕೇಸರಿ ಪಡೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಕಾಂಗ್ರೆಸ್‌ ವಿರುದ್ಧ ಸಚಿವ ಸುಧಾಕರ್‌ ಕಿಡಿ ಕಾರಿದ್ದಾರೆ.

ಕಾಂಗ್ರೆಸ್‌ ವಿರುದ್ಧ ಬಿಜೆಪಿ ಪ್ರಶ್ನೆಗಳ ಪಟ್ಟಿ ಹೀಗಿದೆ ನೋಡಿ.. ರಿಡೂ ಹೆಸರಿನಲ್ಲಿ ಲೂಟಿ ಮಾಡಿದ್ದು ಯಾರು..? ಸೋಲಾರ್ ಹಗರಣದ ರೂವಾರಿ ಯಾರು..? ಸಣ್ಣ ನೀರಾವರಿ ಇಲಾಖೆಯಲ್ಲಿ ಕಾಮಗಾರಿ ಮಾಡದೆ ಗುಳುಂ ಮಾಡಿದ್ದು ಯಾರು..? ಹಾಸಿಗೆ, ದಿಂಬಿನಲ್ಲೂ ಲಂಚ ಹೊಡೆದಿದ್ದು ಯಾರು..? 65 ವರ್ಷ ಅಧಿಕಾರ ನಡೆಸಿ ದೇಶ ಲೂಟಿ ಮಾಡಿದ ಪಕ್ಷ ಯಾವುದು..? - ಹೀಗೆ ಅನೇಕ ಪ್ರಶ್ನೆಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. 

ಇದನ್ನು ಓದಿ: ಭ್ರಷ್ಟಾಚಾರ ನಿಲ್ಲಿಸಿ ಬೆಂಗಳೂರು ಉಳಿಸಿ ಹೆಸರಿನಲ್ಲಿ ಬೆಂಗಳೂರಿನ ಹಲವೆಡೆ ನಾಳೆ ಕಾಂಗ್ರೆಸ್‌ ಪ್ರತಿಭಟನೆ

ಹಾಗೂ, ಈ ಪ್ರಶ್ನೆಗಳಿಗೆ ಉತ್ತರ ನೀಡಿದ ಬಳಿಕ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಎಂದು ಬಿಜೆಪಿ ಟೀಕಿಸಿದೆ. ಕಾಂಗ್ರೆಸ್ ಇಂದು ನಗರದ 300 ಕಡೆ ಪ್ರತಿಭಟನೆ ಮಾಡ್ತಿರುವ ಹಿನ್ನೆಲೆ, ಬಿಜೆಪಿಯಿಂದ ಪ್ರಶ್ನೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 

ಕಾಂಗ್ರೆಸ್ ಯಾವ ರೀತಿ ಭ್ರಷ್ಟಾಚಾರ ಹುಟ್ಟು ಹಾಕಿದೆ: ಸುಧಾಕರ್‌
ಇನ್ನೊಂದೆಡೆ, ಕಾಂಗ್ರೆಸ್‌ ಭ್ರಷ್ಟಾಚಾರದ ಬಗ್ಗೆ ಸಚಿವ ಸುಧಾಕರ್ ಟೀಕಿಸಿದ್ದಾರೆ. ಯಾವುದೇ ಒಂದು ಯೋಜನೆ ಮಾಡಿದ್ರೆ, ಅದರ ಹಿಂದೆ ಎಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಎಲ್ಲರಿಗೂ ಗೊತ್ತಿದೆ. 2013 ರಿಂದ ಕಾಂಗ್ರೆಸ್ ಸರ್ಕಾರ ಇದ್ದಾಗ ಎಷ್ಟೆಲ್ಲ ಭ್ರಷ್ಟಾಚಾರ ನಡೆದಿದೆ. ಆದರೆ ಇವ್ರು ಇವಾಗ ನಮ್ಮ ಮೇಲೆ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಿದ್ದಾರೆ. 2013ರಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ನಾವು ಹೇಳಿದ್ವಿ, ಹಾಗೆ ಭ್ರಷ್ಟಾಚಾರ ನಿರ್ಮೂಲನೆ ಮಾಡ್ತೀವಿ ಅಂತಾ ಅವ್ರು ಕೂಡ ಹೇಳಿದ್ರು. ಅವರ ಸರ್ಕಾರ ಇದ್ದಾಗ ರಾತ್ರೋರಾತ್ರಿ ಲೋಕಾಯುಕ್ತ ಮುಚ್ಚಿ, ಎಸಿಬಿ ರಚನೆ ಮಾಡಿದ್ರು.ಲೋಕಾಯುಕ್ತ ಸಂಸ್ಥೆಯನ್ನ ಮುಚ್ಚಿದಕ್ಕೆ ಹೈಕೋರ್ಟ್ ಛೀಮಾರಿ ಹಾಕಿತ್ತು. ಲೋಕಾಯುಕ್ತದಂತಹ ಸಂಸ್ಥೆಗಳು ರಾಜ್ಯದಲ್ಲಿ ಇರಬೇಕು ಎಂದು ತಿಳಿಸಿತ್ತು ಎಂದೂ ಸುಧಾಕರ್‌ ಟೀಕಿಸಿದ್ದಾರೆ.

ಇದನ್ನೂ ಓದಿ:  ಮಹಿಳೆಯರಿಗೆ ಕಾಂಗ್ರೆಸ್‌ ಬಂಪರ್‌ ಗಿಫ್ಟ್‌: ಮಾಸಿಕ 2 ಸಾವಿರ ರೂ. ಸಹಾಯಧನ

ಅಲ್ಲದೆ, ನಾವು ಭ್ರಷ್ಟಾಚಾರ ಮಾಡಿರೋದೆ ಆಗಿದ್ರೆ, ನಾವು ಲೋಕಾಯುಕ್ತ ಸಂಸ್ಥೆ ಪುನರ್ ಸ್ಥಾಪಿಸಲು ಸ್ಟೇ ತರುತ್ತಿದ್ವಿ. ಆದ್ರೆ ನಾವು ಬಂದು ಲೋಕಯುಕ್ತವನ್ನು ಪುನರ್ ಸ್ಥಾಪನೆ ಮಾಡಿದ್ದೇವೆ. ಭ್ರಷ್ಟಾಚಾರ ಮಾಡ್ತಿದ್ದೇವೆ ಎಂಬುದು ನಿಜವಾಗಿದ್ರೆ ಇವತ್ತು ನಾವು ಲೋಕಾಯುಕ್ತವನ್ನ ಪುನರ್ ಸ್ಥಾಪನೆ ಮಾಡುತ್ತಿರಲಿಲ್ಲ. ಆದರೆ ನಾವು ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು ಎಂದು ಪ್ರಧಾನಿಗಳು ಯಾವ ರೀತಿ ಹೇಳಿದ್ದಾರೋ, ಹಾಗೆ ನಾವು ಅದಕ್ಕೆ ಕಾಯಕಲ್ಪ ಕೊಟ್ಟಿದ್ದೇವೆ ಎಂದೂ ಆರೋಗ್ಯ ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ. 

2018ರಲ್ಲಿ ಫೈನಾನ್ಸಿಯಲ್ ಅಡಿ CAG ರಿಪೋರ್ಟ್ ಬಂದಿದೆ, ಇದನ್ನ ನಾನು ಅಥವಾ ಅಶ್ವಥ್ ನಾರಾಯಣ್ ಮಾಡ್ತಿರೋ ಆರೋಪ ಅಲ್ಲ. 2013, 2018 ರಲ್ಲಿ 35 ಸಾವಿರ ಕೋಟಿ ಫೈನಾನ್ಸಿಯಲ್ ಇರೆಗ್ಯುಲಾರಿಟಿ ಇದೆ ಅಂತ ಹೇಳಿದೆ, ರೀಡೂ ಅಂತ ಅವರ ಅನುಕೂಲಕ್ಕೆ ಹೊಸ ಪದವನ್ನೇ ಸೃಷ್ಟಿ ಮಾಡಿದ್ದಾರೆ. 10 ಸಾವಿರ ಬೆಂಗಳೂರು ನಿವಾಸಿಗಳಿಗೆ ಅನ್ಯಾಯ ಮಾಡಿದ್ದಾರೆ. 900 ಎಕರೆಗೂ ಹೆಚ್ಚು ಜಾಗವನ್ನ D ನೋಟಿಫಿಕೇಷನ್ ಮಾಡಿದ್ದಾರೆ. ಇದಕ್ಕಾಗಿ ಲೋಕಾಯುಕ್ತ ಮುಚ್ಚಿ, ಎಸಿಬಿ ತೆರೆದರು. ಇವರ ಬಲಗೈ ಬಂಟ ಕೆ.ಜೆ ಜಾರ್ಜ್‌ ನಗರಾಭಿವೃದ್ಧಿ ಸಚಿವರಾಗಿದ್ರು. 292 ಕೋಟಿ ವೈಟ್ ಟಾಪಿಂಗ್ ಎಸ್ಟಿಮೇಟ್ ಇತ್ತು, ಅದನ್ನ 374 ಕೋಟಿಗೆ ಹೆಚ್ಚಿಸುದ್ರು. ಯಾಕೆ 23% ಹೆಚ್ಚಳವಾಗಿ ಕೊಟ್ರು. ಹೇಳಿ ಜಾರ್ಜ್ ಅವರೇ ಯಾಕೆ, ಯಾವ ಉದ್ದೇಶಕ್ಕೆ ಹೆಚ್ಚಿಗೆ ಕೊಟ್ರಿ ಎಂದೂ ಸಚಿವ ಸುಧಾಕರ್‌ ಪ್ರಶ್ನೆ ಮಾಡಿದ್ದಾರೆ. 

ಈ ಮಧ್ಯೆ, ಇಂದಿರಾ ಕ್ಯಾಂಟೀನ್ ಆರಂಭಿಸಿ ಬಡವರಿಗೆ ಕೊಡುವ ಊಟದಲ್ಲೂ ಕಮೀಷನ್ ಹೊಡೆದ್ರಿ. ಅಲ್ಪಸಂಖ್ಯಾತರಿಗೆ, ದಲಿತರಿಗೆ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಿಲ್ಲ. ಲ್ಯಾಪ್ ಟಾಪ್ ಕೊಟ್ರಿ, ಲ್ಯಾಪ್ ಟಾಪಲ್ಲಿ ಭ್ರಷ್ಟಾಚಾರ ಆಗಿಲ್ವಾ? ವಸ್ತು ನಿಷ್ಠವಾಗಿ ಕೆಲಸ ಮಾಡಬೇಕು, ಇವರು ಸತ್ಯ ಹರಿಶ್ಚಂದ್ರ ಅಂತ ಹೇಳ್ತಾರೆ. ಸಿದ್ದರಾಮಯ್ಯನವರ ಆಪ್ತನ ಮನೆ ಮೇಲೆ 2017ರಲ್ಲಿ ರೇಡ್ ಆದಾಗ ಡೈರಿ ಸಿಗುತ್ತೆ. 1000 ಕೋಟಿ ಹೈಕಮಾಂಡ್‌ಗೆ ಹೇಗೆ ಹೋಯ್ತು. ಧರ್ಮದ ಹಣ ಹೋಯ್ತಾ? ಬಜೆಟ್ ಮೂಲಕವೇ ಸ್ಪೆಷಲ್ ಅಲೋಯನ್ಸ್ ಅಂತ ಬಜೆಟ್ ಮೂಲಕವೇ ಹೋಯ್ತಾ..? ನಿಮ್ಮ ಸಿಎಂ, ಸಚಿವರು, ಅಧಿಕಾರಿಗಳ ಮೇಲೆ ಬರೀ ದೂರು ದಾಖಲಾಗಿಲ್ಲ. ಪಿಎಸ್ಐ ಸ್ಕ್ಯಾಮ್ ಆಗಿದೆ ಅಂತ ಹೇಳ್ತೀರಿ. ಇದು ನಿಮ್ಮ ಕಾಲದಲ್ಲೇ ಆಗಿದ್ದು, ಕಸ ವಿಲೇವಾರಿ ಮಾಡೋದ್ರಲ್ಲೂ 1,066 ಕೋಟಿ ರೂ.  ಹಗರಣ ಮಾಡಿದ್ದಾರೆ.

2015-16ರಲ್ಲಿ 385ಕೋಟಿ ಖರ್ಚಾಗಿದೆ‌. ಕೇವಲ ಒಂದೇ ವರ್ಷದಲ್ಲಿ 681ಕೋಟಿ ಹೆಚ್ಚಾಗಿದೆ. ಇದು ಯಾವ ಸ್ಕೀಮ್, ಎಷ್ಟು ಪರ್ಸೆಂಟ್ ಆಗಿದೆ ಹೇಳಿ? ಬೆಂಗಳೂರಿಗೆ ಹೊರ ಹೋಗುವ ಕಸ ಮಾಯ ಆಗಿ ಹೋಯ್ತಾ? ನಾನು ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಅಧ್ಯಕ್ಷನಾಗಿದ್ದಾಗ ನೋಡಿದ್ದೇನೆ. ಆ ಪ್ರದೇಶದ ಜನ ರೋಗಗ್ರಸ್ತರಾಗಿದ್ರು ಎಂದೂ ರಾಜ್ಯ ಆರೋಗ್ಯ ಸಚಿವ ಕೆ. ಸುಧಾಕರ್ ಕಾಂಗ್ರೆಸ್‌ ವಿರುದ್ಧ ಟೀಕೆ ಮಾಡಿದ್ದಾರೆ. 

click me!